Recent Posts

Tuesday, November 19, 2024
ಸುದ್ದಿ

ಫಿಲೋಮಿನಾ ಎಮ್‍ಎಸ್‍ಡಬ್ಲ್ಯೂಶೈಕ್ಷಣಿಕ ಗ್ರಾಮೀಣ ಶಿಬಿರ 2020 ಸಮಾಪನ-ಕಹಳೆ ನ್ಯೂಸ್

ಪುತ್ತೂರು: ಶೈಕ್ಷಣಿಕ ಗ್ರಾಮೀಣ ಶಿಬಿರಗಳು ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಪ್ರಯೋಜನಕಾರಿ. ವಿದ್ಯಾರ್ಥಿಗಳು ಆಸಕ್ತಿ ಮತ್ತು ಬದ್ಧತೆಯಿಂದ ಶಿಬಿರದ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಶಿಬಿರಗಳು ಯಶಸ್ವಿಯಾಗುತ್ತವೆ ಎಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮರ್ದೂರಡ್ಕ ಇದರ ಮುಖ್ಯ ಶಿಕ್ಷಕಿ ಪೂರ್ಣಿಮಾ.ಕೆ ಹೇಳಿದರು.


ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮರ್ದೂರಡ್ಕದಲ್ಲಿ ಆಯೋಜಿಸಲಾದ ಶೈಕ್ಷಣಿಕ ಗ್ರಾಮೀಣ ಶಿಬಿರ 2020 ಇದರ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಜನರೊಂದಿಗೆ ಬೆರೆತು, ಜನರ ಜೀವನ ಶೈಲಿಯನ್ನು ಅರ್ಥೈಸಿಕೊಳ್ಳುವುದು ಒಂದು ಒಳ್ಳೆಯ ವಿಚಾರ. ವಿದ್ಯಾರ್ಥಿಗಳು ಇತಹ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಅನುಭವಗಳು ಲಭಿಸುತ್ತವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಶಿಬಿರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಅಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರನ್ನು ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಹುಮಾನ ವಿಜೇತರು: ಕಾಳು ಹೆಕ್ಕುವುದರಲ್ಲಿ ಧನ್ವಿತ್(ಪ್ರ), ಸತೀಶ್(ದ್ವಿ), ವಿಸ್ಮಿತಾ(ತೃ), ಚೆಂಡು ಎಸೆಯುವುದರಲ್ಲಿ ಸತೀಶ್(ಪ್ರ), ಶ್ರಾವ್ಯ(ದ್ವಿ), ಬಿಸ್ಕೆಟ್ ತಿನ್ನುವುದರಲ್ಲಿ ಸತೀಶ್(ಪ್ರ), ಧನ್ವಿತ್(ದ್ವಿ), ವಿಸ್ಮಿತಾ(ತೃ), ಹಿರಿಯರ ವಿಭಾಗದ ಬಿಸ್ಕೆಟ್ ತಿನ್ನುವುದರಲ್ಲಿ ಗಗನ್(ಪ್ರ), ಧನ್ಯ(ದ್ವಿ), ಕಪ್ಪೆ ಜಿಗಿತದಲ್ಲಿ ಪ್ರತೀಶ್(ಪ್ರ), ವಿನುತಾ(ದ್ವಿ), ಸಂಜಯ್(ತೃ), ನೂರು ಮೀ. ಓಟದಲ್ಲಿ ಸತೀಶ್(ಪ್ರ), ವಿನುತಾ(ದ್ವಿ), ಸಂಜಯ್(ತೃ), ಬೆಲೂನ್ ಬ್ಯಾಲೆನ್ಸ್‍ನಲ್ಲಿ ಲೋಹಿತ್(ಪ್ರ), ಪ್ರೀತಮ್(ದ್ವಿ), ಬೆಲೂನ್ ಒಡೆಯುವುದರಲ್ಲಿ ದೀಕ್ಷಿತಾ(ಪ್ರ), ಕೀರ್ತನಾ(ದ್ವಿ), ಬೆಲೂನ್ ಆಟದಲ್ಲಿ ಸಂಜಯ್(ಪ್ರ), ಗೌತಮ್(ದ್ವಿ), ಧನ್ಯಾ ಕೆ(ತೃ) ಬಹುಮಾನ ಪಡೆದುಕೊಂಡರು.

ಶಿಬಿರದ ನಾಯಕ ನಿರಂಜನ್.ಕೆ ಶಿಬಿರದ ಅನುಭವವನ್ನು ಪ್ರಸ್ತುತ ಪಡಿಸಿದರು. ಶಿಬಿರಾಧಿಕಾರಿ ದೀಪಿಕಾ ಎಮ್ ಶಿಬಿರದ ವರದಿ ಮಂಡಿಸಿ, ವಂದಿಸಿದರು.