ಸುಬ್ರಹ್ಮಣ್ಯ: ಐವತೊಕ್ಲು ಗ್ರಾಮ ಪಲ್ಲೋಡಿ ನಿವಾಸಿಯಾದ ಅಂಗವಿಕಲ ಮಹಿಳೆ ಮೀನಾಕ್ಷಿ ಎಂಬವರಿಗೆ ವಿಕಲಚೇತನ ಬಸ್ ಪಾಸ್ ಇದ್ದರು ಟಿಕೆಟ್ ಕೊಟ್ಟು ಸರಕಾರಿ ಬಸ್ ನಿರ್ವಾಹಕ ಕುಮಾರ್ ಹಣವಸೂಲಿ ಮಾಡಿದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಮೀನಾಕ್ಷಿ ಪಂಜದಿಂದ ಗುತ್ತಿಗಾರು ನಡುಗಲ್ಲು ಮಾರ್ಗವಾಗಿ ನಿನ್ನೆ ಸಂಜೆ 5.45ರ ಸರಕಾರಿ ಬಸ್‍ನಲ್ಲಿ ಸಂಚರಿಸುವಾಗ, ನಿರ್ವಾಹಕ ವಿಕಲಚೇತನ ಬಸ್ ಪಾಸ್ ತೋರಿಸಿದರು, ಹಣ ನೀಡಬೇಕು ಎಂದು ಗದರಿಸಿ ಟಿಕೆಟ್ ನೀಡಿ ಹಣ ಪಡೆದಿದ್ದಾನೆ.
ವಿಕಲಚೇತನ ಬಸ್ ಪಾಸ್ ನವೀಕರಣ ಮಾಡಲು ಫೆಬ್ರವರಿ 25 ವರೆಗೆ ಸಮಯಾವಕಾಶ ಇದ್ದರು ಟಿಕೆಟ್ ಪಡೆದಿದ್ದಾರೆ. ಇನ್ನೂ ಈ ವಿಚಾರವಾಗಿ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಗೆ ಮೀನಾಕ್ಷಿಯವರು ದೂರು ನೀಡಿದ್ದು, ದೂರಿನಲ್ಲಿ ನಿರ್ವಾಹಕ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗು ನನ್ನನು ಚುಚ್ಚು ಮಾತುಗಳಿಂದ ನಿಂದಿಸುವುದು ಹಾಗು ದಬ್ಬಾಳಿಕೆ ಮಾಡುವುದು ನಡೆಯುತ್ತಿದೆ.
ಇನ್ನೂ ಮುಂದೆ ಈ ರೀತಿ ನಡೆಯದ ಹಾಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾತ್ರವಲ್ಲದೇ ನಾನು ಕೊಟ್ಟ 62 ರೂ. ಪುನಃ ನೀಡಬೇಕು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಇನ್ನಾದರೂ ಇಲಾಖೆ ಎಚೆತ್ತು ಕೊಂಡು ಇಂತಃ ಕಷ್ಟದಲ್ಲಿ ಇರುವವರಿಗೆ ಸಹಕಾರಿಯಾಗಲಿ ಎಂಬುದೇ ನಮ್ಮ ಆಶಯ.