2020-21 ನೇ ಸಾಲಿನ ಕೇಂದ್ರ ಬಜೆಟ್- ಇಲ್ಲಿದೆ ವಿವರ-ಕಹಳೆ ನ್ಯೂಸ್
ಕೇಂದ್ರ ಸರ್ಕಾರದ 2020-21 ನೇ ಸಾಲಿನ ಬಜೆಟ್ ಮಂಡನೆಯನ್ನು ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದು ಇದು ದೀರ್ಘವಾದ ಬಜೆಟ್ ಭಾಷಣವಾಗಿದೆ. ಸುಮಾರು 2 ಗಂಟೆ 30 ನಿಮಿಷದಷ್ಟು ಕಾಲ ಭಾಷಣ ಮಾಡಿದ ಅವರು ಇನ್ನೇನು ಕೆಲವು ಪುಟಗಳು ಇವೆ ಅನ್ನುವಷ್ಟರಲ್ಲಿ ಭಾಷಣ ನಿಲ್ಲಿಸಿದ್ದಾರೆ. ಲೋಕ ಸಭಾ ಅಧಿವೇಶನವನ್ನು ಮುಂದೂಡಲಾಗಿದೆ.
- ಈ ಬಜೆಟ್ ಭಾಷಣದಲ್ಲಿ ಜಿಎಸ್ಟಿ ಜಾರಿ ಮಾಡಿದಕ್ಕಾಗಿ ಅರುಣ್ ಜೇಟ್ಲಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಕೃಷಿ, ಗ್ರಾಮೀಣ ಜೀವನ ಅಭಿವೃದ್ಧಿಗೆ 16 ಅಂಶಗಳ ಯೋಜನೆ ಪ್ರಕಟ ಮಾಡಿದ್ದಾರೆ. ನೀರಾವರಿ ಯೋಜನೆಗಳಿಗೆ ನೂರು ಜಿಲ್ಲೆಗಳೂ ಆಯ್ಕೆ ಮಾಡಲಾಗಿದ್ದು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಸರ್ಕಾರ ಕ್ರಮಕೈಗೊಳ್ಳಲಿದೆ. ಹಾಗೆಯೇ ಬರಡು ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆಯಲ್ಲಿ 20 ಲಕ್ಷ ರೈತರಿಗೆ ಪಂಪ್ಸೆಟ್ ವಿತರಣೆ ಮಾಡಲಾಗುತ್ತದೆ. ಹಾಗೆಯೇ ಕುಸುಮ್ ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತದೆ.
ಹೈನುಗಾರಿಕೆಗೂ ನರೇಗಾ ವಿಸ್ತರಣೆ ಮಾಡಲಾಗುವುದು. ಮೀನುಗಾರಿಕೆಗಾಗಿ ಸಾಗರ ಮಿತ್ರ ಯೋಜನೆ ಜಾರಿ ಮಾಡಿದ್ದು ಕೃಷಿ ಕ್ಷೇತ್ರಕ್ಕೆ 2.83 ಲಕ್ಷ ಕೋಟಿ ಮೀಸಲು ಇಡಲಾಗಿದೆ. 2020ರಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು, ಆರ್ಥಿಕತೆಯಲ್ಲಿ ಭಾರತ ವಿಶ್ವದ 5ನೇ ಅತಿ ದೊಡ್ಡ ರಾಷ್ಟ್ರವಾಗಿದ್ದು ರೈತರ ಉತ್ಪನ್ನಗಳನ್ನು ಸಾಗಿಸಲು ಕಿಸಾನ್ ರೈಲು ಘೋಷಣೆ ಮಾಡಿದ್ದಾರೆ.
ರಸಗೊಬ್ಬರ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೀಜ ಸಂರಕ್ಷಣೆಗೆ ಮಾಡುವ ಮಹಿಳಾ ಸ್ವಸಹಾಯ ಸಂಘಗಳಿಗೆ ಧನ ಸಹಾಯ ಮಾಡಲಾಗುತ್ತದೆ. ಬೀಜ ಸಂರಕ್ಷಣೆಗೆ ಮೂಂದೆ ಬರುವ ಯುವ ಮಹಿಳಾ ಉದ್ಯಮಿಗಳಿಗೆ ಮುದ್ರಾ ಯೋಜನೆಯಡಿ ನೆರವು ನೀಡುವ ಭರವಸೆ ನೀಡಲಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಉತ್ಪನ್ನಗಳ ಆನ್ಲೈನ್ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು. 15 ಲಕ್ಷ ಕೋಟಿ ಕೃಷಿ ಸಾಲಕ್ಕಾಗಿ ಮೀಸಲು ಇಡಲಾಗಿದೆ. ಹಾಗೆಯೇ ಕೃಷಿ ಕ್ರೆಡಿಟ್ ಖಾರ್ಡ್ ಯೋಜನೆಗೆ ಎಲ್ಲಾ ರೈತರನ್ನು ಸೇರ್ಪಡೆ ಮಾಡಲಾಗುತ್ತದೆ.
