Tuesday, November 19, 2024
ರಾಜಕೀಯ

ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಕೋವಿಂದ್ ಭಾಷಣ, ಇಲ್ಲಿದೆ ಹೈಲೈಟ್ಸ್-ಕಹಳೆ ನ್ಯೂಸ್

ನವದೆಹಲಿ,ಜ.31- ಪ್ರತಿಭಟನೆಗಳ ಸೋಗಿನಲ್ಲಿ ನಡೆಯುವ ಹಿಂಸಾಚಾರಗಳು ದೇಶವನ್ನು ದುರ್ಬಲಗೊಳಿಸುತ್ತದೆ ಎಂದು ವಿಷಾದದಿಂದ ನುಡಿದಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪರೋಕ್ಷವಾಗಿ ಬೆಂಬಲಿಸಬೇಕೆಂದು ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ. ಇದೊಂದು ಐತಿಹಾಸಿಕ ಕಾಯ್ದೆಯಾಗಿದ್ದು, ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಅವರು ತಮ್ಮ ಭಾಷಣದಲ್ಲಿ ಬಲವಾಗಿ ಸಮರ್ಥಿಸಿಕೊಂಡು ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ಸಂಸತ್‍ನಲ್ಲಿ ಇಂದಿನಿಂದ ಆರಂಭವಾದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ದೇಶದ ಪ್ರಥಮ ಪ್ರಜೆಯೂ ಆಗಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ತಮ್ಮ ಭಾಷಣದಲ್ಲಿ , ರಾಮಮಂದಿರ ತೀರ್ಪು, ತ್ರಿವಳಿ ತಲಾಕ್ ರದ್ದತಿ, ಜಮ್ಮುಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು, ಸಿಎಎ ಕಾಯ್ದೆ , ನವಭಾರತ ನಿರ್ಮಾಣ, ಆರ್ಥಿಕ ಅಭಿವೃದ್ದಿ ಸೇರಿದಂತೆ ಹತ್ತು ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರ ಕನಸು ನನಸಾಗಬೇಕಾದರೆ ಸಿಎಎ ಕಾಯ್ದೆ ದೇಶಾದ್ಯಂತ ಅನುಷ್ಠಾನವಾಗಬೇಕು. ಕಾಯ್ದೆ ಜಾರಿಯಾಗುವುದರಿಂದ ದೇಶದ ಯಾವುದೇ ನಾಗರಿಕರಿಗೂ ತೊಂದರೆಯಾಗುವುದಿಲ್ಲ. ನೀವು ಆತಂಕ ಪಡಬೇಕಾದ ಅಗತ್ಯವೂ ಇಲ್ಲ ಎಂದು ದೇಶವಾಸಿಗಳಿಗೆ ರಾಷ್ಟ್ರಪತಿ ಅಭಯ ನೀಡಿದರು. ಭಾರತದ ಸಂವಿಧಾನಕ್ಕೆ ಸರ್ವರು ಬದ್ದರಾಗಿರುವಂತೆ ದೇಶವಾಸಿಗಳಿಗೆ ಕರೆ ನೀಡಿದ ರಾಷ್ಟ್ರಪತಿ, ಸಿಎಎ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ತಮ್ಮ ಭಾಷಣದಲ್ಲಿ ನಯವಾಗಿಯೇ ಛಾಟಿ ಬೀಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ಸಂವಿಧಾನಕ್ಕೆ ಎಲ್ಲರೂ ಬದ್ದರಾಗಿರಬೇಕು, ಅದು ನಮ್ಮೆಲ್ಲರಿಗೂ ಅಭಿವೃದ್ದಿಯ ಮಾರ್ಗದರ್ಶನ ನೀಡುತ್ತದೆ. ಸಂವಿಧಾನವನ್ನು ನವೆಲ್ಲರೂ ಪಲಿಸುವುದರಿಂದ ದೇಶದ ಪ್ರಗತಿ ಸಾಧ್ಯ. ಆದರೆ ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚರ ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ. ಇದರಿಂದ ದೇಶ ದುರ್ಬಲಗೊಳ್ಳುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತ ಇಂದು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿಯತ್ತ ಮುನ್ನುಗ್ಗುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗುವತ್ತ ಸಾಗಿರುವುದು ಹೆಮ್ಮೆಯ ವಿಷಯ.

ನಾವು ಸಾಧಿಸಿರುವುದಕ್ಕಿಂತ ಇನ್ನು ಸಾಕಷ್ಟು ಸಾಧಿಸಬೇಕಿದೆ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೂಲ ಮಂತ್ರವನ್ನು ಮತ್ತೆ ಪುನರುಚ್ಚರಿಸಿರುವ ರಾಷ್ಟ್ರಪತಿಗಳು ದೇಶದ ಪ್ರತಿಯೊಬ್ಬ ನಾಗರಿಕನ ಸರ್ವಾಂಗೀಣ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ. ಇದು ನಮ್ಮ ಸರ್ಕಾರದ ಮೂಲ ಮಂತ್ರವೂ ಆಗಿದೆ ಎಂದು ತಿಳಿಸಿದರು.

