ವಿವೇಕಾನಂದ ಕಾಲೇಜಿನಲ್ಲಿ ‘ಹನುಮಾನ್ ಚಾಲೀಸಾ’ ಪಠಣ ಸಪ್ತಾಹ ಶ್ಲೋಕ, ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿಗೆ ನೆಮ್ಮದಿ: ಸಿ. ಮಹಾದೇವ ಶಾಸ್ತ್ರಿ-ಕಹಳೆ ನ್ಯೂಸ್
ಪುತ್ತೂರು: ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳನ್ನು ನೀಡುವುದರ ಮೂಲಕ ಹೊಸ ದಾರಿಯನ್ನು ತೋರಿಸಬಹುದು. ಶ್ಲೋಕ ಹಾಗೂ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ದೊರೆಯುತ್ತದೆ. ದೇವರು ನಮ್ಮ ಕಣ್ಣಿಗೆ ಕಾಣದಿರಬಹುದು. ಆದರೆ ನಮ್ಮ ಕಷ್ಟದ ಸಂದರ್ಭದಲ್ಲಿ ಯಾವುದಾದರೂ ಒಂದು ರೂಪದಲ್ಲಿ ಸಹಾಯಕನಾಗಿ ಬಂದೇ ಬರುತ್ತಾನೆ ಎಂದು ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕ ಸಿ.ಮಹಾದೇವ ಶಾಸ್ತ್ರಿ ಮಾಣಿಲ ಹೇಳಿದರು.
ಅವರು ವಿವೇಕಾನಂದ ಪದವಿ ಕಾಲೇಜಿನ ಹಿಂದಿನ ವಿಭಾಗ, ಹಿಂದಿ ಸಂಘ ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ಆಯೋಜಿಸಿದ ‘ಹನುಮಾನ್ ಚಾಲೀಸಾ’ ಪಠಣ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸ ಹೊಸ ಸ್ಥಳಗಳಿಗೆ ಭೇಟಿ ಮಾಡಿದಾಗ ಸಿಗುವ ಅನುಭವ ಹಾಗೂ ಚಾರಣ ಹೋಗುವುದರ ಮೂಲಕ ಸಂಪಾದಿಸುವ ಅನುಭವ ನಮ್ಮನ್ನು ಮುಂದಿನ ಜೀವನಕ್ಕೆ ದಾರಿದೀಪವಾಗಿರುತ್ತದೆ ಎಂದು ನುಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಮಾತನಾಡಿ, ಒಂದು ಶಿಕ್ಷಣ ಸಂಸ್ಥೆಯಲ್ಲಿ ಆಧ್ಯಾತ್ಮಿಕತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದು ಅಗತ್ಯ. ಅದೇ ರೀತಿ ಇಂದಿನ ತಲೆ ಮಾರಿನವರಲ್ಲಿ ಅಧ್ಯಾತ್ಮದೆಡೆಗೆ ಒಲವು ಇರುವುದು ಗಮನಿಸಿಬೇಕಾದ ಸಂಗತಿಯಾಗಿದೆ. ಇದರ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಅದೇ ರೀತಿ ಕೇವಲ ಪದವಿಯಲ್ಲಿ ಸಿಕ್ಕ ಅಂಕಗಳು ನಮ್ಮನ್ನು ಮುಂದೆ ಸಾಗಿಸುವುದಿಲ್ಲ ಬದಲಾಗಿ ಕಾಲೇಜು ಜೀವನದಲ್ಲಿ ಅರಿತ ಒಂದಷ್ಟು ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.