Tuesday, November 19, 2024
ಸುದ್ದಿ

ಯಾದಗಿರಿ ಜಿಲ್ಲೆ ಸುರಪುರದಲ್ಲಿ ಮೊಸಳೆ ಬಾಯಿಗೆ ಸಿಲುಕಿ ಪಾರಾದ ಮೀನುಗಾರ-ಕಹಳೆ ನ್ಯೂಸ್

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮೀನುಗಾರರೊಬ್ಬರಿಗೆ ಮೊಸಳೆ ಕಚ್ಚಿದೆ. ಆದರೂ, ಮೊಸಳೆ ಬಾಯಿಯಿಂದ ಪಾರಾಗಿ ಬಂದಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಸುರಪುರ: ಇಲ್ಲಿಯ ಮೀನುಗಾರನೊಬ್ಬ ಮೊಸಳೆ ಬಾಯಿಗೆ ಸಿಲುಕಿ ಪಾರಾದ ಘಟನೆ ತಾಲೂಕಿನ ಹೇಮನೂರು ಸಮೀಪದ ಕೃಷ್ಣಾ ನದಿಯ ದಂಡೆಯಲ್ಲಿ ಭಾನುವಾರ ನಡೆದಿದೆ. ನಗರದ ಬೋವಿಗಲ್ಲಿಯ ಜಟ್ಟೆಪ್ಪ ನಾಗಪ್ಪ(40) ಮೊಸಳೆಯಿಂದ ತಪ್ಪಿಸಿಕೊಂಡು ಬಂದಿರುವ ಸಾಹಸಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಬೆಳಗ್ಗೆ ಕೃಷ್ಣಾ ನದಿಯಲ್ಲಿ ಎಂದಿನಂತೆ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ದಡದ ಸಮೀಪವಿದ್ದ ಮೊಸಳೆಯೊಂದು ನಾಗಪ್ಪನ ಎಡಗಾಲನ್ನು ಕಚ್ಚಿ ಹಿಡಿಯಿತು. ಕೂಡಲೇ ಅವರು ಕಾಲು ಕೊಡವಿ, ಭಾರಿ ಸಾಹಸದಿಂದ ಅದರ ಹಿಡಿತದಿಂದ ತಪ್ಪಿಸಿಕೊಂಡರು. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಕಾಲಿಗೆ 16 ಹೊಲಿಗೆ ಹಾಕಲಾಗಿದೆ.

ಅಸಮಾಧಾನ: ಕೃಷ್ಣಾ ನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ನದಿಗೆ ಇಳಿಯುವ ಮೀನುಗಾರರು, ನದಿ ದಾಟುವವರ ಮೇಲೆ ಮೊಸಳೆಗಳು ದಾಳಿ ನಡೆಸುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಮೀನುಗಾರರ ಸಂಘದ ಅಧ್ಯಕ್ಷ ಹಣಮಂತ ಉಳ್ಳಗಡ್ಡೆ, ಉಪಾಧ್ಯಕ್ಷ ಮಾನಪ್ಪ ಚಳ್ಳಿಗಿಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.