ಡಿಜಿಟಲ್ ಇಂಡಿಯಾದ ಭಾಗವಾಗಿ 6 ಲಕ್ಷ ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ ಫೋನ್ ವಿತರಣೆ ಹಾಗೂ ಅಂಗನವಾಡಿಯಲ್ಲಿ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ನಿರ್ಧಾರ ಮಾಡಲಾಗಿದೆ.
ಆದಾಯ ತೆರಿಗೆಯಲ್ಲಿ ಭಾರೀ ಇಳಿಕೆ ಮಾಡಲಾಗಿದ್ದು 5 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ, 5ರಿಂದ 7.5 ಲಕ್ಷದವರೆಗೆ ಶೇ.10 ತೆರಿಗೆ, 7.5 ಲಕ್ಷದಿಂದ 10 ಲಕ್ಷದವರೆಗೆ ಶೇ.15 ತೆರಿಗೆ, 10 ಲಕ್ಷದಿಂದ 12.5 ಲಕ್ಷದವರೆಗೆ ಶೇ. 20 ತೆರಿಗೆ, 12.5 ಲಕ್ಷದಿಂದ 15 ಲಕ್ಷದವರೆಗೆ ಶೇ. 25 ತೆರಿಗೆ, 15 ಲಕ್ಷಕ್ಕಿಂತ ಮೇಲ್ಪಟ್ಟು ಶೇ.30 ತೆರಿಗೆ ವಿಧಿಸಲಾಗಿದೆ. 7.5 ಲಕ್ಷದಿಂದ 10 ಲಕ್ಷದವರೆಗೆ ಶೇ.15 ತೆರಿಗೆ ವಿಧಿಸಲಾಗಿದ್ದು ಈ ಮೊದಲು ಶೇ.20 ಪಾವತಿ ಮಾಡಬೇಕಾಗಿತ್ತು. 10 ಲಕ್ಷದಿಂದ 12.5 ಲಕ್ಷದವರೆಗೆ ಶೇ. 20 ತೆರಿಗೆ ವಿಧಿಸಲಾಗಿದ್ದು ಈ ಮೊದಲು ಶೇ.30 ಪಾವತಿ ಮಾಡಬೇಕಾಗಿತ್ತು. 5ರಿಂದ 7.5 ಲಕ್ಷದವರೆಗೆ ಶೇ.10 ತೆರಿಗೆ ವಿಧಿಸಲಾಗಿದ್ದು ಈ ಮೊದಲು ಶೇ. 20 ಪಾವತಿ ಮಾಡಬೇಕಾಗಿತ್ತು.
ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ಸರ್ಕಾರದ ಸ್ವಲ್ಪ ಪಾಲು ಮಾರಾಟಕ್ಕೆ ನಿರ್ಧಾರಿಸಿದ್ದು, ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸುವ ಕುರಿತು ನಿರ್ಧಾರ ಮಾಡಿದೆ. ಅಷ್ಟು ಮಾತ್ರವಲ್ಲದೆ ಐಡಿಬಿಡಿ ಬ್ಯಾಂಕ್ನ ಸಂಪೂರ್ಣ ಖಾಸಗೀಕರಣ ಮಾಡಲು ನಿರ್ಧಾರ ಮಾಡಲಾಗಿದೆ. ಬ್ಯಾಂಕ್ ಠೇವಣಿದಾರರ ವಿಮೆ 1 ಲಕ್ಷದಿಂದ 5 ಲಕ್ಷ ರೂಗೆ ಹೆಚ್ಚಳ ಮಾಡಲಾಗಿದೆ.
ಸಾಗರ್ ಮಿತ್ರ ಯೋಜನೆ ಹಾಗೂ ಮೀನು ಉತ್ಪಾದಕ ಸಂಸ್ಥೆಗಳ ಮೂಲಕ ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಗಳಿಕೆಗೆ ನಿರ್ಧಾರ ಮಾಡಲಾಗಿದೆ. ಹಾಗೆಯೇ ಕೃಷಿಗೆ 1.6 ಲಕ್ಷ ಕೋಟಿ ಘೋಷಣೆ ಮಾಡಲಾಗಿದೆ. ಜನಜೀವನ ಯೋಜನೆಗೆ 5.60 ಲಕ್ಷ ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಶಿಕ್ಷಣಕ್ಕಾಗಿ 99,300 ಕೋಟಿ ನೀಡಲಾಗಿದ್ದು ಹೊಸ ಶಿಕ್ಷಣ ನೀತಿ ಜಾರಿಗೆ ಕ್ರಮಕೈಗೊಳ್ಳಲಾಗುತ್ತದೆ.
