Tuesday, January 21, 2025
ಸುದ್ದಿ

ಕುಂಬಳೆ: ಕಾರು ಬೈಕ್‌ ಡಿಕ್ಕಿ- ಗಾಯಾಳು ವಿದ್ಯಾರ್ಥಿ ಮೃತ್ಯು-ಕಹಳೆ ನ್ಯೂಸ್

ಕುಂಬಳೆ : ಮಡಿಕೇರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸಂಒಆಜೆಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಕುಂಬಳೆ ಬಳಿಯ ಸೂರಂಬೈಲು ಆಲಾರ್ತೆ ನಿವಾಸಿ, ಮಂಗಳೂರಿನ ಕಾಲೇಜು ವಿದ್ಯಾರ್ಥಿ ಪ್ರಜ್ವಲ್‌ (20) ಶನಿವಾರ ಸಾವನ್ನಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಜ.25 ರಂದು ಮಿತ್ರನೊಂದಿಗೆ ಹಿಂಬದಿ ಸವಾರನಾಗಿ ಮಡಿಕೇರಿಗೆ ಹೋಗುತ್ತಿದ್ದು ಕಾರು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯವಾಗಿದ್ದ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ವಿದ್ಯಾರ್ಥಿಯು ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.

ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡಿ ಭಾನುವಾರ ಕುಂಬಳೆಗೆ ಕರೆತರಲಾಗುವುದು.