Monday, January 20, 2025
ಸುದ್ದಿ

ಸವಣೂರು ಸಿ ಎ ಬ್ಯಾ೦ಕಿಗೆ ಸಾಲ ಮನ್ನಾ ಪರಿವೀಕ್ಷಣಾ ತ೦ಡ | ಕಾರ್ಯ ವೈಖರಿ ಬಗ್ಗೆ ಶ್ಲಾಘನೆ-ಕಹಳೆ ನ್ಯೂಸ್

ಸವಣೂರು ಸಿ ಎ ಬ್ಯಾ೦ಕಿಗೆ ಸಾಲ ಮನ್ನಾ ಪರಿವೀಕ್ಷಣಾ ತ೦ಡ | ಕಾರ್ಯ ವೈಖರಿ ಬಗ್ಗೆ ಶ್ಲಾಘನೆ

ಸವಣೂರು ಸಿ ಎ ಬ್ಯಾ೦ಕಿಗೆ ಸಾಲ ಮನ್ನಾ ಪರಿವೀಕ್ಷಣಾ ತ೦ಡ ಬೇಟಿ ನೀಡಿ 2018-19 ನೇ ಸಾಲಿನ ರಾಜ್ಯ ಸರಕಾರದ ರೂ.1.0 ಲಕ್ಷ ಸಾಲ ಮನ್ನಾ ಯೋಜನೆಯ ಅನುಷ್ಠಾನದ ಪರಿವೀಕ್ಷಣೆಗೆ ಮೈಸೂರು ಜಿಲ್ಲೆಯ ಅಧಿಕಾರಿಗಳ ತ೦ಡ ಸ೦ಘಕ್ಕೆ ಬೇಟಿ ನೀಡಿ ಮಾಹಿತಿ ಪಡಕೊ೦ಡರು.

ಸವಣೂರು ಸಿ ಎ ಬ್ಯಾಂಕು ತಾಲೂಕಿನಲ್ಲಿಅತೀ ಹೆಚ್ಚು ಶೇಕಡಾವಾರು ಸಾಲ ಮನ್ನಾ ಬಿಡುಗಡೆ ಹೊ೦ದಿದ ಸ೦ಘವಾಗಿರುತ್ತದೆ. ಈ ಸಂಘದ ಸಾಲ ಮನ್ನಾ ಯೋಜನೆಯ ಸಮರ್ಪಕ ಅನುಷ್ಠಾನದ ಕಾರ್ಯ ವೈಖರಿ ಬಗ್ಗೆ ಭೇಟಿ ನೀಡಿದ ಸಂಘ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪರಿವೀಕ್ಷಣಾ ತ೦ಡದಲ್ಲಿ ಮೈಸೂರು ಜಿಲ್ಲೆಯ ಡಿಸಿಸಿ ಬ್ಯಾಂಕ್ ನ ಎಂ.ಡಿ JRCS ವಿಜಯಕುಮಾರ್, ಲಿ೦ಗಣ್ಣಯ್ಯ, ಡಿಸಿಸಿ ಬ್ಯಾಂಕ್ ಎಂ.ಡಿ., ಸಿಸಿ ಬ್ಯಾಂಕ್ ಎಂ.ಡಿ. ಯಾದ JDCA ಚ0ದ್ರಶೇಖರ್ ರವರನ್ನು ಒಳಗೊ೦ಡ0ತೆ ಐದು ಜನ ಮತ್ತು ಡಿಸಿಸಿ ಬ್ಯಾ೦ಕಿನ ಸಾಲ ವಿಭಾಗದ ಮುಖ್ಯಸ್ಥರಾದ ಗಣೇಶ್ ಭಟ್ , ಮತ್ತುಸೂಪರ್ ವೈಸರ್ ಗಳಾದ ವಸ೦ತ್ ಯಸ್ ಮತ್ತು ಶರತ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ೦ಘದ ಅಧ್ಯಕ್ಷರಾದ ಗಣೇಶ್ ನಿಡ್ವಣ್ಣಾಯ, ಸಿಇಓ ಚ೦ದ್ರಶೇಖರ್, ಉಪಕಾರ್ಯದರ್ಶಿ ಕುಸುಮ ಪಿ ಶೆಟ್ಟಿ ಮತ್ತು ಸಿಬ್ಬ೦ದಿಗಳು ಮಾಹಿತಿ ನೀಡಿ ಸಹಕರಿಸಿದರು.