Monday, November 18, 2024
ಸುದ್ದಿ

ಹುಬ್ಬಳ್ಳಿ ಕೊರೊನಾ ವೈರಸ್ ಶಂಕಿತ ಆಸ್ಪತ್ರೆಯಿಂದ ಡಿಸ್ಚಾರ್ಜ್- ಕಹಳೆ ನ್ಯೂಸ್

ಹುಬ್ಬಳ್ಳಿ: ಕೊರೊನಾ ವೈರಸ್ ಶಂಕೆ ಹಿನ್ನೆಲೆಯಲ್ಲಿ ಕಿಮ್ಸ್​ಗೆ ದಾಖಲಾಗಿದ್ದ ದಾಂಡೇಲಿ ಮೂಲದ ರೋಗಿಯನ್ನು ಗುರುವಾರ ಡಿಸ್ಚಾರ್ಜ್​ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಬೀಜಿಂಗ್​ ನಿಂದ ವಾಪಾಸಾಗಿದ್ದ ದಾಂಡೇಲಿ ಮೂಲದ ವ್ಯಕ್ತಿಯು ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕಿಮ್ಸ್​ಗೆ ದಾಖಲಾಗಿದ್ದರು. ಕೊರೊನಾ ವೈರಸ್ ಶಂಕೆ ಇದ್ದಿದ್ದರಿಂದ ವಿಶೇಷ ವಾರ್ಡ್​ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರ ರಕ್ತ, ಕಫವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಶಂಕಿತ ಕೊರೊನಾ‌ ವೈರಸ್ ಇಲ್ಲದಿರುವುದು ತಿಳಿದು ಬಂದಿದೆ. ಈ ಹಿನ್ನೆಲೆ ಅವರನ್ನು ಗುರುವಾರ ಸಂಜೆ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ಕಿಮ್ಸ್ ನ ‌ನಿರ್ದೇಶಕ ಡಾ.‌ ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು