ಪುತ್ತೂರು: “ಭಾರತೀಯ ತತ್ವಶಾಸ್ತ್ರ ಇಡೀ ಜಗತ್ತಿಗೆ ಬೆಳಕನ್ನು ಕೊಟ್ಟ ವಿಶ್ವ ಗುರು ಆಗಿದೆ” ಅಂಬಿಕಾ ಮಹಾವಿದ್ಯಾಲಯ ತತ್ವಶಾಸ್ತ್ರದ ಉಚಿತ ಶಿಕ್ಷಣ ಪ್ರಾರಂಭಿಸಿ ವಿಶ್ವಕ್ಕೆ ಅಳಿಲಸೇವೆ ಮಾಡಿದೆ. ಭಾರತೀಯ ತತ್ವಶಾಸ್ತ್ರಕ್ಕೆ ಹಾಗೂ ಸಂಸ್ಕøತಿಗೆ ವೇದಗಳು ತಳಹದಿ. ‘
ಪಾಶ್ಚಾತ್ಯ ತತ್ವಶಾಸ್ತ್ರ ಬೌದ್ಧಿಕ ಕಸರತ್ತು ಆದರೆ ಭಾರತೀಯ ತತ್ವಶಾಸ್ತ್ರ ಜೀವನ ದರ್ಶ£’À ಎಂದು ಮೈಸೂರು ರಾಮಕೃಷ್ಣ ಮಠದ ಶ್ರೀ ಶಾಂತಿವ್ರತಾನಂದ ಜೀ ಹೇಳಿದರು. ಅವರು ಅಂಬಿಕಾದಲ್ಲಿ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯ ಬೆಂಗಳೂರು ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳು, ಸಂಶೋಧನಾ (ರಿ) ಶಿರಸಿ ಇವರು ಆಯೋಜಿಸಿದ ರಾಷ್ಟ್ರೀಯ ಸಂಗೋಷ್ಠಿಯನ್ನು ವಿಧ್ಯುಕ್ತವಾಗಿ ದೀಪ ಬೆಳಗಿಸಿ ಉದ್ಘಾಟಿಸಿ, ಎರಡು ದಿನಗಳ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪ್ರೊ. ಜಿ.ಎನ್ ಭಟ್ ಅವರು ಭಾರತೀಯ ತತ್ವ ಶಾಸ್ತ್ರದ ಮೂಲ ತಳಹದಿಯ ಬಗ್ಗೆ ಮಾತನಾಡುತ್ತಾ ಯಾವುದೇ ಲಾಭದ ದೃಷ್ಟಿಯಿಂದ ಅಂಬಿಕಾದಲ್ಲಿ ತತ್ವ ಶಾಸ್ತ್ರವನ್ನು ಪ್ರಾರಂಭಿಸಿಲ್ಲ. ಅಮರ್ ಜವಾನ್ ಜ್ಯೋತಿಯನ್ನು ಸ್ಥಾಪಿಸಿ ದೇಶ ಪ್ರೇಮವನ್ನು ಮೆರೆದ ನಟ್ಟೋಜ ಫೌಂಡೇಶನ್ ಟ್ರಸ್ಟ್ ತತ್ವಶಾಸ್ತ್ರದ ಮಹತ್ವವನ್ನು ಮತ್ತೆ ನಮ್ಮ ಯುವ ಜನತೆಗೆ ತಲುಪಿಸುವ ಪ್ರಯತ್ನ ಮಾಡಿದೆ ಎಂದು ತತ್ವಶಾಸ್ತ್ರದ ಮಹತ್ವವನ್ನೂ ತಿಳಿಸಿದರು. ಹಾಗೂ ಪ್ರಬಂಧ ಮಂಡನೆ ಮಾಡಲಿರುವ ವಿದ್ವಾಂಸರನ್ನೂ ಪರಿಚಯಿಸಿದರು.
ದಿಕ್ಸೂಚಿ ಭಾಷಣದಲ್ಲಿ ಪ್ರೊ. ಮಧುಸೂದನ್ ಪೆನ್ನಾ ಅವರು “ನಿವೃತ್ತಿಯ ನಂತರ ಭಗವದ್ಗೀತೆ, ತತ್ವ ಶಾಸ್ತ್ರ ಮುಂತಾದವುಗಳನ್ನು ಅಭ್ಯಾಸ ಮಾಡುವುದು ಎನ್ನುವ ನಂಬಿಕೆ ಜನರಲ್ಲಿದೆ. ಆದರೆ ನಿಜವಾಗಿ ಇದು ಜೀವನ ದರ್ಶನ. ಇದನ್ನು ಯುವ ಅವಸ್ಥೆಯಲ್ಲಿ ಅಭ್ಯಯಿಸಿದರೆ ಸುಂದರ ಜೀವನ ಜೀವಿಸಬಹುದು.” ತತ್ವಶಾಸ್ತ್ರದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ ಸಂಚಾಲಕ ಶ್ರೀ ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ಎಸ್ ನಟ್ಟೋಜ ಅವರನ್ನು ಶ್ಲಾಘಿಸಿದರು. ತತ್ವಶಾಸ್ತ್ರ ಮತ್ತು ವಿಜ್ಞಾನದ ಮೂಲ ಒಂದೇ. ಇನ್ನು ಕೆಲವೇ ವರ್ಷಗಳಲ್ಲಿ ಈ ಮಹಾವಿದ್ಯಾಲಯದಿಂದ ತತ್ವಶಾಸ್ತ್ರಜ್ಞರು ಹೊರಬರಲಿ ಎಂದು ಹಾರೈಸಿ ಶುಭಕೋರಿದರು.
