Sunday, January 19, 2025
ಸುದ್ದಿ

Supper Exclusive : ಕಟೀಲು ಮೇಳವನ್ನು ಖರೀದಿಸಲು ಪಟ್ಲ ಫೌಂಡೇಷನ್ ಹೊರಟಿಲ್ಲ | ಪಟ್ಲ ಸತೀಶ್ ಶೆಟ್ಟಿಯವರ ಮನದ ಮಾತು ಏನು ? – ಕಹಳೆ ನ್ಯೂಸ್

ಕಟೀಲು : ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಮನಬಿಚ್ಚಿ ಮಾತನಾಡಿದ್ದಾರೆ. ಎಕ್ಕಾರು ಪಟ್ಲ ಫೌಂಡೇಷನ್  ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಿಂದಕರಿಯಬೇಕು ಆಗ ನಾವು ಬೆಳೆಯುತ್ತೇವೆ. ನಮ್ಮಲ್ಲಿ ಯಾವ ದುರುದ್ದೇಶವೂ ಇಲ್ಲ, ಇದು ನಮ್ಮ ಏಳಿಗೆ ಸಹಿದಿರುವವರ ಶಡ್ಯಂತ್ರ ಎಂದು ಹೇಳಿದರು.

Highlights : 
‘ ನಿಂದಕರಿರಬೇಕಯ್ಯ ‘ –  ಕಟೀಲು ಮೇಳವನ್ನು ಖರೀದಿಸಲು ಪಟ್ಲ ಫೌಂಡೇಷನ್ ಹುಟ್ಟಿಲ್ಲ!  ; ಯಾವತ್ತೂ ಅಂತಹ ಯೋಚನೆ ನಮಗಿಲ್ಲ , ಸಮಾಜಿಕ ಜಾಲತಾಣಗಳಲ್ಲಿ ಫೌಂಡೇಷನ್ ಬಗ್ಗೆ ಅಪಪ್ರಚಾರ ಸರಿಯಲ್ಲ – ಪಟ್ಲ ಸತೀಶ್ ಶೆಟ್ಟಿ
ಪಟ್ಲ ಸತೀಶ್ ಶೆಟ್ಟಿ
ವಾಟ್ಸಾಪ್ ಫೇಸ್ಬುಕ್ ಗಳಲ್ಲಿ ಪಟ್ಲ ಫೌಂಡೇಷನ್ ಬಗ್ಗೆ ಬರುವುದನ್ನು ನೋಡುವಾಗ ಸಂತಸವಾಗುತ್ತೆ. ಕಟೀಲು ಕ್ಷೇತ್ರದ ಬಗ್ಗೆ ನಮಗೆ ಅವಿನಾಭಾವ ಸಂಬಂಧ, ವ್ಯಕ್ತಿಗತವಾಗಿ ಯಾರ ಭಯವೂ ಇಲ್ಲ, ಆದರೆ, ಕಟೀಲು ತಾಯಿಯ ಭಯ ಇದೆ.
ಪಟ್ಲ ಫೌಂಡೇಷನ್ ಬಗ್ಗೆ ನಿಂದನೆಗಳು ಬಂದಷ್ಟು ನಾವು ಬೆಳೆಯುತ್ತೇವೆ. ‘ ನಿಂದಕರಿರಬೇಕಯ್ಯ ‘ , ನಿಂದನೆ ಮಾಡುವವರ ಸಾಧನೆ ಶೂನ್ಯ .
ಪಟ್ಲ ಫೌಂಡೇಷನ್ ಪಟ್ಲ ಅಭಿಮಾನಿಗಳದ್ದು, ಅಭಿಮಾನಿಗಳಿಂದಲೇ ನಿರ್ಮಾಣವಾದದ್ದು ಪಟ್ಲ ಫೌಂಡೇಷನ್ , ಇದರಲ್ಲಿ ಇರುವ ಹಣ ನನ್ನ ಮೇಲಿನ ಅಭಿಮಾನದಿಂದ ಅಭಿಮಾನಿಗಳು ನೀಡಿದ ದೇಣಿಗೆ ಇದರಲ್ಲಿ ಯಾರಿಗೋ ಹಕ್ಕಿಲ್ಲ!
ಕಟೀಲು ಮೇಳದ ಸೇರ್ಪಡೆಯ ಸಮಯವನ್ನು ಮೆಲುಕುಹಾಕಿದ ಪಟ್ಲ ಸತೀಶ್ ಶೆಟ್ಟಿ  :
ಜಾಹೀರಾತು
