Recent Posts

Monday, January 20, 2025
ಸುದ್ದಿ

ಪುತ್ತೂರಿನ ಕಾಂಪ್ಕೋ ಚಾಕ್ಲೆಟ್ ಕಾರ್ಖಾನೆಯ ನೌಕರ ದಿನೇಶ್ ಆತ್ಮಹತ್ಯೆ । ಕಾರಣವಿನ್ನೂ ನಿಗೂಢ !-ಕಹಳೆ ನ್ಯೂಸ್

ಪುತ್ತೂರಿನ ಕಾಂಪ್ಕೋ ಚಾಕ್ಲೆಟ್ ಕಾರ್ಖಾನೆಯ ನೌಕರ ದಿನೇಶ್ ಆತ್ಮಹತ್ಯೆ । ಕಾರಣವಿನ್ನೂ ನಿಗೂಢ !

ಪುತ್ತೂರಿನ ಕಾಂಪ್ಕೋ ಚಾಕ್ಲೆಟ್ ಕಾರ್ಖಾನೆಯಲ್ಲಿ ಕಳೆದ 20 ವರ್ಷಗಳಿಗಿಂತಲೂ ಧೀರ್ಘಕಾಲ ಕೆಲಸಮಾಡುತ್ತಿದ್ದ ದಿನೇಶ್ ಎಂಬ ನೌಕರ ಮಂಗಳವಾರ
ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಆತನನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ಆ ಕೂಡಲೇ ಸೇರಿಸಲಾಗಿತ್ತು. ನಿನ್ನೆ ಅವರ ಪರಿಸ್ಥಿತಿ ಬಿಗಡಾಯಿಸಿದ ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಇಂಡಿಯನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಆತ ನಿನ್ನೆ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಮಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾಜಿಕವಾಗಿ ಬಹಳಷ್ಟು ಆಕ್ಟಿವ್ ಆಗಿದ್ದ ದಿನೇಶರಿಗೆ ಅಂತಹ ಹೇಳಿಕೊಳ್ಳುವ ಸಮಸ್ಯೆಯಿರಲಿಲ್ಲ. ಆತನ ಸಾವು ಮನೆಯವರನ್ನು, ಆತನ ಗೆಳೆಯರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ದಿಗ್ಭ್ರಮೆಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆತನ ಈ ಅಸಹಜ ನಡವಳಿಕೆಗೆ ಕಾರಣವಿನ್ನೂ ಹೊರಬರಬೇಕಿದೆ.