Monday, November 18, 2024
ಸುದ್ದಿ

ಡೆಡ್ಲಿ ಕೊರೊನಾಗೆ ನಿನ್ನೆ ಒಂದೇ ದಿನ 73 ಬಲಿ, ಸತ್ತವರ ಸಂಖ್ಯೆ 563ಕ್ಕೆ ಏರಿಕೆ..!-– ಕಹಳೆ ನ್ಯೂಸ್

ಬೀಜಿಂಗ್, ಫೆ.6- ಚೀನಾದಲ್ಲಿ ಕೊರೊನಾ ವೈರಸ್‍ನಿಂದ ಮೃತಪಟ್ಟವರ ಸಂಖ್ಯೆ 563ಕ್ಕೆ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ 73 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಪರೀಕ್ಷೆಗೊಳಪಡಿಸಿದ 28,018 ಮಂದಿಯಲ್ಲಿ ಕೊರೊನಾ ವೈರಸ್ ರೋಗ ಲಕ್ಷಣವಿರುವುದು ದೃಢಪಟ್ಟಿದೆ ಎಂದು ಚೀನಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 

ನಿನ್ನೆ ಪರೀಕ್ಷೆಗೊಳಪಡಿಸಿದ 3,694 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ದಿನೇ ದಿನೇ ಕೊರೊನಾ ವೈರಸ್ ಇಡೀ ಚೀನಾದ್ಯಂತ ವಿಸ್ತರಿಸುತ್ತಿದ್ದು, 5,328 ಮಂದಿಯಲ್ಲಿ ರೋಗ ಲಕ್ಷಣಗಳು ಪತ್ತೆಯಾಗಿದ್ದು, ಅವರನ್ನು ತಪಾಸಣೆಗೊಳಪಡಿಸಲಾಗಿದೆ. ರೋಗ ಲಕ್ಷಣ ಪತ್ತೆಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 640 ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ. 3,859 ಮಂದಿ ಆಸ್ಪತ್ರೆಗಳಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರೋಗ ಲಕ್ಷಣ ಪತ್ತೆಯಾದ ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ವೈರಸ್ ಶರವೇಗದಲ್ಲಿ ಹಬ್ಬುತ್ತಿರುವುದರಿಂದ 3 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಳ್ಳ ತೊಡಗಿದ್ದು , 1.86 ಲಕ್ಷ ಮಂದಿಯ ಮೇಲೆ ನಿಗಾ ವಹಿಸಲಾಗಿದೆ. ಹಾಂಕಾಂಗ್‍ನಲ್ಲಿ 21 ಮಂದಿಗೆ ಕೊರೊನಾ ವೈರಸ್ ರೋಗ ಲಕ್ಷಣವಿರುವುದು ದೃಢಪಟ್ಟಿದೆ. ಮಕಾವೋದಲ್ಲಿ 10 ಹಾಗೂ ತೈವಾನ್‍ನಲ್ಲಿ 11 ಮಂದಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ವೈರಸ್‍ಗೆ ಹೊರ ರಾಷ್ಟ್ರಗಳಲ್ಲೂ ಸಾವು-ನೋವು ಸಂಭವಿಸತೊಡಗಿದೆ. ಹಾಂಕಾಂಗ್‍ನಲ್ಲಿ ಕೊರೊನಾ ವೈರಸ್‍ಗೆ ವ್ಯಕ್ತಿಯೊಬ್ಬ ಮೃತಪಟ್ಟ ಬೆನ್ನಲ್ಲೇ ಫಿಲಿಫೈನ್‍ನಲ್ಲೂ ರೋಗಿಯೊಬ್ಬ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ವುಹಾನ್‍ನಲ್ಲಿ ಆಸ್ಪತ್ರೆ ಸ್ಥಾಪಿಸಿ ಶರವೇಗದಲ್ಲಿ ಚಿಕಿತ್ಸೆ ಮುಂದುವರೆಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೋಗ ಲಕ್ಷಣಗಳು ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಚೀನಾ ವೈದ್ಯರು ಭರವಸೆ ವ್ಯಕ್ತಪಡಿಸಿದ್ದಾರೆ.

ಎಬೊಲಾ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಔಷಧಿ ಎಂದು ಗುರುತಿಸಿಕೊಂಡಿರುವ ರೆಮ್ಡೇಸಿವೀರ್ ಡ್ರಗ್ಸ್ ಆದಷ್ಟು ಬೇಗ ಚೀನಾಗೆ ಆಗಮಿಸಲಿದ್ದು , ಅದೇ ಔಷಧಿಯನ್ನು ಕೊರೊನಾ ವೈರಸ್ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಚೀನಾ ಸರ್ಕಾರ ತಿಳಿಸಿದೆ. ಮಾರಣಾಂತಿಕವಾಗಿ ಪರಿಣಮಿಸುತ್ತಿರುವ ಕೊರೊನಾ ವೈರಸ್ ನಿರ್ಮೂಲನೆಗೆ ಹಲವಾರು ಔಷಧೋಪಚಾರ ಕ್ರಮಗಳನ್ನು ಕೈಗೊಂಡಿರುವುದು ರೋಗ ಲಕ್ಷಣಕ್ಕೆ ಗುರಿಯಾದ ಯಾವೊಬ್ಬ ವ್ಯಕ್ತಿಯೂ ಇದುವರೆಗೂ ರೋಗ ಮುಕ್ತಗೊಂಡಿಲ್ಲದಿರುವುದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.