ದೇಶದ ಜನತೆ ನಮ್ಮ ಸರ್ಕಾರಕ್ಕೆ ಅಭೂತಪೂರ್ವ ಜನಾದೇಶ ನೀಡಿದ್ದಾರೆ. ಇದು ನವಭಾರತ ನಿರ್ಮಾಣಕ್ಕಾಗಿ ನಮಗೆ ದೊರೆತ ಬೆಂಬಲವಾಗಿದೆ. ನಾವೆಲ್ಲರೂ ನವಭಾರತ ನಿರ್ಮಾಣಕ್ಕೆ ಸಂಪೂರ್ಣ ಬದ್ಧರಾಗಬೇಕೆಂದು ಅವರು ಸಲಹೆ ಮಾಡಿದರು. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಕೈಗೊಂಡ ಮಹತ್ವದ ನಿರ್ಧಾರಗಳನ್ನು ವಿವರಿಸಿದ ಅವರು, ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ನೀಡಲು ತ್ರಿವಳಿ ತಲಾಕ್ ರದ್ದು ಕಾಯ್ದೆ ಜಾರಿಗೊಳಿಸಲಾಗಿದೆ. ಶತಮಾನಗಳಿಂದ ಬಗೆಹರಿಯದಿದ್ದ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಸಮಸ್ಯೆ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದು ಅವರು ತಿಳಿಸಿದರು.

ಜಮ್ಮುಕಾಶ್ಮೀರಕ್ಕೆ ಭಾರತೀಯ ಸಂವಿಧಾನದಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನ (370ನೇ ವಿಧಿ) ರದ್ದುಗೊಳಿಸಿ ಸರ್ವರಿಗೂ ಸಮಾನವಕಾಶ ನೀಡಲಾಗಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಅಭಿವೃದ್ದಿಗೆ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟ ಮಾತುಗಳಲ್ಲಿ ಪುನರುಚ್ಚಿಸಿದ ಕೋವಿಂದ್, ಜಮ್ಮಕಾಶ್ಮೀರ ಮತ್ತು ಲಡಾಕ್ ಅಭಿವೃದ್ದಿಯೂ ಭಾರತದ ಪ್ರಗತಿಗೆ ಪೂರಕವಾಗಲಿದೆ ಎಂದು ನುಡಿದರು.

ಈ ದಶಕ ಭಾರತದ ಮಟ್ಟಿಗೆ ಅತ್ಯಂತ ಮಹತ್ವವಾದುದು. ಅಭಿವೃದ್ದಿ ಮತ್ತು ಪ್ರಗತಿ ದೃಷ್ಟಿಯಿಂದಲೂ ಹಾಗೂ ಮಹಾತ್ಮಗಾಂಧಿ ಮತ್ತು ನೆಹರುಗಳ ಕನಸುಗಳನ್ನು ಸಾಕಾರಗೊಳಿಸಲು ಈ ದಶಕ(2020) ಎಂದು ಹೇಳಿದರು. ಸರ್ವರ ವಿಕಾಸದಲ್ಲಿ ಕೇಂದ್ರ ಸರ್ಕಾರಕ್ಕೆ ಬಲವಾದ ನಂಬಿಕೆಯಿದೆ. ಸರ್ವಧರ್ಮಗಳ ಅಭಿವೃದ್ದಿ ನಮ್ಮ ಸರ್ಕಾರದ ಮೂಲ ಮಂತ್ರ. ಬಡವರು, ದಲಿತರು, ಮಹಿಳೆಯರು ಮತ್ತು ದುರ್ಬಲ ವರ್ಗಗಳ ರಕ್ಷಣೆ ನಮ್ಮ ಆದ್ಯತೆ ಎಂದು ರಾಮನಾಥ ಕೋವಿಂದ್ ಹೇಳಿದರು.

ಭಾರತ ಅನೇಕ ಕ್ಷೇತ್ರಗಳ ಶ್ರೇಯಾಂಕದಲ್ಲಿ ಬೆಳವಣಿಗೆಯಾಗಿರುವುದು ದೇಶದ ಸರ್ವಾಂಗೀಣ ಅಭಿವೃದ್ದಿಗೆ ಮುನ್ನುಡಿಯಾಗಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೂಲಕ ದೇಶದ ಕೋಟ್ಯಂತ ಜನರಿಗೆ ಅನೇಕ ಫಲಾನುಭವಗಳು ದೊರೆತಿವೆ ಎಂದು ವಿವರಿಸಿದರು.

ಪ್ರತಿಭಟನೆ:
ಇನ್ನು ರಾಷ್ಟ್ರಪತಿಯವರು ಸಿಎಎ ಕಾಯ್ದೆ ಬೆಂಬಲಿಸಬೇಕೆಂದು ತಮ್ಮ ಭಾಷಣದಲ್ಲಿ ಕರೆ ನೀಡುತ್ತಿದ್ದಂತೆ ಪ್ರತಿ ಪಕ್ಷ ಕಾಂಗ್ರೆಸ್ ದಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.