Tuesday, January 21, 2025
ಸುದ್ದಿ

ಇನ್ಮುಂದೆ ʼಪಿಎಫ್ʼ ಖಾತೆ ಹಣಕ್ಕೂ ಬೀಳಲಿದೆ ತೆರಿಗೆ-ಕಹಳೆ ನ್ಯೂಸ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ 2020-2021ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಇದ್ರಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಎಲ್ಲರ ಗಮನ ಸೆಳೆದಿದೆ. ಐದು ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯವಿರುವವರು ಯಾವುದೇ ತೆರಿಗೆ ಪಾವತಿ ಮಾಡಬೇಕಾಗಿಲ್ಲ.

ಐದು ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರ ತೆರಿಗೆಯಲ್ಲಿ ಇಳಿಕೆಯಾಗಿದೆ. ಆದ್ರೆ ತೆರಿಗೆ ಪಾವತಿದಾರರಿಗೆ ಕೆಲವೊಂದು ಉಳಿತಾಯದ ಲಾಭ ಸಿಗುವುದಿಲ್ಲ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಇಪಿಎಫ್, ಎನ್‌ಪಿಎಸ್ ಮುಂತಾದ ಹೂಡಿಕೆಯ ಮಿತಿಯನ್ನು ತೆರಿಗೆ ವಿನಾಯಿತಿಯ ದೃಷ್ಟಿಯಿಂದ ನಿಗದಿಪಡಿಸಲಾಗಿದೆ. ಈ ಕಾರಣದಿಂದಾಗಿ ಇವುಗಳಿಗೂ ತೆರಿಗೆ ವಿಧಿಸುವ ಅವಕಾಶವಿದೆ. ತೆರಿಗೆ ವಿನಾಯಿತಿಗಾಗಿ ನೌಕರರ ಭವಿಷ್ಯ ನಿಧಿ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ, ಎನ್ಪಿಎಸ್ ಹೂಡಿಕೆಯ ಮೇಲಿನ ಮಿತಿಯನ್ನು 7.5 ಲಕ್ಷ ರೂಪಾಯಿಗೆ ಏರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹೊಸ ನಿಯಮವು ಏಪ್ರಿಲ್ 1, 2021 ರಿಂದ ಜಾರಿಗೆ ಬರಲಿದೆ. ಮೌಲ್ಯಮಾಪನ ವರ್ಷ 2021-22ಕ್ಕೆ ಮಾನ್ಯವಾಗಿರುತ್ತದೆ. ಅಂದರೆ ಈ ಎಲ್ಲಾ ಯೋಜನೆಗಳಲ್ಲಿ ನೌಕರನ ಹೂಡಿಕೆ ಒಂದು ವರ್ಷದಲ್ಲಿ 7.5 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ, ಅವನಿಗೆ ತೆರಿಗೆ ವಿಧಿಸಲಾಗುತ್ತದೆ. ಈ ಮೊದಲು ಉದ್ಯೋಗದಾತ ಪಿಎಫ್ ಮತ್ತು ಎನ್‌ಪಿಎಸ್‌ನಲ್ಲಿ ಮಾಡಿದ ಹೂಡಿಕೆ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿತ್ತು. ಯಾವುದೇ ಮಿತಿಯಿರಲಿಲ್ಲ.