ಹಿರಿಯಡ್ಕ : ವ್ಯಕಿಯೊಬ್ಬನನ್ನು ಕಡಿದು ಕೊಲೆ ಮಾಡಿರುವ ರೀತಿಯಲ್ಲಿ ಶವ ಇಂದು ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಬೆಳ್ಳಂಪಳ್ಳಿ ಗ್ರಾಮದ ಸಮೀಪ ಕುಕ್ಕೆಹಳ್ಳಿ ಶವ ಪತ್ತೆಯಾಗಿದೆ.ಹಿರಿಯಡ್ಕ ಪೆÇಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ
ಕೊಲೆಯಾದವರು ಮಹಾರಾಷ್ಟ್ರದ ಮುಂಬಯಿ ಮಾಯಾ ಹೊಟೇಲ್ ನ ಮಾಲೀಕ ವಶಿಷ್ಠ ಯಾದವ್ ಎಂದು ತಿಳಿದು ಬಂದಿದೆ.ಹೊಟೇಲ್ ವ್ಯಾಪಾರದ ಹಣ ವಿಷಯದಲ್ಲಿ ಈ ಹಿಂದೆ ಸ್ನೇಹಿತರ ನಡುವೆ ಜಗಳ ನಡೆದಿತ್ತು.ಅದೇ ವಿಚಾರದಲ್ಲಿ ಹೊಟೇಲ್ ಮಾಲೀಕನನ್ನು ಮುಂಬಯಿಂದ ಊರಿಗೆ ಕರೆತಂದು ಸ್ನೇಹಿತರು ಕೊಲೆ ಮಾಡಿದ್ದಾರೆ.ಕೊಲೆ ಮಾಡಿದವರು ಆತ್ರಾಡಿಯವ ಮತ್ತು ಆತನ ಸ್ನೇಹಿತ ಸೇರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಮಾಯಾ ಹೊಟೇಲ್ ವಿಚಾರದಲ್ಲಿ ಸುಧೀರ್ ಎಂಬವರಿಗೆ ಹಲ್ಲೆಯಾಗಿತ್ತು.ಅವರು ಈಗಲೂ ಕೋಮಾದಲ್ಲಿ ಇದ್ದಾರೆ ಎನ್ನಲಾಗಿದೆ.ಕೊಲೆಯಾದ ಹೊಟೇಲ್ ಮಾಲೀಕ ವಶಿಷ್ಠ ಯಾದವ್ ಹಣದ ವಿಚಾರದಲ್ಲಿ ಮೋಸಗಾರ ಎನ್ನುವ ಆರೋಪ ಇತ್ತು ಎನ್ನಲಾಗಿದೆ.ಆತ ಹೊಟೇಲ್ ನಲ್ಲಿ ವ್ಯವಹಾರದಲ್ಲಿ ಅಡ್ವಾನ್ಸ್ ತೆಗೆದುಕೊಂಡ ಹಣ ವಾಪಸು ಕೊಡುತ್ತಿರಲಿಲ್ಲ,ಅದೇ ವಿಚಾರದಲ್ಲಿ ಕೆಲವರ ಬಳಿ ದ್ವೇಷ ಕಟ್ಟಿಕೊಂಡಿದ್ದ ಎನ್ನಲಾಗಿದೆ.ಆ ವಿಚಾರಕ್ಕೆ ಕೊಲೆ ಆಗಿರಬಹುದು ಎಂದು ಸಂಶಯ ವ್ಯಕ್ತವಾಗಿದೆ.
ಕೊಲೆ ಮಾಡಿದ ಆರೋಪಿಗಳನ್ನು ಹಿರಿಯಡ್ಕ ಪೆÇಲೀಸರು ಬಂಧಿಸಿದ್ದಾರೆ.ಪೆÇಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಪೆÇಲೀಸ್ ವಿಚಾರಣೆಯಲ್ಲಿ ಮತ್ತಷ್ಟು ವಿವರಗಳು ತಿಳಿದು ಬರಬೇಕಿದೆ.