ಜೊತೆಯಾಗಿ ಟ್ರಿಪ್ ಮಾಡುತ್ತಾ ಎಂಜಾಯ್ ಮಾಡಲು ಹಣದ ಶಾರ್ಟೇಜ್ ಇದ್ದ ಕಾರಣ ಅಮೆರಿಕದ ಈ ಜೋಡಿಯೊಂದು ಮಾಡಿದ ಪ್ಲಾನ್ ಕೇಳಿದರೆ ನಿಮಗೂ ನಗು ಬರುತ್ತದೆ.
ಕಾರಿನ್ನೆ ಮಿಲ್ಲರ್ ಹಾಗೂ ಅಡಮ್ ಕರ್ರೋಲ್ ಎಂಬ ಈ ಜೋಡಿ, ಟೈಟ್ ಬಜೆಟ್ನೊಂದಿಗೆ ಅಟ್ಲಾಂಟಾಗೆ ಟ್ರಿಪ್ ಹಾಕಿದ್ದಾರೆ. ಕಾರಿನ್ನೆ ಹುಟ್ಟುಹಬ್ಬದಂದು ಫ್ರೀ ಡ್ರಿಂಕ್ಸ್ ಪಡೆಯಲೆಂದು, ಎಂಗೇಜ್ ಆಗುವಂತೆ ಡ್ರಾಮಾ ಮಾಡಿದ್ದಾರೆ ಈ ಜೋಡಿ. ಮಂಡಿಯೂರಿ ಕುಳಿತ ಆಡಮ್, ಕರೋನ್ನಿಗೆ ತನ್ನ ಪ್ರಪೋಸಲ್ ಮುಂದಿಡುತ್ತಾ ಬಂದಿದ್ದಾನೆ.
ಇದನ್ನು ಕಂಡು ಖುಷಿಯಾದ ಬಾರ್ನಲ್ಲಿ ನೆರೆದಿದ್ದ ಜನಸ್ತೋಮವು ಅವರಿಗೆ ಫ್ರೀ ಡ್ರಿಂಕ್ಸ್ ಕೊಡಿಸಿದೆ.
ಇಂಥದ್ದೇ ಪ್ಲಾನ್ ಅನ್ನು ಆರು ತಿಂಗಳ ಬಳಿಕ ತನ್ನದೇ ಹುಟ್ಟುಹಬ್ಬದ ದಿನ ಇದೇ ರೀತಿ ಮತ್ತೊಮ್ಮೆ ಕರೋನ್ನಿಗೆ ಪ್ರಪೋಸ್ ಮಾಡಿದ ಆಡಮ್ಸ್, ಮತ್ತೊಮ್ಮೆ ಫ್ರೀ ಡ್ರಿಂಕ್ಸ್ ಪಡೆದು ಮಜಾ ಮಾಡಿದ್ದಾನೆ.
ಕಳೆದ ಎಂಟು ವರ್ಷಗಳಿಂದ ಬೆಸ್ಟ್ ಫ್ರೆಂಡ್ಸ್ಗಳಾಗಿರುವ ಈ ಇಬ್ಬರೂ ರಿಲೇಷನ್ಶಿಪ್ ಆರಂಭಿಸಿದ ಬಳಿಕ ತಮ್ಮ ಮೆಚ್ಚಿನ ತಾಣವಾದ ಅಟ್ಲಾಂಟಾಗೆ ಟ್ರಿಪ್ ಹಾಕಲು ಇಚ್ಛಿಸಿದ್ದಾರೆ.
ಇಂಥ ಉಪಾಯಗಳಿಂದ ಉಳಿತಾಯ ಮಾಡಿದ ದುಡ್ಡಿನಲ್ಲಿ ಎಂಗೇಜ್ಮೆಂಟ್ ರಿಂಗ್ ಖರೀದಿ ಮಾಡಲು ಈ ಜೋಡಿ ಸಫಲವಾಗಿದೆ.