ಸಮಾಂರಂಭದ ಅಧ್ಯಕ್ಷ ಪೀಠವನ್ನಲಂಕರಿಸಿದ ಪ್ರೊ.ವಿ.ಗಿರೀಶ್ ಚಂದ್ರ ಅವರು ಮಾತನಾಡುತ್ತಾ, “ಆಹಾರಕ್ಕಾಗಿ ನಿಂದ್ಯವಲ್ಲದ ಉದ್ಯೋಗ ಮಾಡಬೇಕು, ಪ್ರಾಣಧಾರಣೆಗೆ ಆಹಾರಬೇಕು. ಮತ್ತೆ ಜನ್ಮ ಬಾರದಂತೆ ಸಂಸಾರ ಚಕ್ರದಿಂದ ಬಿಡುಗಡೆ ಹೊಂದಿ, ಶಾಶ್ವತ ಆನಂದಕ್ಕೆ ತತ್ವಶಾಸ್ತ್ರ ಬೇಕು. ತತ್ವಶಾಸ್ತ್ರಕ್ಕೆ ಉಚಿತ ಶಿಕ್ಷಣ ಅಂಬಿಕಾದ ಕೊಡುಗೆ, ವಿದೇಶದಲ್ಲೂ ತತ್ವಶಾಸ್ತ್ರ ಬೋಧನೆಗೆ ಭಾರತೀಯರೇ ಬರಲಿ ಎಂದು ಅಪೇಕ್ಷಿಸುತ್ತಾರೆ. ನಶಿಸಿ ಹೋಗುವ ವೇದಗಳನ್ನುಳಿಸುವ ಪ್ರಾಮಾಣಿಕ ಪ್ರಯತ್ನವಿದು. ಮೂಲದಿಂದ ಸಂಸ್ಕøತವನ್ನು ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಯೋಗ ಕಲಿಯುವಂತೆಯೂ ಪ್ರೇರೇಪಿಸಿದರು. ಯೋಗ ಯಾವುದೇ ಸಾಧನ ಸೌಕರ್ಯಗಳಿಲ್ಲದೆ ಯಾರ ಹಂಗೂ ಇಲ್ಲದೇ ಮಾಡಬಹುದಾದಂತಹ ಸಾಧನೆ. ತತ್ವಶಾಸ್ತ್ರ ಶಿಕ್ಷಣವನ್ನು ಉಚಿತವಾಗಿ ಕಲಿತು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ಹಾರೈಸಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಸ್ಥಾಪಕ, ಅಧ್ಯಕ್ಷರೂ ಆದ ನಟ್ಟೋಜ ಶಿವಾನಂದ ರಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಅಂಬಿಕಾ ಸಮೂಹ ವಿದ್ಯಾ ಸಂಸ್ಥೆಯ ಸಂಚಾಲಕ ಶ್ರೀ ಸುಬ್ರಹ್ಮಣ್ಯ ನಟ್ಟೋಜರು ಅತಿಥಿಗಳನ್ನು ಸ್ವಾಗತಿಸಿ ತಮ್ಮ ವಿದ್ಯಾಲಯದಿಂದ ಮುಂದಕ್ಕೆ ಅನೇಕ ತತ್ವ ಶಾಸ್ತ್ರಜ್ಞರು ಹೊರಬರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಹಾಮಹೋಪಾಧ್ಯಾಯ ಪುಟ್ಟು ಕುಲಕರ್ಣಿಯವರ ‘ಋಗ್ವೇದದ ಮೊದಲ ಋಕ್’ ಹಾಗೂ ಡಾ. ಜಯಶಂಕರ್ ಕಂಗನ್ನಾರ್ ಅವರ ‘ಮೆಥಮೆಟಿಕ್ಸ್ ಇನ್ ಸುಲಭ ಸೂತ್ರಾಸ್’ ಪುಸ್ತಕಗಳು ಅನಾವರಣಗೊಂಡವು.
ಪದ್ಮನಾಭ್ ಮರಾಟೆ ಹಾಗೂ ಅರ್ಜುನ್ ಮಾಹೆ ಇವರ ವೇದಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕು. ವೈಷ್ಣವಿ ಹಾಗೂ ಕು. ಅದಿತಿ ಪ್ರಾರ್ಥಿಸಿದರು. ಆಡಳಿತ ಮಂಡಳಿಯ ಸದಸ್ಯ ಶ್ರೀ ಸುರೇಶ್ ಶೆಟ್ಟಿ ವಂದಿಸಿದರು. ಪ್ರಾಧ್ಯಾಪಕಿ ದುರ್ಗಾಂಬಿಕ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಪರೀಕ್ಷಿತ್ ತೋಳ್ಪಾಡಿ ಸಹಕರಿಸಿದರು. ಕುಮಾರಿ ಅದಿತಿ ಅವರ ಚಿತ್ರಕಲಾ ಪ್ರಕಾರಗಳಾದ ಝೆಂಟ್ಯಾಂಗಲ್, ಮಧುಬನಿ, ತೂಲಿ ಇದರ ಪ್ರದರ್ಶನ ನಡೆಯಿತು.