ಬೆಂಗಳೂರು: ಸದಾ ಹೊಸ ಅನ್ವೇಷಣೆಯಲ್ಲಿ ಇರುವ ಭಾರತೀಯ ಬಾಹ್ಯಕಾಶ ಸಂಸ್ಥೆ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಸಾಹಸಕ್ಕೆ ಸಜ್ಜಾಗಿದೆ.
2021 ಜೂನ್ ತಿಂಗಳಲ್ಲಿ ಮಾನವ ಸಹಿತ ಬಾಹ್ಯಾಕಾಶಕ್ಕೆ ಗಗನಯಾನ ನಡೆಯಲಿದ್ದು, ಇದರ ಪೂರ್ವ ಪರೀಕ್ಷೆಗೆ ‘ವ್ಯೋಮಾಮಿತ್ರ’ ಎಂಬ ಮಾನವ ರೂಪಿ ಲೇಡಿ ರೋಬೋ ತಯಾರಾಗಿದೆ. ಈ ರೋಬೋ ಬಾಹ್ಯಾಕಾಶದಲ್ಲಿ ಮಾನವ ನಡೆಸುವ ಎಲ್ಲಾ ಚಟುವಟಿಕೆಗಳನ್ನು ನಿಖರವಾಗಿ ಮಾಡಲಿದ್ದು, ಪರಿಸರ ನಿಯಂತ್ರಿತ ಜೀವರಕ್ಷಕ ವ್ಯವಸ್ತೆಯನ್ನೂ ನಿರ್ವಹಿಸುತ್ತದೆ ಎಂದು ಇಸ್ರೋದ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.