ಮುಜರಾಯಿ ಇಲಾಖೆ ಮೊದಲ ‘ಸಪ್ತಪದಿ ಕಾರ್ಯಕ್ರಮ’ಕ್ಕೆ ಡೇಟ್ ಫಿಕ್ಸ್ : ಏಪ್ರಿಲ್ 26ರಂದು ‘100 ಮುಜರಾಯಿ ದೇವಾಲ’ಯಗಳಲ್ಲಿ ಮದುವೆ-ಕಹಳೆ ನ್ಯೂಸ್
ಬೆಂಗಳೂರು : ಮುಜರಾಯಿ ಇಲಾಖೆ ಮೊದಲ ಸಪ್ತಪದಿ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್ ಆಗಿದೆ. ರಾಜ್ಯದ 100 ಮುಜುರಾಯಿ ದೇವಾಲಯಗಳಲ್ಲಿ ಏಪ್ರಿಲ್ 26, 2020ರಂದು ಮೊದಲ ಸಪ್ತಪದಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಸಿದ್ಧತಾ ಕಾರ್ಯವನ್ನು ಕೈಗೊಂಡಿರುವುದಾಗಿ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮುಜರಾಯಿ ಇಲಾಖೆಯಿಂದ ನಡೆಯುವ ಮೊದಲ ಸಪ್ತಪದಿ ಕಾರ್ಯಕ್ರಮಕ್ಕೆ ಕೊಲ್ಲೂರು ಕ್ಷೇತ್ರದಲ್ಲಿ ಸಪ್ತಪತಿ ರಥಯಾತ್ರೆ ಮೂಲಕ ಸಾಮೂಹಿಕ ವಿವಾಹದ ಬಗ್ಗೆ ಪ್ರಚಾರ ಆರಂಭಿಸಲಾಗುತ್ತದೆ ಎಂಬುದಾಗಿ ತಿಳಿಸಿದರು.
ಇನ್ನೂ ಮುಂದುವರೆದು ಮಾತನಾಡಿದ ಅವರು, ಮುಜುರಾಯಿ ಇಲಾಖೆಯ ಮೊದಲ ಸಪ್ತಪದಿ ಕಾರ್ಯಕ್ರಮ ಏಪ್ರಿಲ್ 26, 2020ರಂದು ನಡೆಯಲಿದೆ. ರಾಜ್ಯ 100 ಮುಜರಾಯಿ ದೇವಾಲಯಗಳಲ್ಲಿ ಮದುವೆ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಯನ್ನು ಆಯಾ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ನಡೆಸುತ್ತಿದ್ದಾರೆ. ಇಂತಹ ಸಾಮೂಹಿಕ ವಿವಾಹಕ್ಕೆ ನೊಂದಣಿ ಆರಂಭವಾಗಿದ್ದು, ಮದುವೆಯಾಗಲು ಇಚ್ಛಿಸುವವರು ನೊಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.