ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮರ್ದೂರಡ್ಕದಲ್ಲಿ ಶೈಕ್ಷಣಿಕ ಗ್ರಾಮೀಣ ಶಿಬಿರ 2020 ಇದರಲ್ಲಿ ಜಲಸಂರಕ್ಷಣಾ ಕಾರ್ಯಕ್ರಮ ನಡೆಯಿತು.
ಶಾಲೆಯ ವಿದ್ಯಾರ್ಥಿಗಳಲ್ಲಿ ಜಲ ಸಂರಕ್ಷಣೆ ಮತ್ತು ನೀರಿಂಗಿಸುವಿಕೆಯ ಕುರಿತು ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಶಾಲಾ ಆವರಣದಲ್ಲಿ ಬೋರ್‍ವೆಲ್ ರೀಚಾರ್ಜ್ ಗುಂಡಿಯನ್ನು ನಿರ್ಮಿಸಲಾಯಿತು. ಹಾಗೆಯೇ ಶಾಲಾ ಆವರಣದಲ್ಲಿ ಹತ್ತು ಇಂಗು ಗುಂಡಿಗಳನ್ನು ನಿರ್ಮಿಸಲಾಯಿತು. ಮಕ್ಕಳಿಗೆ ಜಲ ಸಂರಕ್ಷಣೆ ಮತ್ತು ನೀರಿಂಗಿಸುವಿಕೆಯ ಕುರಿತಾದ ಮಾಹಿತಿಯನ್ನೊಳಗೊಂಡ ಕರಪತ್ರವನ್ನು ಹಂಚಿ ಜಲ ಜಾಗೃತಿ ಮೂಡಿಸಲಾಯಿತು.
ಮರ್ದೂರಡ್ಕದ ಪರಿಶಿಷ್ಟ ಜಾತಿಯ ಕಾಲೊನಿಯಲ್ಲಿ ಮನೆ ಭೇಟಿ ಮಾಡಿ, ಮಾಹಿತಿ ಕರಪತ್ರವನ್ನು ಹಂಚಿ ಸಮುದಾಯದ ಜನರಲ್ಲಿ ಜಲ ಜಾಗೃತಿ ಮೂಡಿಸಲಾಯಿತು.
ಶಿಬಿರಾರ್ಥಿಗಳಾದ ತಿಲಕ್ ರಾಜ್, ಅಮೃತ್, ಶ್ರೀಜಿತ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಮೂಡಿ ಬಂತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಿಬಿರಾಧಿಕಾರಿಗಳಾದ ದೀಪಿಕಾ ಎಮ್, ಸಚಿನ್ ಕುಮಾರ್, ಶೀತಲ್ ಕುಮಾರ್, ಶಿಬಿರದ ನಾಯಕ ನಿರಂಜನ್.ಕೆ ಮಾರ್ಗದರ್ಶನ ನೀಡಿದರು.