Monday, January 20, 2025
ಸುದ್ದಿ

ಫೀಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿದ್ಯಾರ್ಥಿಗಳಿಂದ “ಫನ್ ಫಿಸಿಕ್ಸ್’ ಮಾದರಿ ಪ್ರಾತ್ಯಕ್ಷಿಕೆ-ಕಹಳೆ ನ್ಯೂಸ್

ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇದರ ಎಮ್‍ಎಸ್‍ಡಬ್ಲ್ಯೂ ವಿಭಾಗವು ದ.ಕ.ಜಿ.ಪ. ಹಿ.ಪ್ರಾ. ಶಾಲೆ ಕೊಡಂಗಾಯಿಯಲ್ಲಿ ಆಯೋಜಿಸಿದ ಶೈಕ್ಷಣಿಕ ಗ್ರಾಮೀಣ ಶಿಬಿರ 2019-20 ರಲ್ಲಿ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಜನವರಿ 29 ರಂದು “ಫನ್ ಫಿಸಿಕ್ಸ್’ ವಿಜ್ಞಾನ ಮಾದರಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.


ಈ ಪ್ರಾತ್ಯಕ್ಷಿಕೆಯಲ್ಲಿ ಸ್ನಾತಕೋತ್ತರ ಬೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಸಾಯಿಲ್ ಮೋಯಿಶ್ಚರ್ ಡಿಟೆಕ್ಟರ್, ಹೈಡ್ರಾಲಿಕ್ ಲಿಫ್ಟ್ ಜಿಸಿಬಿ, ಅಟೋಮ್ಯಾಟಿಕ್ ಸ್ಟ್ರೀಟ್ ಲೈಟ್ ಯೂಸಿಂಗ್ ಐಆರ್ ಸೆನ್ಸರ್, ಸೆಂಟ್ರಿಫ್ಯೂಗಲ್ ವಾಟರ್ ಪಂಪ್, ವೆಸ್ಟ್ ಕಲೆಕ್ಟಿಂಗ್ ಬೋಟ್, ಆಡಿಯೋ ಟ್ರಾನ್ಸ್‍ಮಿಶನ್ ಥ್ರೂ ಲೈಟ್ ಬೇಸ್ಡ್ ವೈಫೈ ಟೆಕ್ನಾಲಜಿ, ಐಆರ್ ಪ್ರಾಕ್ಸಿಮಿಟಿ ಸೆನ್ಸರ್, ಅಲ್ಟ್ರಾ ಸೋನಿಕ್ ಸೊನಾರ್, ಅಟೋಮ್ಯಾಟಿಕ್ ಇರಿಗೇಶನ್ ಸಿಸ್ಟಮ್ ಯೂಸಿಂಗ್ ಆರ್ಡಿನೊ ಮುಂತಾದ ಮಾದರಿಗಳನ್ನು ಪ್ರದರ್ಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ವಿಜ್ಞಾನದಲ್ಲಿ ಕುತೂಹಲ ಮೂಡಿಸುವ ಉದ್ದೇಶದಿಂದ ವಿವಿಧ ರೀತಿಯ ಮನರಂಜನೆಯ ಪ್ರಯೋಗಗಳನ್ನು ಮಾಡಿ, ಭೌತಶಾಸ್ತ್ರದ ತರ್ಕಗಳನ್ನು ತಿಳಿ ಹೇಳುವ ಪ್ರಯತ್ನವನ್ನು ಮಾಡಲಾಯಿತು. ಹಾಗೆಯೇ ಪಿಪಿಟಿ ಮೂಲಕ ವಿಜ್ಞಾನದ ವಿಸ್ಮಯಗಳನ್ನು ಅನಾವರಣಗೊಳಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕ ಡಾ| ದೀಪಕ್ ಡಿ’ಸಿಲ್ವ ಮಾತನಾಡಿ, ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಲ್ಲಿ ಉತ್ತಮ ಸಮಾಜ ರೂಪಿಸುವ ಜವಾಬ್ದಾರಿ ಇತರರಿಗಿಂತ ಹೆಚ್ಚಾಗಿದೆ. ಇಂತಹ ಶೈಕ್ಷಣಿಕ ಶಿಬಿರಗಳು ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ರೂಪಿಸಲಿದೆ. ವಿದ್ಯಾರ್ಥಿಗಳು ಇಲ್ಲಿ ಪಡೆದ ಅನುಭವಗಳನ್ನು ಜೀವನದಲ್ಲಿ ಅಳವಡಿಸುವಂತಾಗಬೇಕು.

ಇಲ್ಲಿ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ವ್ಯಕ್ತಪಡಿಸಲು ಉತ್ತಮ ವೇದಿಕೆ ಲಭ್ಯವಾಯಿತು ಎಂದರು.

ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯ ಗುರು ಸರೋಜ ಮಾತನಾಡಿ, ಶೈಕ್ಷಣಿಕ ಶಿಬಿರವು ಈ ಶಾಲೆಯಲ್ಲಿ ಆಯೋಜನೆಗೊಂಡಿರುವುದರಿಂದ ಮಕ್ಕಳಿಗೆ ಹೊಸ ತಂತ್ರಜ್ಞಾನಗಳನ್ನು ಬಳಸಿ, ಶಿಕ್ಷಣ ಹಾಗೂ ತರಬೇತಿ ಪಡೆಯುವ ವಿಧಾನಗಳ ಕುರಿತು ಅರಿವು ಮೂಡಿದೆ. ಈ ಶಿಬಿರವನ್ನು ಆಯೋಜಿಸಿದವರ ಶ್ರಮವು ವಿಶೇಷ ಮಟ್ಟದ್ದಾಗಿದೆ ಎಂದರು.

ಸಪ್ರದ ಕಾಲೇಜು ವಿಟ್ಲ ಇಲ್ಲಿಯ ವಿದ್ಯಾರ್ಥಿಗಳು ಕಾರ್ಯಕ್ರಮ ಸಂಯೋಜಿಸಿದರು.