Sunday, November 24, 2024
ಸುದ್ದಿ

ಸಂಗೀತದಿಂದ ಭಾರತದ ಸಂಸ್ಕøತಿ ಚಿರಂತನವಾಗಿದೆ: ಕೊಂಡೆವೂರು ಶ್ರಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ-ಕಹಳೆ ನ್ಯೂಸ್.

ಮಂಜೇಶ್ವರ : ಸಂಗೀತವೆಂಬುದು ಶೂನ್ಯದಿಂದ ಶೂನ್ಯವಲ್ಲ. ಅದು ಪೂರ್ಣತ್ವದ ಸಂಕೇತ. ಸಂಗೀತ ಆತ್ಮ ಸುಖವನ್ನು ಕೊಡುವಂತದದ್ದು.

ಈ ಮೂಲಕ ಭಾರತೀಯ ಸಂಸ್ಕøತಿ ಚಿರಂತನವಾಗಿದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಾಮಂಜೂರು ಚೆಕ್‍ಪೋಸ್ಟ್‍ನಲ್ಲಿರುವ ಶ್ರೀ ಗುರು ನರಸಿಂಹ ಕಲ್ಯಾಣ ಮಂಟಪದಲ್ಲಿ ‘ರಾಗ ಸುಧಾ’ ಗೋವಿಂದನಗರ ಅಂಗಡಿಪದವು ಹೊಸಂಗಡಿ ಇದರ 3ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ‘ಸಂಗೀತಾರ್ಪಣಾಂ’ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಸಂಗೀತ ಮನುಷ್ಯನನ್ನು ಮಾತ್ರ ಮುದಗೊಳಿಸದೇ ಗೋವು, ಸಸ್ಯ ಇವುಗಳನ್ನೂ ಮುದಗೊಳಿಸುತ್ತದೆ. ಹಾಗೂ ಸಂಗೀತ ಮನುಷ್ಯನಲ್ಲಿ ಉತ್ತಮ ಸಂಸ್ಕಾರವನ್ನು ಮೂಡಿಸುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುಗಳಾದ ಶ್ರೀಮತಿ ಶಿಲ್ಪಾ ವಿಶ್ವನಾಥ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಮಂಗಳೂರು ನಾದ ಸರಸ್ವತಿ ಸಂಗೀತ ವಿದ್ಯಾಲಯದ ಸಂಗೀತ ಗುರುಗಳಾದ ವಿದುಷಿ ಶ್ರೀಮತಿ ಸತ್ಯವತಿ ಮೂಡಂಬಡಿತ್ತಾಯ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ರಾಮಚಂದ್ರ ಪುರ ಮಠ ಮಂಗಳೂರು ಮಂಡಲ ಅಧ್ಯಕ್ಷ ಗಣೇಶ ಮೋಹನ ಕಾಶಿಪಠ ವಹಿಸಿದರು.

ಸಂಗೀತ ಗುರುಗಳಾದ ಉಂಡೆಮನೆ ವಿದ್ವಾನ್ ನಾರಾಯಣ ಶರ್ಮ ಶುಭಾಶಂಸನೆಗೈದರು. ರಾಗ ಸುಧಾ ಅಂಗಡಿಪದವಿನ ಸಂಗೀತ ಗುರುಗಳಾದ ಶ್ರೀಮತಿ ಶಿಲ್ಪಾ ವಿಶ್ವನಾಥ ಭಟ್ ಉಪಸ್ಥಿತರಿದ್ದರು..

ಬೆಳಗ್ಗೆ ರಾಗಸುಧಾದ ವಿದ್ಯಾರ್ಥಿಗಳಿಂದ ‘ಸಂಗೀತಾರ್ಪಣಂ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಸಂಗೀತ ಗುರುಗಳಾದ ಶ್ರೀಮತಿ ಶಿಲ್ಪಾ ವಿಶ್ವನಾಥ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮೃದಂಗದಲ್ಲಿ ಮುರಲಿ ಕೃಷ್ಣ ಕುಕ್ಕಿಲ ಮತ್ತು ಶಿಷ್ಯಂದಿರು ಹಾಗೂ ವಯಲಿನ್‍ನಲ್ಲಿ ಶ್ರೀಮತಿ ಜ್ಯೋತಿ ಲಕ್ಷ್ಮೀ ಅಮೈ ಮತ್ತು ಶಿಷ್ಯಂದಿರು ಕಾರ್ಯಕ್ರಮ ನಡೆಸಿ ಕೊಟ್ಟರು. ಸಂಜೆ ವಿದುಷಿ ಶ್ರೀಮತಿ ಆರ್ಥಾ ಶಶಾಂಕ್‍ರವರಿಂದ ಭರತನಾಟ್ಯ ಕಾರ್ಯಕ್ರಮ ನೃತ್ಯಾರ್ಪಣಾಂ ನಡೆಯಿತು. ನಟುವಾಂಗದಲ್ಲಿ ವಿದುಷಿ ಅಯನಾ ಪೆರ್ಲ, ಹಾಡುಗಾರಿಕೆಯಲ್ಲಿ ಶ್ರೀಮತಿ ಶಿಲ್ಪಾ ವಿಶ್ವನಾಥ ಭಟ್, ಮೃದಂಗದಲ್ಲಿ ಶ್ರೀ ಭಾರ್ಗವ ಕುಂಜತ್ತಾಯ ಮಲ್ಲರ, ಕೊಳಲಿನಲ್ಲಿ ಅಭಿಷೇಕ. ಎಮ್.ಎಸ್ ಸಹಕರಿಸಿದರು. ಮೀಯಪದವು ಎ.ಯು.ಪಿ ಶಾಲಾ ಅಧ್ಯಾಪಕ ಮಹಾಬಲೇಶ್ವರ ಭಟ್ ಸ್ವಾಗತಿಸಿ, ಅಧ್ಯಾಪಕರಾದ ಪ್ರಕಾಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿ, ನಿವೃತ್ತ ಮುಖ್ಯೋಪಾಧ್ಯಾಯ ಟಿ.ಡಿ. ಸದಾಶಿವರಾವ್ ವಂದಿಸಿದರು.