ರಾಮನಗರ: ಬಿಗ್ ಬಾಸ್ ಸೀಸನ್- 5ರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಿಗ್ ಬಾಸ್ ಸೆಟ್ ಸುಟ್ಟು ಕರಕಲಾದ ಘಟನೆ ರಾಮನಗರದ ಬಿಡದಿಯಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದಿದೆ.
ಸುಮಾರು 3 ಗಂಟೆಗೆ ಬಿಗ್ ಬಾಸ್ ಮನೆಯಲ್ಲಿರುವ ಸ್ವಾಗತ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅಗ್ನಿ ದುರಂತ ಸಂಭವಿಸಿದೆ. ಸುಮಾರು 13 ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಹಾಸ ಪಡುತ್ತಿದ್ದಾರೆ.
ಇಡೀ ಬಿಗ್ ಬಾಸ್ ಸೆಟ್‍ಗೆ ಬೆಂಕಿ ಆವರಸಿಕೊಂಡಿದ್ದು, ಮೇಣದ ಮ್ಯೂಸಿಯಂನಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹಲವು ಮೇಣದ ಪ್ರತಿಮೆಗಳು ಬೆಂಕಿಗೆ ಆಹುತಿಯಾಗಿದೆ. ವೀಡಿಯೋ ಎಡಿಟಿಂಗ್ ಹಾಗೂ ಬಿಗ್ ಬಾಸ್ ಮನೆಯ ರೆಸ್ಟ್ ಆವರಣದವರೆಗೂ ಹಾಗೂ ಸ್ಪರ್ಧಿಗಳು ಕೂತು ಹರಟೆ ಹೊಡೆಯುತ್ತಿದ್ದ ಅಂಗಳದವರೆಗೂ ಬೆಂಕಿ ವ್ಯಾಪಿಸಿದೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಹೆಚ್ಚಿನದ್ದಾಗಿ ಮರದ ಹಲಗೆಗಳಿಂದ ಈ ಮನೆ ನಿರ್ಮಿಸಿದ್ದು, ಬಿಗ್ ಬಾಸ್ ಮನೆಯ ಒಳಗೆಲ್ಲ ಬೆಂಕಿ ಆವರಿಸಿಕೊಂಡಿದೆ. ಈಗಾಗಲೇ ಒಟ್ಟು 13 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಈಗ ಬೆಂಕಿ ನಂದಿಸಲು ಮತ್ತೆರಡು ವಾಹನಗಳ ಆಗಮಿಸಿದೆ. ರಾಮನಗರ, ಕನಕಪುರದಿಂದ 9 ಅಗ್ನಿಶಾಮಕ ವಾಹನ, ಬಾಷ್ ಮತ್ತು ಟೊಯೋಟಾ ಕಂಪನಿಗಳ 3 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ನಿಯಂತ್ರಣಕ್ಕೆ ಬಾರದ ಬೆಂಕಿ ನಂದಿಸಲು ಅಗ್ನಿಶಾಮಕ ಪಡೆ ಹರಸಾಹಸ ಪಡುತ್ತಿದ್ದಾರೆ.
ಜಾಹೀರಾತು
ಈ ಅಗ್ನಿ ಅವಘಡದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಗ್ನಿ ಅನಾಹುಯತದ ಒಂದಿಷ್ಟು Exclusive ತುಣುಕುಗಳು ಕಹಳೆ ನ್ಯೂಸ್ ನಲ್ಲಿ ಲಭ್ಯ – (Subscribe Our YouTube channel)
ಕಲ್ಲಡ್ಕ: ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರತಾಪ ಕ್ರೀಡಾಸಂಘದ ವತಿಯಿಂದ ಅಂತರ್ ಕಾಲೇಜು ಮಟ್ಟದ ಕಬಡ್ಡಿ ಲೀಗ್ (ಮ್ಯಾಟ್...
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಪುತ್ತೂರು ಘಟಕದ ವತಿಯಿಂದ ಏ. 16 ಮತ್ತು 17ರಂದು...
ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಮಸೀದಿಗೆ ಸಂಬಂಧಿಸಿದ ಕಟ್ಟಡವೊಂದರ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃ*ತದೇಹ ಪತ್ತೆಯಾಗಿದೆ. ಮಸೀದಿಯ ವ್ಯವಸ್ಥಾಪಕ ಸುಹೇಲ್ ಅವರು ನಿನ್ನೆ ಶೌಚಾಲಯಕ್ಕೆ ಹೋದಾಗ ಮೃ*ತಪಟ್ಟ...
ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್.17ರ ನೇತ್ರಾವತಿಯ ಹಳೆಯ ಸೇತುವೆಯ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆ ಸಭಾಧ್ಯಕ್ಷ ಯು.ಟಿ. ಖಾದರ್ ಎ.15ರ ಮಂಗಳವಾರ...