ಸುರತ್ಕಲ್: ಬಿಜೆಪಿ ಕಾರ್ಯಕರ್ತನೋರ್ವನಿಗೆ ನಾಲ್ವರ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಮುಂಚೂರು ಎಂಬಲ್ಲಿ ನಡೆದಿದೆ. ಮುಂಚೂರು ನಿವಾಸಿ ಬಿಜೆಪಿಯ ಸಕ್ರೀಯ ಕಾರ್ಯಕರ್ತ ಯಶೋಧರ(28) ಎಂಬವರಿಗೆ ಹಲ್ಲೆ ಮಾಡಿದ್ದು, ಇದೀಗ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ದಾರೆ.
ಯಶೋಧರ ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದು, ಸ್ಥಳೀಯವಾಗಿ ಪಕ್ಷ ಸಂಘಟನೆಯಲ್ಲಿ ಎತ್ತಿದ ಕೈ. ಕಳೆದ ಬಾರಿ ವಿಧಾನಸಭಾ ಚುನಾವಣೆ ಸಂದರ್ಭ ಪಕ್ಷದ ಪರ ದುಡಿದಿದ್ದ ಇವರ ಮೇಲೆ ಕಣ್ಣಿಟ್ಟಿದ್ದ ತಂಡ ಹಲ್ಲೆ ಮಾಡಿದೆ ಎಂದು ದೂರಲಾಗಿದೆ.
ದಿವಾಕರ್, ದಿನೇಶ್ ಶೆಟ್ಟಿ, ಅಶ್ವಿತ್ ಕುಲಾಲ್, ಯಶೋಧರ ಅಗರಮೇಲು ಹಲ್ಲೆ ಮಾಡಿದ ಆರೋಪಿಗಳಾಗಿದ್ದು, ಘಟನೆಯ ಬಳಿಕ ತಲೆಮರೆಸಿಕೊಂಡಿದ್ದಾರೆ. ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಾ ಇದ್ದಾರೆ.