Recent Posts

Sunday, November 17, 2024
ಸುದ್ದಿ

ಫಿಲೋಮಿನಾದಲ್ಲಿ ತುಳುನಾಡಿನ ಜನಪದ ಪರಂಪರೆಯ ವಸ್ತುಗಳ ಪ್ರದರ್ಶನ ‘ಬದ್ಕ್’ ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು: ಮಾನವನ ಬದುಕು ಅನ್ನುವುದು ನಿರಂತರ ಸುತ್ತುವ ಚಕ್ರದ ಮಾದರಿಯಲ್ಲಿದೆ. ಪ್ರಸ್ತುತ ನಾವು ಕೋಟಿಗಟ್ಟಲೆಯ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳುಳ್ಳ ವಾಹನಗಳನ್ನು ಬಳಸಿದರೂ ಅದರಲ್ಲಿರುವÀ ಚಕ್ರದ ಕಾಯಕವು ಎಂದೆಂದಿಗೂ ಅಚ್ಚಳಿಯದೇ ಉಳಿಯುತ್ತದೆ ಎಂದು ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಫೆಬ್ರವರಿ 7 ಮತ್ತು 8 ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಆಯೋಜಿಸಲಾದ ತುಳುನಾಡಿನ ಜನಪದ ಪರಂಪರೆಯ ವಸ್ತುಗಳ ಪ್ರದರ್ಶನ ‘ಬದ್ಕ್’ ಇದನ್ನು ಮರದ ಕಳಸೆಗೆ ಭತ್ತ ತುಂಬಿಸಿ, ಉದ್ಘಾಟಿಸಿದರು. ಪ್ರಾಚೀನ ವಸ್ತುಸಂಗ್ರಹಾಲಯವು ಗತ, ವರ್ತಮಾನ ಹಾಗೂ ಭವಿಷ್ಯತ್ಕಾಲದ ಚಿತ್ರಣವನ್ನು ಕಣ್ಮುಂದೆ ತೆರೆದಿಡುತ್ತವೆ. ನಮ್ಮ ತುಳುವರಲ್ಲಿರುವ ಸಂಸ್ಕ್ರತಿ ಮತ್ತು ಸ್ವಚ್ಛತೆಯ ಅರಿವು ಅದ್ಭುತವಾದುದು. ಕಣ್ಮರೆಯಾಗುತ್ತಿರುವ ತುಳು ಬದುಕನ್ನು ಇಂದಿನ ಪೀಳಿಗೆಗೆ ತಿಳಿಯ ಪಡಿಸುವ ಅನಿವಾರ್ಯತೆಯಿದೆ. ಹಿರಿಯರಿಂದ ಬಳುವಳಿಯಾಗಿ ಬಂದಿರುವ ಶ್ರೀಮಂತ ಪರಂಪರೆಯನ್ನು ದಿಕ್ಕರಿಸದೆ, ಗೌರವಿಸಿರಿ ಎಂದರು.
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಪಾಠ ಪ್ರವಚನದೊಂದಿಗೆ ಬದುಕಿನ ಪಾಠವನ್ನು ಕಲಿಸುವ ಅಧ್ಯಾಪಕರು ನಿರಂತರ ಚಲಾವಣೆಯಲ್ಲಿರುತ್ತಾರೆ. ಪುಸ್ತಕದಲ್ಲಿರುವ ಬದನೆಕಾಯಿಯೇ ನೈಜ ಬದುಕಲ್ಲ. ಇತಿಹಾಸವನ್ನು ಸೈದ್ಧಾಂತಿಕವಾಗಿ ಅಧ್ಯಯನ ಮಾಡುವ ಜೊತೆಗೆ ಪ್ರಾಚ್ಯ ವಸ್ತುಗಳ ಪ್ರಾಯೋಗಿಕ ಅಧ್ಯಯನವೂ ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ.ಲಿಯೋ ನೊರೊನ್ಹಾ ಮಾತನಾಡಿ, ತಮ್ಮ ತುಳುನಾಡು ಶ್ರೀಮಂತ ಸಂಸ್ಕøತಿಯ ಆಗರ. ವಸ್ತುಪ್ರದರ್ಶನವು ಬೆಲೆಕಟ್ಟಲಾಗದ ಪ್ರಾಚ್ಯ ವಸ್ತುಗಳನ್ನೊಳಗೊಂಡಿದೆ. ಇದರ ಸಂಗ್ರಹದ ಹಿಂದೆ ಬಹಳಷ್ಟು ಶ್ರಮ ಅಡಗಿದೆ. ನಮಗೆ ಅಪರೂಪದ ವಸ್ತುಗಳ ಮೇಲೆ ಪ್ರೀತಿ, ಅಭಿಮಾನವಿರಬೇಕು. ನಮ್ಮ ದೃಷ್ಟಿಕೋನ ಬದಲಾದರೂ ಇತಿಹಾಸವು ಶಾಶ್ವತವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಂಗಳೂರು ವಿವಿಯು 2019ರ ಎಪ್ರಿಲ್/ಮೇ ತಿಂಗಳಲ್ಲಿ ನಡೆಸಿದ ಬಿಎ ಪದವಿ ಪರೀಕ್ಷೆಯಲ್ಲಿ 8ನೇ ರ್ಯಾಂಕು ವಿಜೇತೆ ತಶ್ರೀಫಾ ಜಹಾನ್ ಇವರನ್ನು ಮಾನವಿಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಆರ್ಯಭಟ ಪ್ರಶಸ್ತಿ ಪುರಸ್ಕøತ ಮಹಮ್ಮದ್ ಯಾಸಿರ್ ಕಲ್ಲಡ್ಕ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ವಿಜಯ್ ಲೋಬೊ, ಪ್ರಾಚ್ಯ ವಸ್ತುಗಳ ಸಂಗ್ರಹಣೆಗೆ ಪುರಸ್ಕøತರಾದ ಹಳ್ಳಿಮನೆ ಹೈದರಾಲಿ ಕೊಯ್ಯೂರು ಮತ್ತು ಮಾನವಿಕ ಸಂಘದ ನಿರ್ದೇಶಕ ಪ್ರೊ. ಸುಬೈರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅಶಿಂತಾ ಮೋತೆರೊ ಮತ್ತು ತಂಡದವರು ಪ್ರಾರ್ಥಿಸಿ, ಅನ್ನಮ್ಮ ಆರ್ ಸ್ವಾಗತಿಸಿದರು. ಡಿಂಪಲ್ ತಾವ್ರೊ ವಂದಿಸಿದರು. ಪ್ರಿಯಾಂಕಾ ಮಡ್ತಾ ಕಾರ್ಯಕ್ರಮ ನಿರೂಪಿಸಿದರು.
