Tuesday, November 19, 2024
ಸುದ್ದಿ

ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರಿಗೆ ಬೀಳ್ಕೊಡುಗೆ ಸಮಾರಂಭ- ಕಹಳೆ ನ್ಯೂಸ್

ಪುತ್ತೂರು: ಅಧ್ಯಾಪಕನಿಗೆ ವಿದ್ಯಾರ್ಥಿಗಳಿಂದ ಪಡೆದುಕೊಂಡ ಪ್ರೀತಿ ಮತ್ತು ಗೌರವವೇ ಒಬ್ಬ ಅಧ್ಯಾಪಕನ ಸಂಪತ್ತು. ಅದೇ
ಅಧ್ಯಾಪಕ ಮುಂದೆ ಎಲ್ಲಿಯಾದರೂ ಸಿಕ್ಕಾಗ ಅವರನ್ನು ಗುರುತಿಸುವುದು ಅವರ ಮೇಲೆ ವಿದ್ಯಾರ್ಥಿಗಳಿಟ್ಟಿರುವ ನಂಬಿಕೆ
ಹಾಗೂ ಗೌರವದಿಂದಲೇ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ
ಬೀಳ್ಕೊಡುಗೆ ಸ್ವೀಕರಿಸಿ ಗುರುವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ನೇಹ ಎಂದರೆ ಇನ್ನೊಬ್ಬನ ನೋವುಗಳನ್ನು ನಿವಾರಿಸುವುದು ಮಾತ್ರವಲ್ಲ, ಅವನಲ್ಲಿರುವ ಒಳ್ಳೆ ಗುಣಗಳನ್ನು ಅರಿತುಕೊಂಡು
ಅವನಿಗೆ ಪ್ರೊತ್ಸಾಹವನ್ನು ನೀಡುವುದಾಗಿದೆ. ಒಳ್ಳೆಯ ಗೆಳತನ ಇನ್ನೊಬ್ಬನಿಗೆ ಸ್ಫೂರ್ತಿಯಾಗಬಲ್ಲದು. ಜೀವನ ನಿಂತ ನೀರಾಗಬಾರದು, ಅದು ನಿರಂತರವಾಗಿ ಹರಿದಾಗಲೇ ಹೊಸತನವನ್ನು ಪಡೆದುಕೊಳ್ಳಲು ಸಾಧ್ಯ. ಒಂದು ಅವಕಾಶ ಮುಚ್ಚಿ ಹೋದರೆ ಇನ್ನೊಂದು ಅವಕಾಶವು ತೆರೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿನಿ ಮಾನಸ ಆಶಯ ಗೀತೆ ಹಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳಾದ ಸಂಪತ್ ಕುಮಾರ್, ಶಂತನು, ಭಾಗ್ಯಶ್ರೀ, ಅನಘಾ ಶಿವರಾಮ್, ವಿನೀತಾ ಹಾಗೂ ಆಶಾದೇವಿ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ವಸ್ತಕ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಪ್ರೊ. ಕೃಷ್ಣ ಕಾರಂತ ಪ್ರಸ್ತಾವನೆಗೈದರು. ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಲಿಖಿತಾ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಿಶಾಂತ್ ವಂದಿಸಿದರು. ವಿದ್ಯಾರ್ಥಿನಿ ಮನೀಷಾ ಕಾರ್ಯಕ್ರಮ ನಿರೂಪಿಸಿದರು.