ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ನಲ್ಲಿ “ಸರ್ಕಾರಿ ಉದ್ಯೋಗ ನನ್ನ ಕನಸು” ತರಬೇತಿ ಕಾರ್ಯಗಾರ- ಕಹಳೆ ನ್ಯೂಸ್
ಪುತ್ತೂರು; ಸರಕಾರಿ ಉದ್ಯೋಗವನ್ನು ಯಾರು ತಾನೆ ಬೇಡ ಅಂತಾರೆ?. ಎಲ್ಲರೂ ಬಯಸೋದೆ ಸರಕಾರಿ ಉದ್ಯೋಗ. ವಿಪರ್ಯಾಸ ಎಂದರೆ ಸರಕಾರಿ ಉದ್ಯೋಗ ಹಲವರಿಗೆ ಕನಸಾಗಿಯೇ ಉಳಿಯುವುದು. ಹೌದು, ಸರಕಾರಿ ಉದ್ಯೋಗ ಪಡೆಯುವುದು ಅಷ್ಟೊಂದು ಸುಲಭದ ಕೆಲಸವಲ್ಲ.
ನಮ್ಮ ಸಾಧನೆ. ಓದು, ಪರಿಶ್ರಮ ಕೂಡ ಅಷ್ಟೇ ಇರಬೇಕು. ಜೊತೆಗೆ ಉತ್ತಮ ಮಾರ್ಗದರ್ಶಕರೂ ಬೇಕು. ಆ ಉತ್ತಮ ಮಾರ್ಗದರ್ಶನ ಅವಕಾಶ ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಇಲ್ಲಿಯ ವಿದ್ಯಾರ್ಥಿಗಳಿಗೆ ಲಭಿಸಿದೆ.
ಹೌದು, ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯವರು ಎಲ್ಲಾ ಸರಕಾರಿ ಕಾಲೇಜಿಗಳಿಗೆ ಉಚಿತವಾಗಿ ಸರಕಾರಿ ಉದ್ಯೋಗದ ಮಾಹಿತಿ ನೀಡುವ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ವಿದ್ಯಾರ್ಥಿಗಳಿಗೆ ಪುತ್ತೂರಿನ ನಾರಾಯಣ ಗುರು ಸಭಾಭವನದಲ್ಲಿ ಸರಕಾರಿ ಉದ್ಯೋಗದ ಮೂಲಕ ಭವ್ಯ ಭವಿಷ್ಯ ಕಟ್ಟಿಕೊಳ್ಳುವ ಬಗ್ಗೆ ಸಲಹೆ ನೀಡಿದರು.
ಕಾರ್ಯಗಾರದ ಮುಖ್ಯ ತರಬೇತುದಾರ ನೈರುತ್ಯ ರೈಲ್ವೇಯ ಶ್ರೀ ಕೆ.ಡಿ.ಸಿಂಧೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿತ್ತಾ, ಇಂದಿನ ಆಧುನಿಕ ಬದುಕಿಗೆ ಸರ್ಕಾರಿ ಉದ್ಯೋಗ ಅನಿವಾರ್ಯ. ಶ್ರದ್ಧೆಯ ಓದು, ಸಮಯದ ಮಹತ್ವ, ಆತ್ಮವಿಶ್ವಾಸ, ಸಾಧನೆ ಮಾಡುವ ವಿಧಾನ, ಸ್ಮರಣ ಶಕ್ತಿ ಸೂತ್ರಗಳು, ನ್ಯುಮೆರಿಕಲ್ ಎಬಿಲಿಟಿ ಪ್ರಶ್ನೆಗಳನ್ನು ಸುಲಭದಲ್ಲಿ ಉತ್ತರಿಸುವ ವಿಧಾನ ತಿಳಿಸಿಕೊಟ್ಟರು. ಈ ಕಾರ್ಯಗಾರದಲ್ಲಿ ಪಾಲ್ಗೊಂಡ 350ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಮಾಹಿತಿಯ ಲಾಭ ಪಡೆದರು.
ಕಾರ್ಯಕ್ರಮದ ಅಧ್ಯಕ್ಷರಾದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಪ್ರೊ| ಝೇವಿಯರ್ ಡಿ’ಸೋಜ ಮಾತನಾಡಿ, ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯವರು ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ತರಬೇತಿ ಕಾರ್ಯಗಾರ ನಡೆಸುತ್ತಿರುವುದು ನಿಜಕ್ಕೂ ಇವರಿಗೆ ಗ್ರಾಮೀಣ ಮಕ್ಕಳ ಮೇಲೆ ಇರುವ ಕಾಳಜಿ. ಅಲ್ಲದೆ ವಿದ್ಯಾರ್ಥಿಗಳನ್ನು ಸರ್ಕಾರಿ ಉದ್ಯೋಗ ಪರೀಕ್ಷೆಗಳಿಗೆ ತಯಾರು ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಜೀವನದಲ್ಲಿ ನಿರಂತರ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿದ್ದಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.
ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಯಾವುದೇ ಸಮಯದಲ್ಲೂ ಕೂಡ ಉದ್ಯೋಗ ಮಾಹಿತಿ ಮತ್ತು ತರಬೇತಿಯನ್ನು ನೀಡಲು ಸದಾಸಿದ್ದ. ಈ ನಿಟ್ಟಿನಲ್ಲಿ ದಶಮಾನೋತ್ಸವದ ಸಂಭ್ರಮದಲ್ಲಿರುವ ಸಂಸ್ಥೆಯು ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬಹುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಗಣೇಶ್ ಕೈಂದಾಡಿಯವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರಾದ ಪ್ರೊ| ಐವನ್ ಫ್ರಾನ್ಸಿಸ್ ಲೋಬೋ ಮತ್ತು ಪ್ರೊ| ಸ್ಟೀಫನ್ ಕ್ವಾಡ್ರಸ್ ಭಾಗವಹಿಸಿದ್ದರು. ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಸಂಚಾಲಕಿ ಶ್ರೀಮತಿ ಪ್ರಫುಲ್ಲ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳ ಕಿರುಪರಿಚಯವನ್ನು ನೀಡಿ, ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ನಡೆದುಬಂದ ದಾರಿ, ದಶಮಾನೋತ್ಸವದ ಸಂಭ್ರಮಕ್ಕೆ ಕಾರಣರಾದಂತಹ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು ಹಾಗೂ ಐ.ಆರ್.ಸಿ.ಎಂ.ಡಿ ನಡೆಸಿಕೊಂಡು ಬರುತ್ತಿರುವ ಉಚಿತ ತರಬೇತಿ ಕಾರ್ಯಗಾರ, ಉದ್ಯೋಗಮೇಳ, ಉದ್ಯೋಗ ಮಾಹಿತಿ ಇವುಗಳ ಪೂರ್ಣ ಮಾಹಿತಿ ನೀಡಿದರು.
ಸಂಸ್ಥೆಯ ಉಪನ್ಯಾಸಕಿಯರಾದ ಕು.ರಮ್ಯ.ಎಂ ಸಂಪನ್ಮೂಲ ವ್ಯಕ್ತಿಗಳ ಕಿರುಪರಿಚಯವನ್ನು ನೀಡಿದರು. ಕು.ರಶ್ಮಿತಾ.ಎಂ ಕಾರ್ಯಕ್ರಮವನ್ನು ನಿರೂಪಿಸಿ. ಕು.ರಮ್ಯ.ಯು ವಂದಣಾರ್ಪಣೆಗೈದರು.