Wednesday, November 27, 2024
ಸುದ್ದಿ

ಈರುಳ್ಳಿ ಬೆಲೆಯಲ್ಲಿ ಮತ್ತಷ್ಟು ಇಳಿಕೆ ನಿರೀಕ್ಷೆ, ಹೆಚ್ಚಾಗಲಿದೆ ಉತ್ಪಾದನೆ!-ಕಹಳೆ ನ್ಯೂಸ್

ಜನಸಾಮಾನ್ಯರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಬೆಲೆಯು ಈಗಾಗಲೇ ತಕ್ಕಮಟ್ಟಿಗೆ ತಗ್ಗಿದ್ದು ಈ ವರ್ಷದಲ್ಲಿ ಹಿಂದಿನ ರೀತಿಯಲ್ಲಿ ಬೆಲೆ ಏರಿಕೆ ತಟ್ಟುವುದಿಲ್ಲ ಎಂಬುದು ಕೇಂದ್ರ ಸರ್ಕಾರದ ಭರವಸೆಯಾಗಿದೆ.

ಅಂದರೆ 2019-20ರ ವರ್ಷದಲ್ಲಿ ಈರುಳ್ಳಿ ಉತ್ಪಾದನೆ ಹೆಚ್ಚಾಗಲಿದ್ದು, ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ

 

ಜಾಹೀರಾತು
ಜಾಹೀರಾತು
ಜಾಹೀರಾತು

ಈರುಳ್ಳಿ ಉತ್ಪಾದನೆಯಲ್ಲಿ 7 ಪರ್ಸೆಂಟ್‌ನಷ್ಟು ಏರಿಕೆಯಾಗಲಿದ್ದು, 2.44 ಕೋಟಿ ಟನ್‌ಗಳಿಗೆ ತಲುಪಲಿದೆ. ಇದೇ 2018-19ರ ಅವಧಿಯಲ್ಲಿ 2.28 ಕೋಟಿ ಟನ್‌ಗಳಷ್ಟು ಉತ್ಪಾದನೆ ಆಗಿತ್ತು. ಜುಲೈ-ಜೂನ್ ಅವಧಿಯಲ್ಲಿ 1.29 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.22 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು ಎಂದು ಕೃಷಿ ಸಚಿವಾಲಯ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶದಲ್ಲಿ ಹೆಚ್ಚು ಈರುಳ್ಳಿ ಉತ್ಪಾದನೆ ಪ್ರದೇಶದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಮತ್ತು ಸರಿಯಾದ ಸಮಯದಲ್ಲಿ ಮಳೆ ಬಾರದೆ ಇದ್ದುದ್ದರಿಂದ ಕಳೆದ ವರ್ಷ 22 ಪರ್ಸೆಂಟ್‌ನಷ್ಟು ಬೆಳೆ ಹಾನಿಯಾಗಿತ್ತು. ಇದರಿಂದಾಗಿ ಪೂರೈಕೆ ವ್ಯತ್ಯಯವಾಗಿ ಬೇಡಿಕೆ ಹೆಚ್ಚಾಗಿದ್ದರಿಂದ ಈರುಳ್ಳಿ ಬೆಲೆಯು ಗಗನಕ್ಕೇರಿತ್ತು.

ಈಗಾಗಲೇ ಕೇಂದ್ರ ಸರ್ಕಾರ ವಿದೇಶಗಳಿಂದ 36,000 ಟನ್‌ಗಳಷ್ಟು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ 18,500 ಟನ್‌ಗಳಷ್ಟು ಈರುಳ್ಳಿ ಆಮದಾಗಿದ್ದು, ಇನ್ನು ಕೆಲವು ವಾರಗಳಲ್ಲಿ ಮತ್ತಷ್ಟು ಈರುಳ್ಳಿ ಆಮದಾಗಲಿದೆ. ಕೆಜಿಗೆ 200 ರುಪಾಯಿವರೆಗೂ ತಲುಪಿದ್ದ ಈರುಳ್ಳಿ ಬೆಲೆಯು ತಗ್ಗಿದ್ದು 60-70 ರುಪಾಯಿ ಆಸುಪಾಸಿನಲ್ಲಿದೆ.