Sunday, November 17, 2024
ಸುದ್ದಿ

ಬಿ.ಸಿ.ರೋಡಿನ ಕೈಕಂಬ ಖಾಸಗಿ ಹೋಟೆಲ್‍ನಲ್ಲಿ ಯೋಗ ಶಿಬಿರ-ಕಹಳೆ ನ್ಯೂಸ್

ಬಂಟ್ವಾಳ: ಆರೋಗ್ಯ ಕ್ಷಮತೆ, ಮಾನಸಿಕ ಆರೋಗ್ಯ, ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳಲು ಯೋಗ ಸಹಕಾರಿ ಎಂದು ನಿವೃತ್ತ ವೈದ್ಯಾಧಿಕಾರಿ ಡಾ! ಸುರೇಂದ್ರ ನಾಯಕ್ ಅವರು ಹೇಳಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು


ಅವರು ಬಿ.ಸಿ.ರೋಡಿನ ಕೈಕಂಬ ಖಾಸಗಿ ಹೋಟೆಲ್‍ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಿ.ಮೂಡ, ಇವರ ವತಿಯಿಂದ ಪ್ರತಿ ಶುಕ್ರವಾರ ನಡೆಯಲಿರುವ ಯೋಗ ಶಿಬಿರದಲ್ಲಿ ಭಾಗವಹಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯೋಗ ಪ್ರತಿಯೊಬ್ಬ ವ್ಯಕ್ತಿ ಮಾಡಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಹೇಳಿದರು.
ಕಟ್ಟಡ ಮಾಲಕರಾದ ಉದ್ಯಮಿ ದಾಮೋದರ ಸಾಲಿಯಾನ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಜಿ ಪುರಸಭಾ ಸದಸ್ಯ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ ಆರೋಗ್ಯದಲ್ಲಿ ಸುಧಾರಣೆಗಾಗಿ ನಗರ ಆರೋಗ್ಯ ಕೇಂದ್ರದ ಮೂಲಕ ಯೋಗ ತರಬೇತಿಯನ್ನು ಸರಕಾರ ಮಾಡುವ ಯೋಜನೆ ಮಾಡಿದೆ, ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಿ. ಇಂತಹ ಸರಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಹಾಗೂ ಪ್ರತಿಯೋಬ್ಬರಿಗೂ ಮಾಹಿತಿ ಸಿಗುವ ನಿಟ್ಟಿನಲ್ಲಿ ಎಲ್ಲರ ಪ್ರಾಮಾಣಿಕ ಪ್ರಯತ್ನ ಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಾಣಿಶ್ರೀ, ಸಿವಿಲ್ ಇಂಜಿನಿಯರ್ ಪ್ರಕಾಶ್ ಯೋಗ ತರಬೇತಿದಾರರಾದ ಮೈಥಿಲಿ ದನಂಜಯ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು