Sunday, January 19, 2025
ಸುದ್ದಿ

ರಾಜ್ಯ ಸರಕಾರದಿಂದ ಪಶುಭಾಗ್ಯ: ಮಂಗಳೂರು ಉತ್ತರ ಕ್ಷೇತ್ರಕ್ಕೆ ಹೆಚ್ಚುವರಿ ಗುರಿ – ಅರ್ಜಿ ಆಹ್ವಾನ

ಮಂಗಳೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಪಶುಭಾಗ್ಯ ಯೋಜನೆಯಡಿ ವಿಲೀನಗೊಳಿಸಿರುವ ಅಮೃತ ಯೋಜನೆಯಡಿ ಹೈನುಗಾರಿಕೆ ಘಟಕವನ್ನು ಅನುಷ್ಠಾನಗೊಳಿಸಲು ದ.ಕ ಜಿಲ್ಲೆಯ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 50 ಮಂದಿಗೆ ಜಾನುವಾರು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯ ಆರ್ಥಿಕ 15 ಲಕ್ಷ ಗುರಿ ನಿಗಧಿಪಡಿಸಲಾಗಿರುತ್ತದೆ.


ಈ ಯೋಜನೆಯನ್ನು ಬೇಡಿಕೆ ಆಧಾರಿತ ಯೊಜನೆಯಾಗಿ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಇಲಾಖೆಯಲ್ಲಿ ಲಭ್ಯವಿರುವ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುವುದು. ಅಮೃತ ಯೋಜನೆ ಹೈನುಗಾರಿಕೆ ಸಾಮಾನ್ಯ ಫಲಾನುಭವಿಗಳಿಗೆ ಶೇ 25% ಸಹಾಯಧನವನ್ನು ನೇರವಾಗಿ ಸಾಲ ಮಂಜೂರು ಮಾಡುವ ಹಣಕಾಸು ಸಂಸ್ಥೆಗಳು/ಬ್ಯಾಂಕ್‍ಗಳಿಗೆ ಪಾವತಿಸಲಾಗುವುದು. ಈ ಯೋಜನೆಯನ್ನು ನಿರ್ಗತಿಕ ಮಹಿಳೆಯರು, ವಿದವೆಯರು, ದೇವದಾಸಿಯರಿಗೆ ಮೀಸಲಿರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

©

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಇಚ್ಚಿಸುವ ಫಲಾನುಭವಿಗಳು ಯೋಜನೆಯ ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ನಮೂನೆಗಾಗಿ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಮಂಗಳೂರು ಇವರನ್ನು ಭೇಟಿ ಮಾಡಬಹುದು. ಈ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ತರಬೇತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಎಲ್ಲಾ ಪೂರಕ ದಾಖಲೆಗಳೊಂದಿಗೆ ಮಂಗಳೂರು ತಾಲ್ಲೂಕಿನ ಸಹಾಯಕ ನಿರ್ದೇಶಕರಿಗೆ ಫೆಬ್ರವರಿ 28 ರೊಳಗೆ ಸಲ್ಲಿಸಬೇಕು. ಎಲ್ಲಾ ಆಸಕ್ತ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳಲು ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದ.ಕ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಜಾಹೀರಾತು

ವರದಿ : ಕಹಳೆ ನ್ಯೂಸ್