ಪಶ್ಚಿಮ ಬಂಗಾಳ: ಸೆಲ್ಫಿ ಹುಚ್ಚಾಟಕ್ಕೆ ಹಲವು ಜೀವಗಳು ಈಗಾಗಲೇ ಬಲಿಯಾಗಿವೆ. ಆದರೂ ಎಚ್ಚೆತ್ತುಕೊಳ್ಳದ ಯುವ ಜನತೆ ಎಲ್ಲೆಂದರಲ್ಲಿ, ಅಪಾಯಕಾರಿ ತಾಣಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಹಾಗೆಯೇ ಸೆಲ್ಫಿ ಕ್ಲಿಕ್ ಮಾಡುವ ವೇಳೆ ರೈಲು ಢಿಕ್ಕಿಯಾಗಿ 21 ವರ್ಷದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಜಲ್ ಪೈಗುರಿ ಜಿಲ್ಲೆಯಲ್ಲಿ ನಡೆದಿದೆ.
ವಿದ್ಯಾರ್ಥಿನಿ ಸ್ನೇಹಿತೆ ನದಿಗೆ ಹಾರಿ ಗಂಭೀರ ಗಾಯಗೊಂಡಿದ್ದಾಳೆ. ಓಡ್ಲಾಬರಿ ಪ್ರದೇಶದ ಗೀಸ್ ನದಿಯ ರೈಲ್ವೇ ಬ್ರಿಡ್ಜ್ ನಲ್ಲಿ ಈ ಘಟನೆ ನಡೆದಿದೆ.
ಇಬ್ಬರು ವಿದ್ಯಾರ್ಥಿನಿಯರು ರೈಲ್ವೇ ಬ್ರಿಡ್ಜ್ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಪ್ಯಾಸೆಂಜರ್ ರೈಲು ಬಂದಿದ್ದು ಗಮನಿಸದೆ ಫೋಟೋ ತೆಗೆಯುತ್ತಿದ್ದ ಪರಿಣಾಮ ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ವಿದ್ಯಾರ್ಥಿನಿ ನದಿಗೆ ಹಾರಿ ಗಂಭಿರ ಗಾಯಗೊಂಡಿದ್ದಾಳೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.