ಪುತ್ತೂರಿನ ಪ್ರತಿಷ್ಠತಿ ಎಸ್.ಡಿ.ಪಿ. ” ಕಲೋಪಾಸನಾ – 2020 ” ಸಾಂಸ್ಕೃತಿಕ ಹಬ್ಬದಲ್ಲಿ ಅಂತರಾಷ್ಟ್ರೀಯ ನೃತ್ಯ ಕಲಾವಿದೆ ವಿದುಷಿ ಕೆ.ಬೃಂದಾರವರಿಂದ ಭರತನಾಟ್ಯ ; ಇಂದು ಪೆರ್ಡೂರು ಮೇಳದವರಿಂದ ‘ ಚಂದ್ರಹಾಸ ‘ ಯಕ್ಷಗಾನ ಪ್ರದರ್ಶನ – ಕಹಳೆ ನ್ಯೂಸ್
ಪುತ್ತೂರು : ಪರ್ಲಡ್ಕದ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಆವರಣದಲ್ಲಿ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಅರ್ಪಿಸುವ ಕಲೋಪಾಸನಾ-2020 ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇ ದಿನವಾದ ಫೆ.9ರಂದು ಅಂತರಾಷ್ಟ್ರೀಯ ನೃತ್ಯ ಕಲಾವಿದೆ ಕರ್ನಾಟಕ ಕಲಾಶ್ರೀ ವಿದುಷಿ ಕೆ.ಬೃಂದಾ ಬೆಂಗಳೂರು ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಕಳೆದ 1 ದಶಕಗಳಿಂದ ನಿರಂತರವಾಗಿ ಅಂತರಾಷ್ಟ್ರೀಯ ಮಟ್ಟದ ಕಲಾವಿದರನ್ನು ಕಲೋಪಾಸನಾ ವೇದಿಕೆಯಲ್ಲಿ ಅನಾವರಣಗೊಳಿಸುತ್ತಾ ಬಂದಿರುವ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್‌ನ ಕಲೋಪಸನಾ ಕಾರ್ಯಕ್ರಮದ ಮೂಲಕ ಕರ್ನಾಟಕ ಸಂಗೀತವಷ್ಟೇ ಅಲ್ಲದೆ ತೆಂಕು, ಬಡಗು ಯಕ್ಷಗಾನ ಪ್ರದರ್ಶನವನ್ನೂ ಹಮ್ಮಿಕೊಳ್ಳುತ್ತಿದೆ. ಈ ಮೂಲಕ ಪುತ್ತೂರಿನ ಕಲಾಭಿಮಾನಿಗಳಿಗೆ ಅಂತಾರಾಷ್ಟ್ರೀಯ ಕಲಾವಿದರನ್ನು ಪರಿಚಯಿಸಿ ಸಂಗೀತದ ರಸದೌತಣ ನೀಡುವ ಕಾರ್ಯ ನಿರಂತರವಾಗಿ ನಡೆಸುತ್ತಾ ಬಂದಿದೆ.
ಫೆ.10ರಂದು(ಇಂದು) ಪೆರ್ಡೂರು ಮೇಳದಿಂದ ಯಕ್ಷಗಾನ ಪ್ರದರ್ಶನ :
ಪ್ರತೀ ವರ್ಷ ದೇಶಾಧ್ಯಂತ ಇರುವ ಅಂತರಾಷ್ಟ್ರೀಯ ಮಟ್ಟದ ಕಲಾವಿದರನ್ನು ಪುತ್ತೂರಿಗೆ ಆಹ್ವಾನಿಸಿ ಅವರ ಕಲಾಪ್ರತಿಭೆಯನ್ನು ಪುತ್ತೂರಿನ ಜನತೆಗೆ ಪರಿಚಯಿಸುವ ಕಾರ್ಯವೆಸಗುತ್ತಿರುವ ಕಲೋಪಾಸನಾದ 3ನೇ ದಿನದ ಕಾರ್ಯಕ್ರಮದ ಅಂಗವಾಗಿ ಫೆ.10ರಂದು ಸಂಜೆ 7 ಗಂಟೆಗೆ ಪೆರ್ಡೂರು ಮೇಳದವರಿಂದ `ಚಂದ್ರಹಾಸ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.