Sunday, January 19, 2025
ಸುದ್ದಿ

ಮೂರುಬಿಟ್ಟ ಕೈ ನಾಯಕರು | ಹಾಡುಹಗಲೇ ಮಂಗಳೂರನಲ್ಲಿ ಮತದಾರಿಗೆ ಶಾಸಕ ಮೊಯ್ದಿನ್ ಬಾವ ಸೀರೆ ಹಂಚಿಕೆ – ಕಹಳೆ ನ್ಯೂಸ್

ಬೆಂಗಳೂರು: ಕಾಂಗ್ರೆಸ್ ಶಾಸಕರು ಇತ್ತೀಚೆಗೆ ಮುಂದಿನ ಬಾರಿ ನಾವು ಮತ್ತೆ ಅಧಿಕಾರಕ್ಕೆ ಬರಲೇ ಬೇಕು ಎಂದು ಹಠಕ್ಕೆ ಬಿದ್ದಂತೆ ಕಾಣುತ್ತಿದೆ.

ಜಾಹೀರಾತು

ಆದ್ದರಿಂದಲೇ ಏನೋ, ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ಸೀರೆ, ಹಣ, ಮತ್ತಿತರ ಆಮೀಷಗಳನ್ನು ಚುನಾವಣೆಗೂ ಮುನ್ನವೇ ಜನರ ಮೇಲೆ ಪ್ರಭಾವ ಬೀರಲು ಮಂದಾಗಿದ್ದಾರೆ. ಚಿಕ್ಕಬಳ್ಳಾಪುರದ ಕೈ ಶಾಸಕ ಇದೀಗ ಸೀರೆ ಹಂಚುತ್ತಿರುವ ವೀಡಿಯೋ ಒಂದು ವೈರಲ್ ಹಾಗಿತ್ತು. ಇದು ಜನ ಸ್ಮರಣೆಯಿಂದ ಮರೆಯಾಗುವ ಮೋದಲೇ, ಮಂಗಳೂರಿನಲ್ಲಿಯೂ ಇಂತದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಮಂಗಳೂರಿನ ಸುರತ್ಕಲ್ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಇದೀಗ ಮತದಾರರಿಗೆ ಹಂಚುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲಾ ವಿವಾದವನ್ನೂ ಸಹ ಸೃಷ್ಠಿ ಮಾಡಿದೆ. ಇನ್ನೂ ಮೊಯ್ದಿನ್ ಬಾವ ಚುನಾವಣೆಗೆ ಮುನ್ನವೇ ವೋಟ್ ಬ್ಯಾಂಕಿಂಗ್ ಮಾಡುತ್ತಿದ್ದಾರೆಯೇ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಪ್ರಶ್ನಿಸುತ್ತಿದ್ದು, ಅವರು ಕಾರ್ಯಕರ್ತರೊಂದಿಗೆ ಸೇರಿಕೊಂಡು ಸೀರೆ ಹಾಗು ಇತರ ವಸ್ತುಗಳನ್ನು ಹಂಚುತ್ತಿರುವ ಬಗ್ಗೆ ಆರೋಪ ಕೇಳಿ ಬರುತ್ತಿದೆ. ಶಾಸಕ ಮೊಯ್ದಿನ್ ಬಾವ ಹಕ್ಕು ಪತ್ರ ವಿತರಣೆಯ ಸಂದರ್ಭದಲ್ಲೂ ಸೀರೆ ವಿತರಣೆ ಮಾಡಿದ್ದು, ಗುರುಪುರ ಮತ್ತು ಮಂಜೂರಿನಲ್ಲಿ ಸೀರೆ ವಿತರಣೆ ಮಾಡಿದ್ದಾರೆ ಎಂದೂ ಹಲವರು ಆರೋಪ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್