17ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪುತ್ತೂರಿನ ಜನಸ್ನೇಹಿ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ; ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಆರೋಗ್ಯ ಕಾರ್ಡ್ – ಕಹಳೆ ನ್ಯೂಸ್
ಪುತ್ತೂರು : ಜನಸ್ನೇಹಿ ಆಸ್ಪತ್ರೆಯೆಂದೆ ಪ್ರಸಿದ್ಧಿ ಪಡೆದ ಪುತ್ತೂರಿನ ಪ್ರತಿಷ್ಠಿತ ಆರೋಗ್ಯ ಸೇವೆಯಲ್ಲಿ 16 ವಸಂತಗಳನ್ನು ಪೂರೈಸಿ 17ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಬೊಳುವಾರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.9ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು.
ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಎನ್.ಎ.ಬಿ.ಎಚ್ ಪ್ರಮಾಣಿಕೃತ ಆಸ್ಪತ್ರೆಯಾಗಿದ್ದು ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನಲ್ ಟ್ರಸ್ಟ್‌ನ ವತಿಯಿಂದ ಸಾರ್ವಜನಿಕರಿಗೆ ಪರಿನಿತ ವೈದ್ಯರ ತಂಡದಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರವನ್ನು ವೈದ್ಯಕೀಯ ತಜ್ಞ ಡಾ.ಶ್ರೀಪತಿ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ವೈದ್ಯಕೀಯ ತಜ್ಞಾ ಡಾ.ಶ್ರೀಪತಿ ರಾವ್, ಆಯುರ್ವೇದ ತಜ್ಞೆ ಡಾ.ಸುಧಾ ಎಸ್.ರಾವ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಶ್ರೀಲತಾ ಭಟ್, ಕಿವಿ, ಮೂಗು, ಗಂಟಲು ತಜ್ಞೆ ಡಾ.ಗಾಯತ್ರಿ, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಅಶ್ವಿನ್ ಆಳ್ವ, ಕನ್ಸಲ್ಟೆಂಟ್ ಎಂಡೋಕ್ರಿನಾಲಜಿಸ್ಟ್ ಡಾ.ಕಿಶನ್ ದೇಲಂಪಾಡಿಯವರು ವೈದ್ಯಕೀಯ ತಪಾಸಣಾ ಶಿಬಿರವನ್ನು ನಡೆಸಿಕೊಟ್ಟರು.
ತಪಾಸಣೆಗಳು :
ಶಿಬಿರದಲ್ಲಿ ಹೊರರೋಗಿಗಳಿಗೆ ಲ್ಯಾಬ್, ಸಿಬಿಸಿ, ಆರ್‌ಬಿಎಸ್, ಲಿಪಿಡ್ ಪ್ರೋಫೈಲ್, ಸೀರಂ, ಕ್ರಿಯೆಟಿನ್ ಈಸಿಜಿ, ಮೂಳೆ ಸಾಂದ್ರತೆ, ಸಿಹಿ ಮೂತ್ರದಿಂದ ಕಣ್ಣಿನ ಮೇಲಾಗುವ ಪರಿಣಾಮಗಳ ತಪಾಸಣೆ ಮೊದಲಾದ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು.
ಉಚಿತ ಹೆಲ್ತ್ ಕಾರ್ಡ್ :
ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನಲ್ ಟ್ರಸ್ಟ್‌ನಿಂದ ಸಾರ್ವಜನಿಕರಿಗೆ ನೀಡಲಾಗುವ ಪ್ರಗತಿ ಕುಟುಂಬ ಆರೋಗ್ಯ ಕಾರ್ಡ್‌ನ್ನು 17ನೇ ವರ್ಷದ ಪಾದಾರ್ಪಣೆಯ ಉಚಿತವಾಗಿ ನೀಡಲಾಯಿತು. ಈ ಕಾಡ್‌ನ ಮೂಲಕ ಜನರಲ್ ವಾರ್ಡ್ ಹಾಗೂ ಸ್ಪೇಷಲ್ ರೂಂನ ಬಿಲ್‌ನಲ್ಲಿ ಶೇ.2೦ ರಿಯಾಯಿತಿ, ಹೊರರೋಗಿ ಶುಲ್ಕ ಹಾಗೂ ತಪಾಸಣಾ ವಿಧಾನಗಳ ವೆಚ್ಚದಲ್ಲಿ ಶೇ.2೦ರಿಯಾಯಿತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.