Recent Posts

Monday, January 20, 2025
ಸುದ್ದಿ

ಮದುವೆ ಆಗೋದಾಗಿ ಅತ್ಯಾಚಾರ ಎಸಗಿ ಕೈಕೊಟ್ಟ ಪ್ರಿಯಕರ – ಕಹಳೆ ನ್ಯೂಸ್

ನೊಂದ ಯುವತಿ ಖಾಸಗಿ ಕಂಪನಿಯಲ್ಲಿ ಸ್ವಾಗತ ಕಾರಣಿಯಾಗಿ ಕೆಲಸ ಮಾಡಿಕೊಂಡು ಬಸವೇಶ್ವರ ನಗರದ ಪಿಜಿಯೊಂದರಲ್ಲಿ ವಾಸಿಸುತ್ತಿದ್ದಳು. ಈ ವೇಳೆ ಯುವತಿಗೆ ಅದೇ ಏರಿಯಾದ ಸೈಬರ್ ನಲ್ಲಿ ಕೆಲಸ ಮಾಡುತ್ತಿದ್ದ ಸಚಿನ್ ಪರಿಚಯವಾಗುತ್ತೆ. ಇವರಿಬ್ಬರ ಪರಿಚಯ ಸ್ನೇಹವಾಗಿ ತಿರುಗಿತು. ಈ ವೇಳೆ ಸಚಿನ್ ನಾನು ಸಿನಿಮಾದಲ್ಲಿ ಶೂಟಿಂಗ್ ಮಾಡುತ್ತಿದ್ದೇನೆ ಎಂದು ಯುವತಿಗೆ ನಂಬಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯುವತಿ ಕಂಪನಿ ಬದಲಾವಣೆ ಮಾಡಿ ಲಗ್ಗೆರೆ ಕಡೆ ತನ್ನ ಮನೆಯನ್ನು ಶಿಫ್ಟ್ ಮಾಡಿದ್ದಳು. ಆಗ ಸಚಿನ್ ಯುವತಿಯ ಮನೆಗೆ ಹೋಗಿ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಮೂರ್ನಾಲ್ಕು ಬಾರಿ ಅತ್ಯಾಚಾರ ಎಸಗಿದ ಬಳಿಕ ಮದುವೆ ಆಗುವಂತೆ ಯುವತಿ ಸಚಿನ್ ಬಳಿ ಕೇಳಿದ್ದಾಳೆ. ಆದರೆ ಆರೋಪಿ ಸಚಿನ್ ಮದುವೆ ಆಗಲು ಹಿಂದೆ ಮುಂದೆ ನೋಡುತ್ತಿದ್ದನು.

ಯುವತಿ ತನ್ನ ಹಾಗೂ ಯುವಕ ಮನೆಯವರಿಗೆ ನಡೆದ ಘಟನೆಗಳ ಬಗ್ಗೆ ವಿವರಿಸಿದ್ದಳು. ಬಳಿಕ ಎರಡು ಮನೆಯವರು ಮದುವೆಗೆ ಒಪ್ಪಿಗೆ ನೀಡಿದ್ದರು. ಆದರೆ ಆರೋಪಿ ಸಚಿನ್ ಮಾತ್ರ ಮದುವೆ ಆಗಲು ನಿರಾಕರಿಸಿದ್ದಾನೆ. ಪ್ರಿಯಕರನ ನಡೆಯಿಂದ ರೋಸಿ ಹೋಗಿರುವ ಯುವತಿ ಆತನ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸಚಿನ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.