ರಾಘವೇಶ್ವರಭಾರತೀ ಶ್ರೀಗಳ ವಿರುದ್ಧ ಅಪಪ್ರಚಾರಗೊಳಿಸುವ ಅಶ್ಲೀಲ ಸಿಡಿ ಪ್ರಕರಣ ; ಹಿಂಪಡೆಯಲು ನಿರ್ಧಾರವಾಗಿದ್ದ ಪ್ರಕರಣ ಮುಂದುವರಿಸಲು ರಾಜ್ಯ ಸರ್ಕಾರ ತೀರ್ಮಾನ – ಕಹಳೆ ನ್ಯೂಸ್
ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ನಿರ್ಮಿಸಿದ್ದ ಆಶ್ಲೀಲ ಸಿಡಿ ಪ್ರಕರಣವನ್ನು ಮುಂದುವರೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಮಾಧು ಸ್ವಾಮಿ, ಶ್ರೀಗಳ ಕೇಸ್ ವಾಪಸ್ ಪಡೆಯಲು ಹಿಂದಿನ ಸರ್ಕಾರ ಮುಂದಾಗಿತ್ತು. ಆದರೆ ಅದೇ ಪ್ರಕರಣ ಮುಂದುವರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸುವುದಾಗಿ ತಿಳಿಸಿದ್ದಾರೆ.
2010ರಲ್ಲಿ ಸಚಿವರ ಸ್ವಾಮೀಜಿ ಮಾನಹಾನಿಗೆ ಪ್ರಯತ್ನ ನಡೆದಿತ್ತು. ಈ ಸಂದರ್ಭದಲ್ಲಿ ಐದು ಮಂದಿ ಸಂಚು ರೂಪಿಸಿ ಅಶ್ಲೀಲ ಸಿಡಿ ತಯಾರಿಸಿದ್ದರು. ಶ್ರೀಗಳನ್ನು ಹೋಲುವ ವ್ಯಕ್ತಿಯನ್ನು ಬಳಸಿ ವಿಡಿಯೋ ಚಿತ್ರೀಕರಿಸಲಾಗಿತ್ತು. ಆರೋಪಿಗಳ ವಿರುದ್ಧ ಕುಮುಟಾ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ದಾಖಲಾಗಿತ್ತು. ಆದರೆ, ಒಂದಷ್ಟು ರಾಜಕೀಯ ಒತ್ತಡದಿಂದ ಹಿಂಪಡೆಯಲು ಚಿಂತಿಸಲಾದ ಈ ಪ್ರಕರಣವನ್ನು ಮುನ್ನಡೆಸಲು ಯೋಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.