ಖಾಸಗೀ ಕ್ಷೇತ್ರಗಳು ದೇಶದಾದ್ಯಂತ ಡೇಟಾ ಸೆಂಟರ್ ಪಾರ್ಖ್ ರೂಪಿಸಲು ನೀತಿ ರೂಪಿಸಲಿದ್ದು ದೇಶದ 1 ಲಕ್ಷ ಗ್ರಾಮ ಪಂಚಾಯತಿಗಳಿಗೆ ಭಾರತ್ ನೆಟ್ ಕಾರ್ಯಕ್ರಮ ಮೂಲಕ ಒಎಫ್ಸಿ ಸಂಪರ್ಕ ಒದಗಿಸಲಾಗುತ್ತದೆ. ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗಾಗಿ 8000 ಕೋಟಿ ಘೋಷಣೆ ಮಾಡಲಾಗಿದೆ.
ಪೌಷ್ಠಿಕಾಂಶ ಕೊರತೆ ನೀಗಿಸಲು 35,600 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ವಾಯುಮಾಲಿನ್ಯ ಕಡಿತಕ್ಕಾಗಿ 4,400 ಕೋಟಿ ಮೀಸಲಿಡಲಾಗಿದೆ. ಜಮ್ಮು- ಕಾಶ್ಮೀರ ಅಭಿವೃದ್ಧಿಗಾಗಿ 37,000 ಕೋಟಿ ಮೀಸಲಿಡಲಾಗಿದೆ.
ಷೇರು ಭಾರೀ ಕುಸಿತವಾಗಿದ್ದು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನೆಕ್ಸ್ 473 ಅಂಶಗಳ ಕುಸಿತ ಕಂಡಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 187 ಅಂಶ ಕುಸಿತ ಕಂಡಿದೆ. ಆಮದು ಮಾಡಲಾಗುವ ವೈದ್ಯಕೀಯ ಉಪಕರಣಗಳ ಮೇಲೆ ಸೆಸ್ ವಿಧಿಸಲಾಗುತ್ತದೆ.
ಹಿರಿಯ ನಾಗರಿಕರು ಹಾಗೂ ಒಬಿಸಿ ವರ್ಗಗಳ ಅಭಿವೃದ್ಧಿ ಯೋಜನೆಗಳಿಗಾಗಿ 9,500 ಕೋಟಿ ರೂಪಾಯಿಗಳ ನೆರವು ನೀಡಲು ನಿರ್ಧಾರ ಮಾಡಲಾಗಿದೆ. ಪರಿಶಿಷ್ಟ ಜಾತಿಗಳ ಅಭಿವೃದ್ಧಿಗಾಗಿ 85 ಸಾವಿರ ಕೋಟಿ ರೂಪಾಯಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ 53,700 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಲಾಗಿದೆ.
ಸ್ವಚ್ಛ ಗಾಳಿ ಪೂರಕ ಯೋಜನೆಗಳಿಗಾಗಿ 4,400 ಕೋಟಿ ರೂಪಾಯಿಗಳ ಅನುದಾನ, ಪ್ರವಾಸೋಧ್ಯಮ ಕ್ಷೇತ್ರದ ಉತ್ತೇಜನಕ್ಕಾಗಿ 2,500 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ.
ಸಂಸ್ಕೃತಿ ಸಚಿವಾಲಯಕ್ಕೆ 3,150 ಕೋಟಿ ರೂಪಾಯಿ ಅನುದಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 28,600 ಕೋಟಿ ರೂಪಾಯಿಗಳ ಅನುದಾನ, ಪೌಷ್ಠಿಕಾಂಶ ಪೂರಕ ಯೋಜನೆಗಳಿಗಾಗಿ 35,600 ಕೋಟಿ ರೂಪಾಯಿಗಳ ಅನುದಾನ, ನವೀಕರಿಸಬಹುದಾದ ಇಂಧನ ಉತ್ಪಾದನೆಗೆ 22 ಸಾವಿರ ಕೋಟಿ ರೂ. ಅನುದಾನ, ಮೂಲಸೌಕರ್ಯಕ್ಕೆ 103 ಲಕ್ಷ ಕೋಟಿ ರೂ.ಗಳ ಅನುದಾನ ಘೋಷಣೆ ಮಾಡಲಾಗಿದೆ.
ರಾಷ್ಟ್ರೀಯ ಟೆಕ್ನಿಕಲ್ ಟೆಕ್ಸ್ ಟೈಲ್ ಯೋಜನೆಗೆ 1480 ಕೋಟಿ ರೂಪಾಯಿ, ಕೌಶಲಾಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲು ಇಡಲಾಗಿದೆ.
ಸ್ವಚ್ಛ ಭಾರತ್ ಯೋಜನೆಗೆ 12,300 ಕೋಟಿ ರೂಪಾಯಿ ಅನುದಾನ, ಗ್ರಾಮೀಣಾಭಿವೃದ್ದಿಗೆ 1.23 ಲಕ್ಷ ಕೋಟಿ ರೂಪಾಯಿ ಮೀಸಲು ಇಡಲಾಗಿದೆ. ನಬಾರ್ಡ್ ಗೆ 15 ಲಕ್ಷ ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ.