ಮಂಗಳೂರು ಪಂಪ್ ವೆಲ್ ಫ್ಲೈ ಓವರ್ ಉದ್ಘಾಟನೆಗೆ ಮುಹೂರ್ತ ಫಿಕ್ಸ್ : ಜ.31ರಂದು ಫ್ಲೈ ಓವರ್ ಉದ್ಘಾಟನೆ-ಕಹಳೆ ನ್ಯೂಸ್
ಮಂಗಳೂರು : ಅಂತೂ ಇಂತು ಮಂಗಳೂರು ಪಂಪ್ ವೆಲ್ ಫ್ಲೈ ಓವರ್ ಉದ್ಘಾಟನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 31ರಂದು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ. ಈ ಮೂಲಕ 10 ವರ್ಷಗಳ ಬಳಿಕ ಫ್ಲೈ ಓವರ್ ಸಂಚಾರಕ್ಕೆ ಮುಕ್ತವಾಗಲಿದೆ.
ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ಓಪನ್ ಆಗದೇ ಇದದ್ದಕ್ಕೇ, ಕಾಮಗಾರಿ ವಿಳಂಬದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಡಿ ಕಾರಿದ್ದರು. ಕಾಮಗಾರಿ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಅವರ ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೆಸಲಾಗಿತ್ತು.
ಈ ಎಲ್ಲಾ ಪ್ರತಿಭಟನೆಯ ನಂತ್ರ, ಮಂಗಳೂರಿನ ಪಂಪ್ ವೇಲ್ ಮೇಲ್ ಸೇತುವ ಕಾಮಗಾರಿ ಚುರುಕು ಪಡೆದಿತ್ತು. ಇದೀಗ ಇಂತಹ ಫ್ಲೈ ಓವರ್ ಕಾಮಗಾರಿ ಮುಕ್ತಾಗೊಂಡಿದ್ದು, ಸಾರ್ವಜನಿಕರ ಸಂಚಾರ ಸೇವೆಗೆ ಮುಕ್ತವಾಗಲು ಮುಹೂರ್ತ ಫಿಕ್ಸ್ ಆಗಿದೆ. ಜನವರಿ 31ರಂದು ಫ್ಲೈ ಓವರ್ ಉದ್ಘಾಟನೆಯಾಗಲಿದ್ದು, ಅಂದಿನಿಂದಲೇ ಸಾರ್ವಜನಿಕರ ಸಂಚಾರ ಸೇವೆಗೆ ಲಭ್ಯವಾಗಲಿದೆ.