Sunday, January 19, 2025
ಸಿನಿಮಾ

ಚಪ್ಪಲಿಯನ್ನು ಚಪ್ಪರಿಸಿ ತಿಂದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ – ಕಹಳೆ ನ್ಯೂಸ್

ಮುಂಬೈ: ಬಾಲಿವುಡ್‍ನ ಹಾಟ್ ಸುಂದರಿ ಮಂಗಳೂರಿನ ಮಗಳು ಶಿಲ್ಪಾ ಶೆಟ್ಟಿ ಚಪ್ಪಲಿಯನ್ನು ಚಪ್ಪರಿಸಿ ತಿಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಆರೇ ಶಿಲ್ಪಗೇ ಚಪ್ಪಲಿಯನ್ನು ತಿನ್ನುವಂತಹದ್ದು ಏನ್ ಆಗಿದೆ ಅಂತೀದಿದ್ದರಾ? ಶಿಲ್ಪ ತಿಂದಿರುವುದು ಚಪ್ಪಲಿಯನ್ನಲ್ಲ ಬದಲಿಗೆ ಚಪ್ಪಲಿ ಆಕಾರದಲ್ಲಿರುವ ಚಾಕಲೇಟ್ ಕೇಕ್ ಅನ್ನು ಸವಿದಿದ್ದಾರೆ. ಅವರು ಚಪ್ಪಲಿ ರೀತಿಯಲ್ಲಿರುವ ಚಾಕಲೇಟ್ ಕೇಕ್ ಅನ್ನು ತಿನ್ನುತಿರುವ ವಿಡಿಯೋವನ್ನು ಸ್ವತಃ ಅವರೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯೋಗ ಮತ್ತು ಡಯೇಟ್ ಮಾಡಿ ಫಿಟ್ ಅಂಡ್ ಫೈನ್ ಆಗಿರುವ ಶಿಲ್ಪಾ ಅವರು ಚೆನ್ನಾಗಿ ತಿನ್ನುತ್ತಾರೆ. ಹಾಗಾಗಿ ಭಾನುವಾರ ವೀಕೆಂಡ್ ಎಂಜಾಯ್ ಮಾಡಿರುವ ಶಿಲ್ಪಾ ಶೆಟ್ಟಿ ಅವರು, ಚಪ್ಪಲಿ ರೀತಿಯಲ್ಲಿ ತಯಾರಾದ ಚಾಕಲೇಟ್ ಕೇಕ್ ಅನ್ನು ತಿಂದು ಅದನ್ನು ವಿಡಿಯೋ ಮಾಡಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಪ್ಪಲಿಯನ್ನು ತಿನ್ನುತ್ತೀರಾ? “ವಿಶೇಷ ಭಾನುವಾರ ವಿಶಿಷ್ಟ ಅಕಾರದ ಚಾಕಲೇಟ್ ಕೇಕ್‍ನೊಂದಿಗೆ” ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ವಿಭಿನ್ನ ವಿಭಿನ್ನ ರೀತಿಯ ಚಾಕಲೇಟ್ ಕೇಕ್. ಆದರೆ ಇದು ಚಪ್ಪಲಿ ಆಕಾರದಲ್ಲಿರುವ ಚಾಕಲೇಟ್. ಇದಕ್ಕೆ ನಾನು ಚಪ್ಪಲಿಯನ್ನು ತಿನ್ನುತ್ತೀರಾ ಎಂದು ಪ್ರಶ್ನಿಸಿದ್ದೆ. ಇದನ್ನು ನಾವು ತಿನ್ನಬಹುದು. ತಿಂದು ನನಗೆ ಇಷ್ಟವಾಯಿತು ಎಂದು ಹೇಳಿ ಸಂಡೇ ಬೆಂಜ್ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.