ಬೀದರ್ ನಗರದ ಪ್ರತಿಷ್ಠಿತ ಶಾಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ನಾಟಕ ಪ್ರದರ್ಶಿಸಲಾಗಿದ್ದು, ಇದರಲ್ಲಿ ಪ್ರಧಾನಿ ಮೋದಿ ಅವರನ್ನು ಅವಮಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಶಾಲಾ ಮಕ್ಕಳು ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕ ಪ್ರದರ್ಶಿಸಿದ್ದು, ಮೋದಿ ನಮ್ಮ ಪೋಷಕರಿಗೆ ಕಾಗದ ಪತ್ರ ತೋರಿಸಿ ಎಂದು ಕೇಳುತ್ತಾರೆ. ನಾನು ಮೋದಿಗೆ ಕೇಳುತ್ತೇನೆ, ಅವರ ಕಾಗದ ಪತ್ರ ಎಲ್ಲಿದೆ? ಎಂದು ಸಂಭಾಷಣೆ ಇರುವ ನಾಟಕ ಪ್ರದರ್ಶಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಕ್ಕಳಿಂದ ನಾಟಕ ಪ್ರದರ್ಶಿಸಿ ಅದರಲ್ಲಿ ಮೋದಿ ಅವಮಾನಿಸಲಾಗಿದೆ ಎನ್ನಲಾಗಿದ್ದು, ಈ ವಿಡಿಯೋ ವೈರಲ್ ಆಗಿದೆ. ನಾಟಕದಲ್ಲಿ ಪ್ರಧಾನಿ ಮೋದಿ ಅವರನ್ನು ಅವಮಾನಿಸಿದ ಬಗ್ಗೆ ತೀವ್ರ ಆಕ್ರೋಶ, ವಿರೋಧ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.