Tuesday, November 19, 2024
ಸುದ್ದಿ

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಆರ್ಭಟ: ಐದಾರು ನಾಯಿಗಳ ದಾಳಿಗೆ ಬಾಲಕನ ಸ್ಥಿತಿ ಗಂಭೀರ -ಕಹಳೆ ನ್ಯೂಸ್

ಬಾಲಕನ ಮೇಲೆ ನಾಯಿಗಳ ದಾಳಿ ಗಮನಿಸಿದ ಸಾರ್ವಜನಿಕರು ರಕ್ಷಣೆ ಮಾಡಿದ್ದಾರೆ. ನಂತರ ಪಾಲಕರಿಗೆ ಮಾಹಿತಿ ನೀಡಿ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಮತ್ತು ಇಂಜೆಕ್ಷನ್‌ ಕೊಡಿಸಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು
ಬೀದಿ ನಾಯಿಗಳ ಆರ್ಭಟ: ಐದಾರು ನಾಯಿಗಳ ದಾಳಿಗೆ ಬಾಲಕನ ಸ್ಥಿತಿ ಗಂಭೀರ
ಬೆಂಗಳೂರು: ಎಚ್‌ಎಎಲ್‌ ಸಮೀಪದ ಲಾಲ್‌ಬಹದ್ದೂರ್‌ ಶಾಸ್ತ್ರಿ ನಗರದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿದ ಕಾರಣ ಒಂಬತ್ತು ವರ್ಷದ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಾಳು ಬಾಲಕ 9 ವರ್ಷದ ನಿರ್ಮಲ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕನ ತಲೆ, ತೊಡೆ ಮತ್ತು ಕೈಗಳಿಗೆ ಸುಮಾರು ಐದಾರು ನಾಯಿಗಳಿದ್ದ ಗುಂಪು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿವೆ. ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂದು ಬಿಬಿಎಂಪಿ ಪೂರ್ವ ವಲಯದ ಪಶು ಸಂಗೋಪನೆ ಅಧಿಕಾರಿ ಭಜಂತ್ರಿ ತಿಳಿಸಿದರು.

ಖಾಸಗಿ ಕಂಪನಿಯೊಂದರಲ್ಲಿ ಹೆಲ್ಪರ್‌ ಕೆಲಸ ಮಾಡುತ್ತಿರುವ ನೇಪಾಳ ಮೂಲದ ಸುಜನನ್‌ ಮತ್ತು ಸಿರ್ಜನ್‌ ದಂಪತಿಯ ಪುತ್ರನಾಗಿರುವ ನಿರ್ಮಲ್‌, ಲಾಲ್‌ ಬಹದ್ದೂರ್‌ ಶಾಸ್ತ್ರಿ ನಗರದ ಕೊಳೆಗೇರಿ ಪ್ರದೇಶದಿಂದ ಸುಮಾರು 1 ಕಿ.ಮೀ ದೂರಕ್ಕೆ ಆಟವಾಡಲು ಹೋಗಿದ್ದ. ಅಲ್ಲಿ ಕಾಡಿನಂತಹ ಜಾಗವಿದೆ. ಬಾಲಕ ಅಲ್ಲಿಗೆ ಹೋಗಿದ್ದ ವೇಳೆ ನಾಯಿಗಳು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿವೆ ಎಂದು ಭಜಂತ್ರಿ ತಿಳಿಸಿದರು.

ಬಾಲಕನ ಮೇಲೆ ನಾಯಿಗಳ ದಾಳಿ ಗಮನಿಸಿದ ಸಾರ್ವಜನಿಕರು ರಕ್ಷಣೆ ಮಾಡಿದ್ದಾರೆ. ನಂತರ ಪಾಲಕರಿಗೆ ಮಾಹಿತಿ ನೀಡಿ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಮತ್ತು ಇಂಜೆಕ್ಷನ್‌ ಕೊಡಿಸಿದ್ದಾರೆ. ತೀವ್ರ ಗಾಯದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿದೆ. ಮಾಹಿತಿ ಸಿಗುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿ ವಿಚಾರಣೆ ಮಾಡುತ್ತಿರುವುದಾಗಿ ಭಜಂತ್ರಿ ತಿಳಿಸಿದರು. ನಾಯಿಗಳು ದಾಳಿ ನಡೆಸಿರುವ ಸ್ಥಳದಲ್ಲಿ ತ್ಯಾಜ್ಯ ಸಂಗ್ರಹವಾಗಿರಲಿಲ್ಲ. ಆದರೆ, ಅದು ಜನರು ಓಡಾಡುವಂತಹ ಸ್ಥಳವಲ್ಲ ಎಂದು ಅವರು ಹೇಳಿದರು.


ವಿಭೂತಿಪುರದಲ್ಲಿ ನಾಯಿ ದಾಳಿಗೆ ಬಾಲಕ ಬಲಿಯಾಗಿದ್ದ

2018ರ ಆಗಸ್ಟ್‌ ಕೊನೆ ವಾರದಲ್ಲಿ ವಿಭೂತಿಪುರ ಕೆರೆ ಸಮೀಪ ಬೀದಿ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ 11 ವರ್ಷದ ಬಾಲಕ ಸಾವನ್ನಪ್ಪಿದ್ದ. ವಿಭೂತಿಪುರ ಕೆರೆ, ವಿಜ್ಞಾನ ನಗರ ಸುತ್ತಲಿನ ಕೊಳೆಗೇರಿ ಪ್ರದೇಶಗಳ ಸಮೀಪದಲ್ಲಿ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಆಗಾಗ ನಡೆಯುತ್ತಲೇ ಇರುತ್ತವೆ. ಮಾಂಸದ ತ್ಯಾಜ್ಯ, ಕಸವನ್ನು ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಬಿಸಾಡುವ ಕಾರಣ ಬೀದಿ ನಾಯಿಗಳು ಹೆಚ್ಚಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.