Recent Posts

Monday, January 20, 2025
ಕ್ರೀಡೆ

ಕೋಡಿ ಫ್ರೆಂಡ್ಸ್ ಮಾಣಿ ಇದರ ವತಿಯಿಂದ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಟ – ಕಹಳೆ ನ್ಯೂಸ್

ಕ್ರೀಡಾಭಿಮಾನಿಗಳೇ,ಕೋಡಿ ಫ್ರೆಂಡ್ಸ್ ಮಾಣಿ ಇದರ ವತಿಯಿಂದ 12ನೇ ವರ್ಷದ ಅಂಗವಾಗಿ ದಿನಾಂಕ 25-01-2020ರಂದು ಹೊನಲು ಬೆಳಕಿನ ಮುಕ್ತ ವಿಭಾಗದ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಟ ನಡೆಯಲಿದೆ.ಮುಖ್ಯ ಅಥಿತಿಗಳಾಗಿ ಬಂಟ್ವಾಳ ವಿಧಾನಸಭಾ ಜನಪ್ರಿಯ ಶಾಸಕರಾದ ಉಳಿಪ್ಪಾಡಿ ರಾಜೇಶ್ ನಾಯ್ಕ ಪಾಲ್ಗೊಳ್ಳಲಿದ್ದರೆ.

ಸಂಜೆ 7.00ಗಂಟೆಗೆ ಸರಿಯಾಗಿ ಸ್ಥಳೀಯ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟ ನಡೆಯಲಿದೆ.ಎಲ್ಲಾ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಆದರದ ಸ್ವಾಗತ. ಇನ್ನು ಕಬಡ್ಡಿ ಪಂದ್ಯಾಟದ ಬಹುಮಾನವಾಗಿ ಪ್ರಥಮ 10020, ದ್ವಿತೀಯ 6020, ತೃತೀಯ 2020, ಚತುರ್ಥ 2020 ಹಾಗೂ ಕೋಡಿ ಫ್ರೆಂಡ್ಸ್ ಟ್ರೋಫಿ ನೀಡಲಾಗುವುದು. ಜೊತೆಗೆ ಉತ್ತಮ ದಾಳಿಗಾರ, ಹಿಡಿತಗಾರ, ಸವ್ಯಸಾಚಿ ಬಹುಮಾನ ನೀಡಿ ಗೌರವಿಸಲಾಗುವುದು. ವಾಲಿಬಾಲ್ ಪಂದ್ಯಾಟದ ಬಹುಮಾನ ಪ್ರಥಮ 5020, ದ್ವಿತೀಯ 3020, ತೃತೀಯ 1020, ಚತುರ್ಥ 1020 ಹಾಗೂ ಕೋಡಿ ಫ್ರೆಂಡ್ಸ್ ಟ್ರೋಫಿ ನೀಡಲಾಗುವುದು. ಹಾಗೂ ವಯಕ್ತಿಕ ಬಹುಮಾನ ನೀಡಿ ಗೌರವಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು