ಜೇಸಿಐ ಕುಂದಾಪುರದ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ, ಮತ್ತು ಚಿತ್ರಕಲಾ ಸ್ಪರ್ಧೆ ಕುಂದಾಪುರದ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಯಲ್ಲಿ ನಡೆಯಿತು.ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿಐ ಸೆಂಟರ್ ಸದಾನಂದ ನಾವಡ ವಿದ್ಯಾರ್ಥಿಗಳಿಗೆ ಭಾವೈಕ್ಯತೆಯ ಪ್ರಮಾಣವಚನ ಬೋಧಿಸಿದರು.ಇನ್ನು ವಕೀಲರಾದ ಶರತ್ ಶೆಟ್ಟಿ ಕುಂದಾಪುರ ಹೊನೆಸ್ಟಿ ಶಾಪ್ ಉದ್ಘಾಟಿಸಿದರು. ಜೇಸಿ ವಲಯ ತರಬೇತು ವಿಭಾಗದ ನಿರ್ದೇಶಕರಾದ ಜೇಸಿಐ ಸೆನೆಟರ್ ಅಶೋಕ್ ತೆಕ್ಕಟ್ಟೆ ಹೊನೆಸ್ಟಿ ಶಾಪ್ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿದರು.ಮಕ್ಕಳು ಸ್ವಪ್ರೇರಿತ ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಲು ಹೊನೆಸ್ಟಿ ಶಾಪ್‍ನ ಉಪಯುಕ್ತತೆಯನ್ನು ವಿವರಿಸಿದರು.
ನಂತರ ವಿದ್ಯಾರ್ಥಿಗಳಿಗೆ “ಭಾವೈಕ್ಯತೆ” ವಿಷಯವಾಗಿ ಚಿತ್ರಕಲಾ ಸ್ಪರ್ಧೆ ನಡೆಯಿತು. ಸಮಾರಂಭದಲ್ಲಿ ಜೇಸಿಐ ಕುಂದಾಪುರದ ಅಧ್ಯಕ್ಷರಾದ ಜೇಸಿ ಸತೀಶ್ ಕೆ ಮೊಗವೀರ, ಶಾಲಾ ಉಪ ಪ್ರಾಂಶುಪಾಲರಾದ ಶುಭಾ, ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್, ಜೇಸಿಐ ನ ಪೂರ್ವ ವಲಯ ಉಪಾಧ್ಯಕ್ಷೆ ಜೇಸಿಐ ಸೆನೆಟರ್ ಅಕ್ಷತಾ ಗಿರೀಶ್, ಜೇಸಿಐ ಕುಂದಾಪುರದ ಕಾರ್ಯದರ್ಶಿ ಜೇಸಿ ಸುಧಾಕರ ಕಾಂಚನ್, ಜೆಸಿರೆಟ್ ಅಧ್ಯಕ್ಷೆ ನಾಗರತ್ನ ಚಂದ್ರಶೇಖರ್, ಜೇಜೆಸಿ ಅಧ್ಯಕ್ಷ ಅಶ್ವಥ್ ಕೆಂಚನೂರು, ಉಪಾಧ್ಯಕ್ಷ ಜೇಸಿ ರಾಕೇಶ್ ಶೆಟ್ಟಿ, ಕೋಶಾಧಿಕಾರಿ ಜೇಸಿ ಚೇತನ್ ದೇವಾಡಿಗ, ಕಾರ್ಯಕ್ರಮ ನಿರ್ದೇಶಕ ಜೇಸಿ ಸುನಿಲ್ ಗುಲ್ವಾಡಿ ಹಾಗೂ ಶಾಲಾ ಶಿಕ್ಷಕ ಬಳಗದವರು ಹಾಗೂ ಕಾರ್ಯಕ್ರಮದ ನಿರ್ದೇಶಕರಾದ ಸುನೀಲ್ ಕುಮಾರ್ ಗುಲ್ವಾಡಿ ಉಪಸ್ಥಿತರಿದ್ದರು.