ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಸಾಮಾನ್ಯ ಎನ್ನುವಂತಾಗಿದೆ. ಕ್ಷುಲ್ಲಕ ಕಾರಣಕ್ಕೆ ದಂಪತಿ ದೂರುವಾಗ್ತಿದ್ದಾರೆ. ಕೆಲವೊಮ್ಮೆ ವಿಚ್ಛೇದನ ಪಡೆದ ದಂಪತಿ ತಮ್ಮದೆ ಜಗತ್ತಿನಲ್ಲಿ ಖುಷಿಯಾಗಿ ಜೀವನ ಸಾಗಿಸುತ್ತಾರೆ.
ಮತ್ತೆ ಕೆಲವರು ಹಿಂದೆ ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಾರೆ. ಆತುರದಲ್ಲಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬಾರದು ಎಂಬುದಕ್ಕೆ ಈ ಮಹಿಳೆ ಉತ್ತಮ ನಿದರ್ಶನ.
ಚೀನಾದ ಜಿಯಾವು ಎರಡು ವರ್ಷಗಳ ಹಿಂದೆ ಪತಿಗೆ ವಿಚ್ಛೇದನ ನೀಡಿದ್ದಾಳೆ. ಕಾಲೇಜಿನಲ್ಲಿ ಇಬ್ಬರ ಪರಿಚಯವಾಗಿತ್ತಂತೆ. ಒಂದೇ ಕಚೇರಿಯಲ್ಲಿ ಕೆಲಸ ಮಾಡ್ತಿದ್ದವರು ನಂತ್ರ ಒಂದೇ ಮನೆಯಲ್ಲಿ ವಾಸ ಶುರು ಮಾಡಿದ್ದರಂತೆ. ಕೆಲ ದಿನಗಳ ನಂತ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರಂತೆ. ಜಿಯಾವು ಪತಿ, ಪತ್ನಿಯನ್ನು ಅತಿಯಾಗಿ ಪ್ರೀತಿ ಮಾಡ್ತಿದ್ದನಂತೆ.
ಜಿಯಾವು ಪ್ರಕಾರ, ಆಕೆಗೆ ಬ್ಯಾಗ್ ಕೊಡಿಸಲು ಒಂದು ದಿನ ಪತಿ ಉಪವಾಸವಿದ್ದನಂತೆ. ಆಕೆಯ ಪ್ರತಿಯೊಂದು ಮಾತಿಗೂ ಬೆಲೆ ನೀಡ್ತಿದ್ದ ಪತಿಯನ್ನು ಜಿಯಾವು ನೋಡುವ ದೃಷ್ಟಿ ಬದಲಾಗಿತ್ತಂತೆ. ಮನೆಯಲ್ಲಿ ತನ್ನದೆ ಆಗಬೇಕು ಎನ್ನುತ್ತಿದ್ದ ಜಿಯಾವು ಪತಿ ಮೇಲೆ ದಬ್ಬಾಳಿಕೆ ಶುರು ಮಾಡಿದ್ದಳಂತೆ. ಇದು ಮಿತಿಮೀರಿ ಜಿಯಾವು ವಿಚ್ಛೇದನಕ್ಕೆ ಮುಂದಾಗಿದ್ದಳಂತೆ. ಆಗ್ಲೂ ನಾನು ಒಳ್ಳೆ ಪತಿಯಾಗ್ಲಿಲ್ಲ, ಕ್ಷಮಿಸು ಎಂದು ಜಿಯಾವು ಪತಿ ಕ್ಷಮೆ ಕೇಳಿದ್ದನಂತೆ.
ಇದಾದ ನಂತ್ರ ಜಿಯಾವು ಅನೇಕರ ಜೊತೆ ಡೇಟಿಂಗ್ ಮಾಡಿದ್ದಾಳೆ. ಆದ್ರೆ ಯಾರೂ ತನ್ನ ಮಾಜಿ ಪತಿಯಷ್ಟು ಪ್ರೀತಿ ತೋರಲಿಲ್ಲ. ಆತನನ್ನು ಕಳೆದುಕೊಂಡ ಮೇಲೆ ಆತನ ಬೆಲೆ ಅರ್ಧವಾಗಿದೆ. ಆತ ಈಗ ಬೇರೆ ಯುವತಿಯನ್ನು ಮದುವೆಯಾಗಿ ಖುಷಿಯಾಗಿದ್ದಾನೆ. ನಾನು ಹಳೆ ತಪ್ಪಿಗೆ ಈಗ್ಲೂ ಕಣ್ಣೀರಿಡುತ್ತಿದ್ದೇನೆಂದು ಜಿಯಾವು ಬರೆದಿದ್ದಾಳೆ.