Recent Posts

Sunday, January 19, 2025
ಸುದ್ದಿ

ಶ್ರೀಕ್ಷೇತ್ರ ಒಡಿಯೂರಿನಲ್ಲಿ ತುಳು ಸಾಹಿತ್ಯ ಸಮ್ಮೇಳನ ” ತುಳು‌ನಾಡ ಜಾತ್ರೆ “ಯ ಸಂಭ್ರಮ – ಕಹಳೆ ನ್ಯೂಸ್

ವಿಟ್ಲ : ಮನೆ ಮನೆಗಳಲ್ಲಿ ತುಳು ಭಾಷೆ ಮಾತನಾಡುವ ಮೂಲಕ ಆರಾಧನೆ ನಡೆಯಬೇಕು. ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸುವಲ್ಲಿ ತುಳುವರು ಪ್ರಯತ್ನಿಸಬೇಕು. ಆಂಗ್ಲ ಭಾಷೆಯ ಬಗೆಗಿನ ವ್ಯಾವೋಹವನ್ನು ತೊರೆದು ತುಳುವಿನ ಬಗ್ಗೆ ಒಲವು‌ ತೋರಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಒಡಿಯೂರು ರಥೋತ್ಸವ- ತುಳುನಾಡ ಜಾತ್ರೆಯ ಪ್ರಥಮ ದಿನವಾದ ಫೆ.೩ರಂದು ತುಳು ಬಾಷೆ ಸಂಸ್ಕೃತಿ ಉಳಿವಿಗಾಗಿ ನಡೆದ ‘ಇರುವನೇ ಐಸಿರೊ’ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ, ಅಶೀರ್ವಚನ ನೀಡಿದರು.

ಸಮ್ಮೇಳನಾಧ್ಯಕ್ಷತೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಎ ಸುಬ್ಬಣ್ಣ ರೈ ರವರು ವಹಿಸಿದ್ದರು. ಸಾಧ್ವೀ ಮಾತಾನಂದ ಮಯೀ ದಿವ್ಯ ಉಪಸ್ಥಿತರಿದ್ದರು.ಮುಖ್ಯ ಅತಿಥಿಯಾಗಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಡಾ. ಪಿ.ಎಸ್ ಎಡಪಡಿತ್ತಾಯ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲ್ಯಾನ್, ಮಲಾರ್ ಜಯರಾಮ ರೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಲಾರ್ ಜಯರಾಮ ರೈ ಅವರ ಸಂಪದಕತ್ವದಲ್ಲಿ ರಚಿಸಲಾದ ‘ಅವಧೂತನ ಪಜ್ಜೆಲು’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಬೆಳಿಗ್ಗೆ ಸಂಸ್ಥಾನದಿಂದ ಸಭಾ ವೇದಿಕೆ ವರೆಗೆ ಮೆರವಣಿಗೆ ನಡೆಯಿತು.

 

ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಎ ಸುಬ್ಬಣ್ಣ ರೈ ರವರನ್ನು ಸನ್ಮಾನಿಸಲಾಯಿತು. ಒಡಿಯೂರು ಗ್ರಾಮ ವಿಕಾಸ ಯೋಜನೆಯ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಎಸ್ ರೈ ಪ್ರಾರ್ಥಿಸಿದರು. ತುಳು ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಡಾ. ವಸಂತಕುಮಾರ್ ಪೆರ್ಲ ಸ್ವಾಗತಿಸಿದರು. ಜಯಪ್ರಕಾಶ್ ವಂದಿಸಿದರು. ಯಶವಂತ ವಿಟ್ಲರವರು ಸನ್ಮಾನಿತರನ್ನು ಪರಿಚಯಿಸಿದರು.