ವಿವೇಕಾನಂದ ವಿದ್ಯಾವರ್ಧಕ ಸಂಘದ ಆರಂಭಗೊಳ್ಳಲಿರುವ ಸಿಬಿಎಸ್‍ಇ ಸಂಸ್ಥೆಯ ಕಛೇರಿ ಉದ್ಘಾಟನೆಓದಿನೊಂದಿಗೆ ಬದುಕಿನ ಮೌಲ್ಯ ತಿಳಿಸುವುದು ಮುಖ್ಯ: ಡಾ. ಕಲ್ಲಡ್ಕ ಪ್ರಭಾಕರ ಭಟ್-ಕಹಳೆ ನ್ಯೂಸ್
ಪುತ್ತೂರು: ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಭಾರತೀಯ ಭವ್ಯ ಪರಂಪರೆಯ ಕುರಿತಾಗಿ ಕಲಿಸುವ ಅವಶ್ಯಕತೆಯಿದೆ. ಲೋಕದ ಕುರಿತಾದ ಜ್ಞಾನದೊಂದಿಗೆ ನಮ್ಮ ನೆಲದ ಸಂಸ್ಕøತಿಯ ಕುರಿತಾಗಿಯೂ ಅವರು ತಿಳಿದುಕೊಳ್ಳಬೇಕು. ಓದಿನ ಜೊತೆಯಾಗಿ ಬದುಕಿನ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವುದು ಅತೀ ಅಗತ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ನೆಹರು ನಗರದಲ್ಲಿರುವ ವಿವೇಕಾನಂದ ಕ್ಯಾಂಪಸ್‍ನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ನೂತನವಾಗಿ ಆರಂಭಗೊಳ್ಳಲಿರುವ ಸಿಬಿಎಸ್‍ಸಿ ಸಂಸ್ಥೆಯ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿವೇಕಾನಂದ ವಿದ್ಯಾವರ್ಧಕ ಸಂಘದ 69ನೇ ಸಂಸ್ಥೆ ಈ ಸಿಬಿಎಸ್‍ಇ ಶಿಕ್ಷಣ ಕೇಂದ್ರ. ಇದು ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣದ ಜೊತೆಯಾಗಿ ಭಾರತೀಯ ಸಂಸ್ಕøತಿ ಹಾಗೂ ಮಾನವಿಕ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಉದ್ದೇಶನ್ನು ಹೊಂದಿದೆ. ಶಿಕ್ಷಣವನ್ನು ಎಲ್ಲಾ ವಿದ್ಯಾಸಂಸ್ಥೆಗಳು ಒದಗಿಸುತ್ತವೆ. ಆದರೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸುವುದು ನಮ್ಮ ವಿದ್ಯಾಸಂಸ್ಥೆಗಳ ಉದ್ದೇಶ ಎಂದು ತಿಳಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಸ್ವಾಗತಿಸಿ, ಆಡಳಿತ ಮಂಡಳಿ ನಿರ್ದೇಶಕ ವಾಮನ ಪೈ ವಂದಿಸಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸುಪ್ರೀತ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ನೂತನ ಕಛೇರಿಯಲ್ಲಿ ಗಣಪತಿ ಹೋಮ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಹಿರಿಯರು, ವಿವಿಧ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಉಪನ್ಯಾಸಕರು, ಉಪನ್ಯಾಸಕೇತರರು ಉಪಸ್ಥಿತರಿದ್ದರು.