ತಿರುವನಂತಪುರ/ಹೊಸದಿಲ್ಲಿ, ಫೆ.2: ಭಾರತದಲ್ಲಿ ಎರಡನೇ ಕೊರೋನಾ ವೈರಸ್ ಪತ್ತೆಯಾಗಿರುವ ಪ್ರಕರಣ ಕೇರಳದಿಂದ ವರದಿಯಾಗಿದೆ.
ಕೇರಳದಲ್ಲಿ ಇದೀಗ ಎರಡನೇ ಕೊರೋನಾ ವೈರಸ್ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ ಮೊದಲ ಪ್ರಕರಣ ಪತ್ತೆಯಾಗಿತ್ತು. ಚೀನಾದಲ್ಲಿ 300ಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್ 20ಕ್ಕೂ ಅಧಿಕ ರಾಷ್ಟ್ರಗಳಿಗೆ ಹರಡಿರುವ ಹಿನ್ನೆಲೆಯಲ್ಲಿ ವಿಶ್ವದ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ.
”ಕೇರಳದಲ್ಲಿ ಎರಡನೇ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿದೆ.ರೋಗಿ ಚೀನಾದಿಂದ ರಾಜ್ಯಕ್ಕೆ ಬಂದಿದ್ದು, ರೋಗಿಯ ಆರೋಗ್ಯ ಸ್ಥಿರವಾಗಿದ್ದು, ತೀವ್ರ ನಿಗಾವಹಿಸಲಾಗಿದೆ” ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ವೈರಸ್ ಪತ್ತೆಯಾಗಿರುವ ರೋಗಿಯು ಜನವರಿ 24ರಂದು ಚೀನಾದಿಂದ ವಾಪಸಾಗಿದ್ದರು.
ಗುರುವಾರ ಕೇರಳದಲ್ಲಿ ಮೊದಲ ಬಾರಿ ಕೊರೋನಾ ವೈರಸ್ ಪ್ರಕರಣ ವರದಿಯಾಗಿತ್ತು. ಇದು ದೇಶದಲ್ಲಿ ಕಂಡುಬಂದ ಮೊದಲ ಪ್ರಕರಣವಾಗಿತ್ತು. ಚೀನಾದ ವುಹಾನ್ ಸಿಟಿಯುಲ್ಲಿ ವೈದ್ಯಕೀಯ ವಿದ್ಯಾರ್ಥಿನಿಗೆ ಕೊರೋನಾ ವೈರಸ್ ಪತ್ತೆಯಾಗಿತ್ತು. ಕೇರಳದ ವೈದ್ಯಕೀಯ ವಿದ್ಯಾರ್ಥಿನಿಗೆ ಗಂಟಲು ನೋವು ಕಾಣಿಸಿಕೊಂಡ ಬಳಿಕ ತ್ರಿಶೂರ್‌ನ ಆಸ್ಪತ್ರೆಗೆ ಸ್ವತಃ ದಾಖಲಾಗಿದ್ದರು.
ಕೇರಳದಲ್ಲಿ 800ಕ್ಕೂ ಅಧಿಕ ಮಂದಿಯ ಮೇಲೆ ತೀವ್ರ ನಿಗಾವಹಿಸಲಾಗಿದೆ.