ಕಳೆದ ಹದಿನೆಂಟು ವರ್ಷದ ಹಿಂದೆ  ಕಲ್ಲಾಡಿ ವಿಠಲ ಶೆಟ್ಟಿಯವರ ಯಜಮಾನಿಕೆಯಲ್ಲಿ ಕಟೀಲು ಮೇಳದ ಸೇರಿದೆ. ಯಾವತ್ತೂ ಕಲ್ಲಾಡಿ ಮನೆತನಕ್ಕೆ ನಾನು ಖುಣಿ. ನನ್ನನ್ನು ಕೈಯಾರೆ ಬೆಳೆಸಿದವರು ವಿಠಲ ಶೆಟ್ರು. ಒಂದು ತಿಂಗಳು ಕುರಿಯ ಶಾಸ್ತ್ರಿಗಳ ಮೇಳದಲ್ಲಿದ್ದೆ, ಆ ನಂತರ ಬಲಿಪ ನಾರಾಯಣ ಭಾಗವತರ ಮೇಳಕ್ಕೆ ಬಂದೆ, ಕುರಿಯದವರ ಮೇಳದಲ್ಲಿ ಸಂಗೀತಕ್ಕೆ ಸೇರಿದವ ನಾನು. ಆಗ ವಿಠಲ ಶೆಟ್ಟಿಯವರು ನನ್ನ ಸಂಗೀತವನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿ ನನ್ನನ್ನು  ಎರಡನೇ ಸಂಗೀತಕ್ಕೆ  ಕುಳಿತಿಕೊಳ್ಳಿಸುವಂತೆ ಮೇಳದ ಮ್ಯಾನೇಜರ್ ಗಂಗಯ್ಯ ಶೆಟ್ಟಿಯವರಿಗೆ ಹೇಳಿದ್ದರು. ಅಂತೆಯೇ ಅವರು ಮಾಡಿದರು. ಆಗ ಅದು ದೊಡ್ಡ ವಿವಾಧವಾಗಿ ಮಾರ್ಪಾಡಾಗಿತ್ತು. ನಂತರ ಬಲಿಪರ ಮೇಳದಲ್ಲೂ ಅಪಸ್ವರ ಎದಿತ್ತು. ಮೇಳಕ್ಕೆ ಸೇರಿದಲ್ಲಿಂದ ಇಲ್ಲಿಯ ವರೆಗೂ ಅಪವಾದ, ಅಪಮಾನಗಳನ್ನು ಸ್ವೀಕರಿಸುತ್ತಾ ಬಂದಿದ್ದೇನೆ.
ಜಾಹೀರಾತು
ಗೊಂದಲಗಳಿಗೆ ಉತ್ತರ : 
ಎರಡನೇ ಮೇಳದ ಆಗಿನ ಮ್ಯಾನೇಜರ್ ರಾಜೀವ್ ಶೆಟ್ಟಿಯಾಗಿದ್ದರು. ಆಗ ಗುರುಪ್ರಸಾದ್ ಬೊಳಿಂಜಡ್ಕ ಎಂಬ ಮದ್ದಳೆಗಾರನಿಗೆ ಮಾರಣಾಂತಿಕ ನಲ್ಲೆಯನ್ನು ಮೇಳದ ಸಹಕಲಾವಿದ ನಡೆಸಿದಾಗ ನಾನು ಅದನ್ನು ಖಂಡಿಸಿದ್ದೆ. ನನಗೆ ತಂಬಾ ನೋವಾಯಿತು. ಮ್ಯಾನೇಜರ್ ಬಳಿ ನಾನು ಈ ಪ್ರಕರಣ ಇತ್ಯರ್ಥವಾಗದೆ ಚಾಕಟೆ ಹಿಡಿಯುದಿಲ್ಲ ಎಂದಿದ್ದೆ. ಈ ವಿಚಾರ ಅರಿತ ಧನಿಗಳು ಎಲ್ಲಾ ಕಲಾವಿದರಿಗೂ ಬೈದು, ಹಲ್ಲೆ ನಡೆಸಿದ ಕಲಾವಿದನನ್ನು ಮೇಳದಿಂದ ಹೊರಗಿರಿಸಿ, ಮೇಳದ ಮ್ಯಾನೇಜರನ್ನು ಹೊರಗೆ ಕಳುಹಿಸಿ, ಬೀಗದ ಕೀ ಪಡೆದು ನನ್ನ ಕೈಗಿತ್ತು ವಿಠಲ ಶೆಟ್ಟಿಯವರು ಹೋಗಿ ಅಲ್ಲಿ ಕುಳಿತಿಕೋ ನೀನು ಮ್ಯಾನೇಜರ್ ಆಗಿ ಕಾರ್ಯನಿರ್ವಹಣೆ ಮಾಡು ಎಂದು ಆಜ್ಞಾಪಿಸಿದ್ದರು. ಆಗ ನಾನು