Recent Posts

Sunday, November 17, 2024
ಸುದ್ದಿ

ವೇಕಾನಂದ ಕಾಲೇಜಿನಲ್ಲಿ ಒಂದು ದಿನದ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರಯುವಪೀಳಿಗೆಗೆ ಜೀವನ ಕೌಶಲ್ಯ ಅವಶ್ಯ: ಮುರಳಿಕೃಷ್ಣ-ಕಹಳೆ ನ್ಯೂಸ್

ಪುತ್ತೂರು: ಮಾತನಾಡುವ ಕಲೆ ಮನುಷ್ಯನಿಗೆ ವರವಾಗಿ ಬಂದಿದೆ. ಹಿಂದೆ ಪೂರ್ವಜರಿಗೆ ಇಂತಹ ಜೀವನ ಕೌಶಲ್ಯ ಕಾರ್ಯಗಾರದ ಅವಶ್ಯಕತೆ ಇರಲಿಲ್ಲ. ಬದಲಾಗಿ ಅವರು ತಮ್ಮ ಬದುಕಿನಲ್ಲಿ ಅನುಭವಗಳಿಂದ ಜೀವನ ಕೌಶಲ್ಯವನ್ನು ಅರಿತಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

ಹಿಂದಿನ ಅವಿಭಕ್ತ ಕುಟುಂಬದ ವ್ಯವಸ್ಥೆಯು ಜೀವನ ಕೌಶಲ್ಯವನ್ನು ಕಲಿಸಿಕೊಟ್ಟಿತ್ತು. ಸಮಸ್ಯೆಗಳು ಬಂದಾಗ ಅದನ್ನು ಸುಲಭವಾಗಿ ನಿಭಾಯಿಸುವುದನ್ನು ನೋಡಿ ಕಲಿತುಕೊಳ್ಳಲಾಗಿತ್ತು. ಆದರೆ ಇಂದಿನ ಯುವಪೀಳಿಗೆಗೆ ಇಂತಹ ಕೌಶಲ್ಯದ ಅಗತ್ಯತೆ ಇದೆ. ಇದನ್ನು ಗಮನಿಸಿದಾಗ ಸಮಾಜದಲ್ಲಿನ ಜನರು ಎತ್ತ ಸಾಗುತ್ತಿದ್ದಾರೆ ಎಂಬುದನ್ನು ವಿಮರ್ಶಿಸಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಯೋಜನಾ ಘಟಕ, ಯುವ ಸ್ಪಂದನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಅನುದಾನಿತ ಯೋಜನೆ ಅನುಷ್ಠಾನ, ಜನ ಆರೋಗ್ಯ ಕೇಂದ್ರ್ರ ಎಪೀಡಿಮಿಯಾಲಜಿ ವಿಭಾಗ ನಿಮಾನ್ಸ್ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಜೀವನ ಕೌಶಲ್ಯ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಶಿಕ್ಷಣವೆಂಬುದು ಅಂಕ ಮತ್ತು ಸರ್ಟಿಫಿಕೆಟ್‍ಗೆ ಮಾತ್ರ ಸೀಮಿತವಾಗಿದೆ. ಶಿಕ್ಷಣ ವ್ಯವಸ್ಥೆಯು ಕೂಡ ಜೀವನ ಕೌಶಲ್ಯದ ಗೋಜಿಗೆ ಹೋಗದೇ, ವ್ಯವಹಾರದ ಬೆನ್ನು ಹತ್ತಿ ಸಾಗುತ್ತಿದೆ. ಜೊತೆಗೆ ಮಕ್ಕಳಿಗೆ ಹಿಂದಿನ ಪರಂಪರೆಯ ಆಸಕ್ತಿಯೂ ಇಲ್ಲ. ಹಿರಿಯರು ನಡೆದುಕೊಂಡ ರೀತಿ ರಿವಾಜುಗಳನ್ನು ಆಸ್ತಕಿಯುತವಾಗಿ ಪಾಲಿಸಿಕೊಂಡು ಬಂದರೆ ಜೀವನ ಕೌಶಲ್ಯ ಬರಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರು ನಿಮಾನ್ಸ್‍ನ ಪ್ರೋಜೆಕ್ಟ್ ಸಂಯೋಜಕ ಡಾ. ಮುತ್ತುರಾಜ್ ಮಾತನಾಡಿ, ಪ್ರತಿನಿತ್ಯದ ಬದುಕಿನಲ್ಲಿ ಒತ್ತಡವನ್ನು ಎದುರಿಸುತ್ತೇವೆ. ಸಣ್ಣ ಪುಟ್ಟ ವಿಷಯಗಳಿಗೆ ತುಂಬಾ ಚಿಂತಿತರಾಗಿ ಒತ್ತಡದಿಂದ ದಿನ ಕಳೆಯುತ್ತೇವೆ. ಒತ್ತಡವನ್ನು ನಿವಾರಿಸುವುದಕ್ಕೆ ಅನುಭವ ಬೇಕಾಗಿಲ್ಲ. ಬದಲಾಗಿ ಬೇರೆಯವರನ್ನು ನೋಡಿ ಕಲಿಯುವುದು ಕೂಡ ಒಂದು ರೀತಿಯ ಜೀವನ ಕೌಶಲ್ಯ. ಅದರ ಜೊತೆಗೆ ಹಿರಿಯರು ಹೇಗೆ ನಡೆದುಕೊಂಡು ಬಂದಿದ್ದಾರೆಯೇ ಅದು ಜೀವನ ಕೌಶಲ್ಯ. ಈ ಕೌಶಲ್ಯ ಬದುಕಿನುದ್ದಕ್ಕೂ ಹಾಸುಹೊಕ್ಕಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿ.ಜಿ. ಭಟ್ ಮಾತನಾಡಿ, ರಾಷ್ಟ್ರೀಯ ಯೋಜನೆಯು ಬದುಕಿಗೆ ಬೇಕಾದ ಜೀವನ ಕೌಶಲ್ಯವನ್ನು ಕಲಿಸಿಕೊಡುತ್ತದೆ. ಜೊತೆಗೆ ಎನ್.ಎಸ್.ಎಸ್. ಶಿಬಿರಗಳಲ್ಲಿ ಭಾಗವಹಿಸುವುದರಿಂದ ಬದುಕಿಗೆ ಬೇಕಾದ ಜೀವನ ಕೌಶಲ್ಯವನ್ನು ಕಲ್ಪಿಸಿಕೊಡುತ್ತದೆ. ಇಂದು ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ. ಅದಕ್ಕೆ ಬೇಕಾದ ಕೌಶಲ್ಯವನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಬೇಕು. ಇಂತಹ ಕಾರ್ಯಾಗಾರವು ಗೊಂದಲಗಳಿಗೆ ತೆರೆ ಎಳೆದು ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಿ ಎಂದರು.
ಡಿಸ್ಟಿಕ್ ಯೂತ್ ಕೌನ್ಸಿಲರ್ ಶ್ರೀಕಾಂತ್ ಪೂಜಾರಿ ಪ್ರಸ್ತಾವನೆಗೈದು ಮಾತನಾಡಿ, ಸರ್ಕಾರವು ಯುವಸ್ಪಂದನ ಎನ್ನುವ ಘಟಕವನ್ನು ಪ್ರಾರಂಭಿಸಿ, ಸಮಾಜದ ಜನರಿಗೆ ಎಲ್ಲಾ ರೀತಿಯಲ್ಲೂ ಉಪಯೋಗವಾಗುವಂತೆ ಕೆಲಸ ಮಾಡುತ್ತಿದೆ. ಈ ಘಟಕವು ಮಾದಕ ವ್ಯಸನ, ಸಬಲೀಕರಣ, ಶಿಕ್ಷಣ ಸೇರಿದಂತೆ ಅನೇಕ ವಿಷಯಗಳಿಗ ಒತ್ತು ನೀಡುತ್ತಿದೆ. ಇನ್ನು ಯುವಜನತೆಯಲ್ಲಿ ಸ್ವ ಅರಿವು ಇರಬೇಕಾದದ್ದು ಮುಖ್ಯ. ಹೀಗಿದ್ದಾಗ ಮಾತ್ರ ಜೀವನ ಕೌಶಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಜೀವನ ಕೌಶಲ್ಯ ತರಬೇತುದಾರೆ ಅಕ್ಷತಾ ಬಜ್ಪೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀನಾಥ್ ಬಿ. ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಿದ್ಯಾ ವಂದಿಸಿದರು. ಪ್ರತಿಕೋದ್ಯಮ ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ನಿರೂಪಿಸಿದರು.