Recent Posts

Monday, January 20, 2025
ಸುದ್ದಿ

ಹಿಂಬಾಲಕರನ್ನು ಹೆಚ್ಚಿಸಿಕೊಳ್ಳಲು ವಿಡಿಯೋ ಮಾಡುತ್ತಿದ್ದೀಯಾ? ಪತ್ನಿ ಸಾಕ್ಷಿ ಕಾಲೆಳೆದ ಎಂಎಸ್ ಧೋನಿ – ಕಹಳೆ ನ್ಯೂಸ್

ಹೈದರಾಬಾದ್: ಸದಾ ಮಿಸ್ಟರ್ ಕೂಲ್ ಆಗಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ಪತ್ನಿ ಸಾಕ್ಷಿಯ ಕಾಲೆಳೆದಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಎಂಎಸ್ ಧೋನಿ ಪತ್ನಿ ಸಾಕ್ಷಿಯ ಕಾಲೆಳೆದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧೋನಿ ಸ್ನೇಹಿತರೊಂದಿಗೆ ಕಾಲಕಳೆಯುತ್ತಿದ್ದ ಸಂದರ್ಭದಲ್ಲಿ ಸಾಕ್ಷಿ ಧೋನಿಯ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಈ ವೇಳೆ ಧೋನಿ ನಿನ್ನ ಫಾಲೋರ್ವಸ್ ಅನ್ನು ಜಾಸ್ತಿ ಮಾಡಿಕೊಳ್ಳಲು ನನ್ನ ವಿಡಿಯೋ ಹಾಕುತ್ತಿದ್ದೀಯ ಎಂದು ಕಾಲೆಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಧೋನಿ ಮಾತಿಗೆ ಪ್ರತಿಕ್ರಿಯಿಸಿದ ಸಾಕ್ಷಿ ಅವರು ನಿಮ್ಮ ಅಭಿಮಾನಿಗಳು ನನ್ನನ್ನು ಆರಾಧಿಸುತ್ತಾರೆ. ನಾನು ನಿಮ್ಮ ಮಡದಿ. ರಾಜ, ಬೇಬಿ, ಸ್ವೀಟಿ ಎಂದೆಲ್ಲ ಧೋನಿಯನ್ನು ಮೆಚ್ಚಿಸುವಂತಾ ಮಾತುಗಳನ್ನಾಡಿದ್ದು ದಂಪತಿಯ ಪ್ರೀತಿಯ ಜಗಳಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.