Tuesday, January 21, 2025
ಸುದ್ದಿ

ಹೆಂಡತಿ ಶೀಲ ಶಂಕಿಸಿ ಕೊಲೆ ಮಾಡಿದ ಪತಿರಾಯ ಹೇಳಿದ್ದೇನು? – ಕಹಳೆ ನ್ಯೂಸ್

ಬಳ್ಳಾರಿ, ಫೆಬ್ರುವರಿ 02: ರಾತ್ರಿ ಮಲಗಿದ ನನ್ನ ಪತ್ನಿ ಮತ್ತೆ ಏಳಲೇ ಇಲ್ಲ, ಅವಳು ಹೃದಯಾಘಾತದಿಂದ ಸತ್ತು ಹೋಗಿದ್ದಾಳೆ ಎಂದು ಸಂಬಂಧಿಕರಿಗೆ ಕರೆ ಮಾಡಿ ನಾಟಕವಾಡಿದ ಪತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗೆ ನಾಟಕವಾಡಿ ಜನರನ್ನು ಸೇರಿಸಿ ಕೊನೆಯಲ್ಲಿ ತಾನೇ ಪೊಲೀಸ್ ಅತಿಥಿಯಾದ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸುಸಿಲಾ ನಗರದಲ್ಲಿ ನಡೆದಿದೆ. ಕಳೆದ ಎಂಟು ವರ್ಷಗಳ ಹಿಂದೆ ಶಾರದಾ ಭಾಯಿ ಜೊತೆ ಢಾಕ್ಯಾ ನಾಯಕ್ ಮದುವೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಆದರೆ ಪದೇ ಪದೇ ಹೆಂಡತಿಯ ಶೀಲದ ಮೇಲೆ ಗಂಡ ಸಂಶಯ ಪಡುತಿದ್ದ ಕಾರಣ ಕಳೆದ ಎರಡು ದಿನಗಳ ಹಿಂದೆ ಢಾಕ್ಯಾ ನಾಯಕ್ ಹೆಂಡತಿಯ ಜೊತೆ ಇದೇ ವಿಷಯಕ್ಕೆ ಜಗಳ ಮಾಡಿಕೊಂಡಿದ್ದಾನೆ.

ಜಗಳ ವಿಕೋಪಕ್ಕೆ ತಿರುಗಿದಾಗ ಅಕ್ಕ ಪಕ್ಕದ ಮನೆಯವರು ಜಗಳ ಬಿಡಿಸಿದ್ದಾರೆ. ಆದರೆ ನಿನ್ನೆ ರಾತ್ರಿ ಗಂಡ ಹೆಂಡತಿ ಇಬ್ಬರೂ ಊಟ ಮಾಡಿ ಮಲಗಿದ್ದು ತನ್ನ ಎರಡು ಮಕ್ಕಳನ್ನು ಮನೆ ಆಚೆ ಮಲಗಲು ಹೇಳಿ, ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.

 

ಬಳಿಕ ಹೆಂಡತಿ ಮನೆಯವರಿಗೆ ಕರೆ ಮಾಡಿ ನನ್ನ ಹೆಂಡತಿ ರಾತ್ರಿ ಮಲಗಿದವಳು ಮತ್ತೆ ಏಳುತ್ತಲೇ ಇಲ್ಲ ಅವಳಿಗೆ ಹೃದಯಾಘಾತ ಆಗಿರಬಹುದು ಎಂದು ನಾಟಕ ಆಡಿದ್ದಾನೆ. ಬಳಿಕೆ ಹೆಂಡತಿ ಮನೆಯವರು ಮನೆಗೆ ಬಂದಿದ್ದಾರೆ.

ಅನುಮಾನ ಬಂದ ಹೆಂಡತಿ ಮನೆಯವರು ಪೊಲೀಸ್ ಠಾಣೆಗೆ ಕರೆ ಮಾಡಿದ್ದು, ಸಂಡೂರು ಪೊಲೀಸರು ಸ್ಥಳಕ್ಕೆ ಆಗಮಸಿ ಪರಿಶೀಲನೆ ನಡೆಸಿದ್ದಾರೆ. ಶಾರದಾ ಅವರ ಕುತ್ತಿಗೆ ಸುತ್ತ ಸಣ್ಣ ಪುಟ್ಟ ಗಾಯಗಳಾಗಿದ್ದು, ಅನುಮಾನಗೊಂಡ ಪೊಲೀಸರು ಪತಿ ಢಾಕ್ಯಾ ನಾಯಕ್ ನನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.