ಪ್ರದರ್ಶನದಲ್ಲಿ ತೆರೆದುಕೊಂಡ ವಸ್ತುಗಳು: ಈ ಪ್ರದರ್ಶನವು ಕೃಷಿ ಬದುಕಿನ ಸಾಮಾಗ್ರಿಗಳಾದ ನೇಗಿಲು, ನೊಗ, ಸೇರು, ಪಾವು, ಕಳಸೆ, ಮುಡಿ, ಮುಡಿಕೋಲು, ಮುಟ್ಟಾಳೆಗಳು, ಮುರ್ನಾಳಿಗಳು, ಬಸಿ ಮರಿಗೆಗಳು, ಒನಕೆಗಳು, ಕೊಡಲಿಗಳು, ಎತ್ತಿನ ಗಾಡಿಯ ಚಕ್ರಗಳು, ರಾಟೆಗಳು, ಬೀಸುವ ಕಲ್ಲುಗಳು, ಸೇಮಿಗೆ ಮಣೆಗಳು, ತೊಟ್ಟಿಲುಗಳು, ಪೂಜಾ ಸಾಮಾಗ್ರಿಗಳು, ಮೀನು ಹಿಡಿಯುವ ಸಾಮಗ್ರಿಗಳು, ಗಾರೆ ಕೆಲಸದ ಸಾಮಗ್ರಿಗಳು, ಸಂಗೀತ ಸಾಮಾಗ್ರಿಗಳು, ಅಡುಗೆ ಕೋಣೆಯಲ್ಲಿ ಬಳಸ್ಪಡುವ ಸಾಮಾಗ್ರಿಗಳು, ಶೃಂಗಾರ ಮಾಡಲು ಅಗತ್ಯವಿರುವ ಸಾಧನಗಳು, ಗತಕಾಲದ ವಾಹನಗಳ ಬಿಡಿಭಾಗಗಳು, ಕಂಬಳದಲ್ಲಿ ಉಪಯೋಗಿಸುವ ವಸ್ತುಗಳು, ತಾಮ್ರ-ಹಿತ್ತಾಳೆ-ಕಂಚು-ಮಣ್ಣಿನ ಪಾತ್ರೆಗಳು, ಜಾನಪದ ನೃತ್ಯಕ್ಕೆ ಬಳಸಲಾಗುತ್ತಿದ್ದ ಸಂಗೀತ ಪರಿಕರಗಳು, ಇಲೆಕ್ಟ್ರಾನಿಕ್ ಸಾಮಾಗ್ರಿಗಳು, ಬೇಟೆ ಸಾಮಗ್ರಿಗಳು, ಸಂಪರ್ಕ ಸಾಧನಗಳು, ವಿವಿಧ ದೇಶಗಳ ನಾಣ್ಯ-ಕರೆನ್ಸಿಗಳು, ಪ್ರಾಚೀನ ಆಯುಧಗಳು, ವೈವಿಧ್ಯಮಯ ದೀಪಗಳು, ಪಾದುಕೆಗಳು, ಆಭರಣಗಳನ್ನು ಸಂಗ್ರಹಿಸಿಡುವ ಪೆಟ್ಟಿಗೆಗಳು, ಟೈಪ್ ರೈಟರ್‍ಗಳು, ಕ್ಯಾಮರಾಗಳು, ಇಸ್ತ್ರಿ ಪೆಟ್ಟಿಗೆಗಳು, ಕನ್ನಡಕಗಳು, ಸ್ಟೆಥೋಸ್ಕೋಪ್‍ಗಳು, ಕ್ಸೆರೋಕ್ಸ್ ಯಂತ್ರಗಳು, ಪ್ರಿಂಟರ್‍ಗಳು, ಪ್ರೊಜೆಕ್ಟರ್‍ಗಳು, ಮೆಕ್ರೊಸ್ಕೋಪ್ ಗಳು, ಅಂಚೆ ಚೀಟಿಗಳು, ತಾಳೆಗರಿ ಲಿಪಿಗಳು ಮೊದಲಾದ ವಸ್ತುಗಳನ್ನು ಒಳಗೊಂಡಿತ್ತು. ಈ ಪ್ರದರ್ಶನವನ್ನು ವೀಕ್ಷಿಸಲು ಮೊದಲ ದಿನ ಪುತ್ತೂರು ಆಸುಪಾಸಿನ ಶಿಕ್ಷಣ ಸಂಸ್ಥೆಗಳಿಂದ ಸುಮಾರು 4000 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಗಮಿಸಿದ್ದರು.