ಅದನ್ನು ಒಪ್ಪದೆ ಧನಿಗಳ ಕೈಕಾಲು ಹಿಡಿದು ಮತ್ತೆ ರಾಜೀವಣ್ಣನನ್ನೇ ಆಸ್ಥಾನದಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದೆ, ನಾನೇನಾದರೂ ಸ್ವಾರ್ಥಿಯಾಗಿದ್ದರೆ ಅಂದೆ ಮ್ಯಾನೇಜರ್ ಆಗುತ್ತಿದೆ. ಅಂತಹ ಸ್ವಾರ್ಥಿ ನಾನಲ್ಲ. ನಂತರ ಎರಡು ಮೂರು ವರ್ಷ ಕಳೆದ ಮೇಲೆ ದೇವಿಪ್ರಸಾದ ಶೆಟ್ಟಿಯವರಿಗೆ ಮೇಳ ಸಿಕ್ಕಿತು. ಆಗ ಐದನೇ ಮೇಳ ಆರಂಭವಾಯಿತು. ಆಗಲೂ ಸುಣ್ಣಂಬಳ ವಿಶ್ವೇಶ್ವರ ಭಟ್ಟರೂ ಹಾಗೂ ಕಲ್ಲಾಡಿ ದೇವಿಪ್ರಸಾದ ಶೆಟ್ಟಿಯವರು ಮ್ಯಾನೇಜರ್ ಆಗುವಂತೆ ಒತ್ತಾಯಿಸಿದ್ದರು ನಾನು ನಯವಾಗೇ ನಿರಾಕರಿಸಿದ್ದೇನೆ. ಯಾಕೆ ಇದನ್ನು ಉಲ್ಲೇಖಿಸಿದೆ ಎಂದರೆ ಪಟ್ಲ ಫೌಂಡೇಷನ್ ಕಟೀಲು ಮೇಳವನ್ನು ತೆಗೆದುಕೊಳ್ಳಲು ಹೊರಡುತ್ತೆದೆ ಎಂದು ಹೇಳುತ್ತಿದ್ದಾರೆ. ಅಂತಹದನ್ನೇ ನಾನು ಸ್ವೀಕರಿಸಿಲ್ಲ, ನನಗೆ ಕೇವಲ ಭಾಗವತಿಕೆ ಮಾಡುವ, ಕಟೀಲು ತಾಯಿಯ ಸೇವೆ ಮಾಡುವ ಅವಕಾಶ ಸಾಕು. ಇದು ಪಟ್ಲ ಫೌಂಡೇಷನ್ನಿನ ಏಳಿಗೆಯನ್ನು ಸಹಿದವರ ಕೆಲಸ, ಪಟ್ಲದವರ ಕುಂತಂತ್ರದಿಂದಾಗಿ ಪಟ್ಲ ಫೌಂಡೇಷನ್ ಇದಕ್ಕಾಗಿ ಹೊರಡುತ್ತದೆ ಎನ್ನುತ್ತಿದ್ದಾರೆ. ಆದರೆ , ನಮಗೆ ಯಾವತ್ತೂ ಅದರ ಕಲ್ಪನೆಯೂ ಕೂಡಾ ಇಲ್ಲ, ಯಾವ ಕಾರಣಕ್ಕೂ ಅಂತಹ ತಪ್ಪು ಕಲ್ಪನೆ ನನ್ನ ಆದಿಯಾಗಿಯೂ ಬರ್ಲಿಕಿಲ್ಲ ಎಂದು ಕಟೀಲು ತಾಯಿಯ ಸಾಕ್ಷಿಯಾಗಿ ಹೇಳುತ್ತೇನೆ ಎಂದು ಪಟ್ಲ ಫೌಂಡೇಷನ್ನಿನ ಸ್ಥಾಪಾಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಹೇಳಿದರು.
logo

https://youtu.be/i5bQTij4YQE

ಜಾಹೀರಾತು
ಜಾಹೀರಾತು
ಜಾಹೀರಾತು
ಪಟ್ಲ ಸತೀಶ್ ಶಟ್ಟಿಯವರ ಸಂಪೂರ್ಣ ಭಾಷಣ ವಿಡಿಯೋ ಕಹಳೆ ನ್ಯೂಸ್ ನಲ್ಲಿ ಲಭ್ಯ – ( Subscribe Kahalenews  YouTube Channel)

ಜಾಹೀರಾತು
ಜಾಹೀರಾತು
ಜಾಹೀರಾತು