ಮುಂಬಯಿಯಲ್ಲಿ ಸಿ.ಎ.ಎ. & ಎನ್.ಆರ್.ಸಿ ಪರ ನಡೆದ ಸಮಾವೇಶದಲ್ಲಿ ಬೃಹತ್ ಜನಸಾಗರ ; ಕಾಯ್ದೆಯ ವಿರುದ್ಧ ಮುಸ್ಲಿಮರು ಯಾಕೆ ಪ್ರತಿಭಟಿಸುತ್ತಿದ್ದಾರೆ..? ರಾಜ್ ಠಾಕ್ರೆ ಪ್ರಶ್ನೆ..? – ಕಹಳೆ ನ್ಯೂಸ್
ಮುಂಬಯಿ: ಮುಂದಿನ ಬಾಂಬ್ ಸ್ಫೋಟಗೊಳ್ಳುವವರೆಗೆ ಕಾದು ಕುಳಿತುಕೊಳ್ಳಬೇಕೆ? ಎಂದು ಪ್ರಶ್ನಿಸುವ ಮೂಲಕ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ರವಿವಾರ ಇಲ್ಲಿ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶದ ಒಳನುಸುಳುಕೋರರ ವಿರುದ್ಧ ವಾಗ್ಧಾಳಿ ನಡೆಸಿದರು. ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧವೂ ಅವರು ತೀವ್ರ ವಾಗ್ಧಾಳಿ ನಡೆಸಿದರು.
ಅಮೆರಿಕದಲ್ಲಿ ಯಾವ ಅವಳಿ ಗೋಪುರಗಳನ್ನು ನೆಲಸಮಗೊಳಿಸಲಾಯಿತೋ, ಅದರ ಹಿಂದಿನ ಮೆದುಳು ಒಸಾಮಾ ಬಿನ್ ಲಾಡೆನ್ ಆಗಿದ್ದ. ಆತನನ್ನು ಕೂಡ ಪಾಕಿಸ್ತಾನದಲ್ಲೇ ಪತ್ತೆ ಮಾಡಲಾಗಿತ್ತು.
ನಮ್ಮ ದೇಶದಲ್ಲಿ ಇಲ್ಲಿಯವರೆಗೆ ಅನೇಕ ಬಾಂಬ್ ಸ್ಫೋಟಗಳು ನಡೆದಿವೆ. ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಈ ಎಲ್ಲ ಬಾಂಬ್ ಸ್ಫೋಟಗಳ ಹಿಂದೆ ಯಾರು ಇದ್ದರು ? 1992-93ರಲ್ಲಿ ಮುಂಬಯಿಯಲ್ಲಿ ನಡೆದ ಸ್ಫೋಟದ ಹಿಂದೆ ಯಾರು ಇದ್ದರು ? ಆ ಬಾಂಬರ್ ಯಾರು? ಎಂಬುದು ಎಲ್ಲರಿಗೂ ಗೊತ್ತಿದೆ.
ಒಳನುಸುಳುಕೋರರು ನಮಗೆ ಆಪತ್ತು ಆಗಿದ್ದು ಕೂಡಲೇ ಅವರನ್ನು ದೇಶದಿಂದ ಹೊರಹಾಕಬೇಕು ಮತ್ತು ಅದಕ್ಕಾಗಿ ಮುಂದಿನ ಬಾಂಬ್ ಸ್ಫೋಟ ನಡೆಯುವವರೆಗೆ ಕಾಯಬಾರದು ಎಂದರು.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಒಳನುಸುಳುಕೋರರನ್ನು ದೇಶದಿಂದ ಹೊರಹಾಕಬೇಕೆಂದು ಒತ್ತಾಯಿಸಿ ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಮುಂಬಯಿಯಲ್ಲಿ ಬೃಹತ್ ಮೆರವಣಿಗೆಯನ್ನು ನಡೆಸಿತು. ಆಜಾದ್ ಮೈದಾನದಲ್ಲಿ ರಾಜ್ ಠಾಕ್ರೆ ಅವರ ಭಾಷಣದೊಂದಿಗೆ ಇದು ಸಂಪನ್ನಗೊಂಡಿತು.
ಸಿಎಎ ವಿರುದ್ಧ ಪ್ರತಿಭಟಿಸುತ್ತಿರುವ ಮುಸ್ಲಿಮರು ಏಕೆ ಹಾಗೆ ಮಾಡುತ್ತಿ¨ªಾರೆಂದು ನನಗೆ ಅರ್ಥವಾಗುತ್ತಿಲ್ಲ. ಸಿಎಎ ಇಲ್ಲಿ ಜನಿಸಿದ ಮುಸ್ಲಿಮರಿಗಾಗಿ ಅಲ್ಲ ಎಂದು ರಾಜ್ ಠಾಕ್ರೆ ಅವರು ದೇಶಾದ್ಯಂತ ಮುಸ್ಲಿಮರು ಹೆಚ್ಚಾಗಿ ಮುನ್ನಡೆಸುತ್ತಿರುವ ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ಉಲ್ಲೇಖಿಸಿ ಹೇಳಿದರು. ನೀವು ನಿಮ್ಮ ಶಕ್ತಿಯನ್ನು ಯಾರಿಗೆ ತೋರಿಸುತ್ತಿದ್ದೀರಿ ? ಎಂದವರು ಭಾಷಣದಲ್ಲಿ ಕೇಳಿದರು. ದಕ್ಷಿಣ ಮುಂಬಯಿಯ ಹಿಂದೂ ಜಿಮ್‌ಖಾನಾದಿಂದ ಪ್ರಾರಂಭವಾದ ಈ ಮೆರವಣಿಗೆಗೆ ಬರುವ ಮೊದಲು ಠಾಕ್ರೆ ಅವರು ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು. ಮೆರವಣಿಗೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದ ಎಂಎನ್‌ಎಸ್ ಕಾರ್ಯಕರ್ತರು ಸಿಎಎ ಮತ್ತು ಎನ್‌ಆರ್‌ಸಿ ಪರವಾಗಿ ಘೋಷಣೆಗಳನ್ನು ಕೂಗಿದರು.