Monday, January 20, 2025
ಸುದ್ದಿ

?BREAKING NEWS ಪುತ್ತೂರು: ದರ್ಬೆ ಬಳಿಯ ಸಿ.ಟಿ.ಓ ರಸ್ತೆ ಬಳಿ ಸರ್ಕಾರಿ ಜಾಗದಲ್ಲಿ ಬೆಂಕಿ ಅವಘಡ- ಕಹಳೆ ನ್ಯೂಸ್

ಪುತ್ತೂರು: ಮುಖ್ಯ ರಸ್ತೆ ಮೂಲಕ ದರ್ಬೆ ಕಡೆಗಿನ ಮುಖ್ಯ ರಸ್ತೆಯಲ್ಲಿರುವ ಹರ್ಷ ಶಾಪಿಂಗ್ ಕಾಂಪ್ಲೆಕ್ಸ್ ನ ಹಿಂಭಾಗದ ಸಿ.ಟಿ.ಓ ರಸ್ತೆಯ ಸರ್ಕಾರಿ ಜಾಗದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಮಧ್ಯಾಹ್ನ 1ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಸ್ಥಳೀಯರು ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿ ಸಿಬ್ಬಂದಿಗಳು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗುವ ದಾರಿ ಇದಾಗಿದ್ದು ಯಾವುದೇ ಅಪಾಯ ಕಂಡುಬಂದಿಲ್ಲ. ಈ ಪರಿಸರದ ಸುತ್ತಮುತ್ತ ಒಣ ಹುಲ್ಲುಗಳು ತುಂಬಿದ್ದು ನಗರಸಭೆಯ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂಷಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು